ಗಾರ್ಮೆಂಟ್ಸ್ ನೆಪದಲ್ಲಿ 12.37 ಲಕ್ಷ ರೂ. ವಂಚನೆ-ಆರೋಪ

ಕೋಲಾರ,ಸೆ,೨:ಕೋಲಾರ ಧರ್ಮರಾಯ ನಗರದ ವಾಸಿ ಜಾನ್ ಸಾಮುವೆಲ್ ಕಿಮ್ ಬಿನ್ ಜರ್ನಸ್.ಡಿ. ಎಂಬುವರು ಬೆಂಗಳೂರಿನ ಚಿಕ್ಕಬಾಣದವರದಲ್ಲಿದ್ದ ಅರ್ಧ ಎಕರೆ ವಿವಾದಿತ ಜಮೀನನ್ನು ನಿಮ್ಮ ಹೆಸರಿಗೆ ಮಾಡಿ ಕೊಡುವುದಾಗಿ ನಂತರ ಗಾರ್ಮೇಂಟ್ಸ್ ಮಾಡಿಸಿ ಕೊಡುವುದಾಗಿ ೧೫ ಲಕ್ಷ ರೂ ವಂಚಿಸಿದ್ದಾರೆ ಎಂದು ಬೆಂಗಳೂರಿನ ಕಾಡುಗೋಡಿ ಸಿದ್ದಾರ್ಥ ಬಡಾವಣೆಯ ಶಾಂತಕುಮಾರಿ ಎಂಬುವರು ಅರೋಪಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ನಮ್ಮ ಪಕ್ಷದ ಮನೆಯ ವಾಸಿ ಉಮಾಬಾಯಿ ಎಂಬುವರು ನ್ಯಾಷನಲ್ ಅಂಟಿ ಕ್ರೃಮ್ ಅಂಡ್ ಹ್ಯೋಮನ್ ರೈಟ್ಸ್ ಅಫ್ ಇಂಡಿಯ ಎಂಬ ಸಂಸ್ಥೆಯಲ್ಲಿ ನೀವು ಸದಸ್ಯೆಯಾದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ನ್ಯಾಯಾ ದೊರಕಿಸಿ ಕೊಡುತ್ತಾರೆ ಎಂದು ತಿಳಿಸಿ ನನ್ನಿಂದ ಸದಸ್ಯತ್ವಕ್ಕೆ ೪ ಸಾವಿರ ಪಡೆದು ನನಗೆ ಸದಸ್ಯತ್ವ ಕೊಡಿಸಿ ಗುರುತಿನ ಚೀಟಿಯನ್ನು ನೀಡಿದರು ಎಂದರು.
ಈ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಜಾನ್ ಸಾಮುವೆಲ್ ಕಿಮ್ ಜೆ. ಬಿನ್ ಜರ್ನಸ್.ಡಿ. ಎಂಬುವರು ನನ್ನ ಮೊಬೈಲ್‌ಗೆ ಕರೆ ಮಾಡಿ ನೀವು ನಮ್ಮ ಕಚೇರಿಗೆ ಬನ್ನಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿ ಕೊಡುತ್ತೇನೆ. ನಿಮ್ಮೊಂದಿಗೆ ಈ ವಿಷಯವಾಗಿ ಚರ್ಚಿಸ ಬೇಕೆಂದು ಎಂದು ಆಹ್ವಾನಿಸಿದರು, ನಗರದ ಆರ್.ಟಿ.ಓ.ಕಚೇರಿಯ ಸಮೀಪದಲ್ಲಿನ ಅವರ ಕಚೇರಿಗೆ ನಿಗಧಿತ ದಿನದಂದು ಹೋಗಿ ವಿವಾದಿತ ಜಮೀನಿನ ಸಮಸ್ಯೆಗಳನ್ನು ವಿವರಿಸಿದಾಗ ಅವರು ೫ ಲಕ್ಷ ಕೊಡಿ ಜಮೀನಿಗೆ ಎಲ್ಲಾ ದಾಖಲೆ ಪತ್ರಗಳನ್ನು ಮಾಡಿಸಿ ಕೊಡುತ್ತೇನೆ, ಈ ಜಮೀನು ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ಅಗುತ್ತದೆ ಎಂದು ನಂಬಿಸಿದರು. ನಾನು ಕಳೆದ ವರ್ಷ ಅಕ್ಟೋಬರ್ ೯ ರಂದು ಮತ್ತು ಡಿಸೆಂಬರ್ ೯ ರಂದು ಈ ಎರಡು ದಿನಾಂಕದಲ್ಲಿ ಒಟ್ಟು ೭,೨೮ ಲಕ್ಷರೂ ಪಡೆದು ಕೊಂಡರು, ಈ ಸಂದರ್ಭದಲ್ಲಿ ನನ್ನ ಸ್ನೇಹಿತರಾದ ಬಾಬು ಮತ್ತು ಗಜೇಂದ್ರಚಾರಿ ಇದ್ದರು. ಹಾಗೂ ನನ್ನ ಬ್ಯಾಂಕಿನ ಖಾತೆಯಿಂದ ವರ್ಗಾವಣೆ ಮಾಡಿರುವುದಾಗಿ ಸಾಕ್ಷೀಗಳನ್ನು ವಿವರಿಸಿದರು
ಅದರೆ ಅವರು ದಾಖಲೆಗಳನ್ನು ಮಾಡಿಸಿ ಕೊಡಲು ಪಡೆದಿದ್ದ ಎರಡು ತಿಂಗಳ ಅವಧಿ ಮುಗಿದ ನಂತರವು ದಿನಗಳು ಕಳೆಯುತ್ತಿದ್ದಂತೆ ನನಗೆ ಗಾರ್ಮೆಂಟ್ಸ್ ಪ್ಯಾಕ್ಟರಿ ಮಾಡಿಸಿ ಕೊಡುತ್ತೇನೆ ಎಂದು ದಿಕ್ಕು ತಪ್ಪಿಸಿ ಬೆಂಗಳೂರಿನ ನನ್ನ ಮನೆಯ ಮೇಲೆ ಬ್ಯಾಂಕಿನಲ್ಲಿ ಸಾಲವನ್ನು ಮಾಡಿಸಿ ಅದರ ಹಣವು ಸೇರಿದಂತೆ ೧೨,೩೭ ಲಕ್ಷ ರೂ ಅತನೆ ಪಡೆದು ಕೊಂಡಿದ್ದಾನೆ.
ನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದಾಗ ಅವರನ್ನು ಕರೆಸಿ ಹಣ ಕೊಡಿಸುವ ಮೂಲಕ ರಾಜಿ ಮಾಡಿಸುತ್ತೇವೆ ಎಂದು ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ನಾನು ಮಾನಸಿಕವಾಗಿ ತೀರ ನೊಂದಿದ್ದೇನೆ, ಇದರ ಜೂತೆಗೆ ನನ್ನ ಮನೆಯನ್ನು ಸಹ ಜಾನ್ ಸಾಮುವೆಲ್‌ಕಿಮ್ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾನೆ. ಇಷ್ಟೆಲ್ಲಾ ವಂಚಿಸಿದರು ಸಹ ಅರೋಪಿ ವಿರುದ್ದ ಪ್ರಕರಣ ದಾಖಲಿಸಿ ಕೊಂಡು ಕಾನೂನು ಪ್ರಕಾರ ಕ್ರಮ ಕೈಗೊಂಡು ತನಗೆ ನ್ಯಾಯಾ ದೊರಕಿಸಿ ಕೊಡ ಬೇಕೆಂದು ಮನವಿ ಮಾಡಿದರು,
ಪತ್ರಿಕಾ ಗೋಷ್ಠಿಯಲ್ಲಿ ಶಾಂತಕುಮಾರಿ ಅವರ ಸಹೋದರ ಸುಂದರ್ ರಾಜ್ ಹಾಗೂ ಕಿರಣ್ ಬಾಬು ಉಪ ಸ್ಥಿತರಿದ್ದರು.