ಗಾಳಿಗೆ ಧರೆಗುಳಿದ ಚೆಕ್‍ಪೋಸ್ಟ್ ಶೆಡ್

ನವಲಗುಂದ,ಏ18 : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಹೊರವಲಯದ ರೋಣ-ನರಗುಂದ ಕ್ರಾಸ್ ರಸ್ತೆ ಪಕ್ಕದಲ್ಲಿ ಹಾಕಿದ್ದ ಚೆಕ್ ಪೆÇೀಸ್ಟ್ ಬುಧವಾರ ಸಂಜೆ ಬೀಸಿದ ರಭಸದ ಗಾಳಿಗೆ ಧರೆಗುರುಳಿದೆ.

ಸಂಜೆ ಏಕಾ ಏಕಿಯಾಗಿ ಗುಡುಗು ಸಹಿತ ರಭಸದ ಗಾಳಿ ಬೀಸಿದ್ದರಿಂದ ತಗಡಿನ ಶೆಡ್ ಕಿತ್ತು ಬಿದ್ದಿದೆ. ಶೆಡ್ ಒಳಗೆ ಅಳವಡಿಸಿದ್ದ ಸಿಸಿ ಕ್ಯಾಮರಾ ಸೇರಿ ಕೆಲ ವಸ್ತುಗಳು ಹಾಳಾಗಿವೆ. ಗಾಳಿಗೆ ಶೆಡ್ ಮೇಲೇಳುವುದನ್ನು ಕಂಡ ಚುನಾವಣಾ ಸಿಬ್ಬಂದಿ ಹೊರಗಡೆ ಓಡಿ ಹೋಗಿದ್ದಾರೆ. ಯಾವುದೇ ಅಪಾಯ ಸಂಭವಿಸಿಲ್ಲ.

ಈಗಾಗಲೇ ನಿರ್ಮಿತಿ ಕೇಂದ್ರದವರೊಂದಿಗೆ ಚರ್ಚಿಸಿದ್ದು ಕೊಡಲೇ ಶೆಡ್ ಸರಿಪಡಿಸಲು ತಿಳಿಸಲಾಗಿದೆ ಎಂದು ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ತಿಳಿಸಿದ್ದಾರೆ.