ಗಾಲೀಬಸಾಬ ದೇವರ ಅಗಸಿಯನ್ನು ಎತ್ತರಿಸಲಾಗುವುದು; ಹಣಮಂತ ಹೂಗಾರ

ಆಲಮೇಲ :ಸೆ.25:ಪಟ್ಟಣದಲ್ಲಿ ಹಜರತ್ ಪೀರ್ ಗಾಲೀಬ ಶಹೀದ್ ದೇವರ ಅಗಸಿ ಪುರ್ನನಿರ್ಮಾಣ ಕಾಮಗಾರಿ ನಡೆಯುತ್ತಿದ್ದು. ಸದ್ಯ ಅಗಸಿಯ ಕಮಾನು ತುಂಬಾ ಕೆಳಮಟ್ಟದ್ದಾಗಿದು ಕಮಾನಿನ ಎತ್ತರ ಹೆಚ್ಚಿಸಬೇಕು ಎಂದು ಪಟ್ಟಣದ ವಿವಿಧ ಸಂಘಟನೆಗಳು ಮತ್ತು ಮುಖಂಡರು ಪಟ್ಟಣ ಪಂಚಾಯತಗೆ ಮನವಿಯನ್ನು ಸಲ್ಲಿಸಿದ್ದಾರೆ .
ನಾಗರಿಕರ ಮನವಿಗೆ ಓಗೋಟ್ಟು ಅಗಸಿಯನ್ನು ಎತ್ತರ ಮಾಡಲಾಗುವುದು ಎಂದು ಸಹಾಯಕ ಗುತ್ತಿಗೆದಾರರಾದ ಹಣಮಂತ ಹೂಗಾರ ಮತ್ತು ಸಂತೋಷ ಜರಕಾರ ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈಗ ನಿರ್ಮಾಣ ಮಾಡುತ್ತಿರುವ ದೇವರ ಅಗಸಿಯ ವಿಷಯದಲ್ಲಿ ಯಾರು ರಾಜಕೀಯ ಮಾಡಬೇಡಿ, ಎಲ್ಲರೂ ಸೇರಿ ಪಟ್ಟಣದ ದೇವರ ಅಗಸಿಯನ್ನು ನಿರ್ಮಾಣ ಮಾಡೋಣ ನಮ್ಮನ್ನು ಸಹರಿಸಿ ಈಗ ಇರುವ ಮೊತ್ತದಲ್ಲಿ ಅಗಸಿ ಕಾರ್ಯ ಮಾಡುವುದು ಕಷ್ಟಕರವಾಗಿದೆ ಎಲ್ಲರೂ ಸೇರಿ ಸರಕಾರ ಮೇಲೆ ಒತ್ತಡ ಹಾಕಿ ಇನ್ನು ಹೆಚ್ಚಿನ ಅನುದಾನ ತರಲು ಪ್ರಯತ್ನ ಮಾಡೋಣ ಎಂದು ಗುತ್ತಿಗೆದಾರ, ಆಲಮೇಲ ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷ ಹಣಮಂತ ಹೂಗಾರ ಹೇಳಿದರು. ಈ ಸಂದರ್ಭದಲ್ಲಿ ಚಂದು ಹಳೇಮನಿ ಉಪಸ್ಥಿತರಿದ್ದರು.