ಗಾರಂಪಳ್ಳಿ ಸೇತುವೆ ಮೇಲೆ ಹರಿದ ನೀರು: ರಸ್ತೆ ಸಂಪರ್ಕ ಕಡಿತ

ಚಿಂಚೋಳಿ,ಜು.21- ತಾಲೂಕಿನ ಗಾರಂಪಳ್ಳಿ ಗ್ರಾಮದ ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿರುವ ಹಿನ್ನಲೆಯಲ್ಲಿ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಸತತ ಮಳೆಯಿಂದ ಮತ್ತು ನಾಗರಾಳ ಜಲಾಶಯದಿಂದ ನೀರು ಬಿಟ್ಟಿರುವ ಹಿನ್ನಲೆಯಲ್ಲಿ ಇಲ್ಲಿನ ಗಾರಂಪಳ್ಳಿ ಗ್ರಾಮದ ಸೇತುವೆ ಸಂಪೂರ್ಣವಾಗಿದ್ದು, ನಿರಿನಿಂದ ಸೇತುವೆ ಮುಳುಗಿರುತ್ತದೆ.
ಗ್ರಾಮದ ಜನರಿಗೆ ಈ ಮಾರ್ಗದ ರಸ್ತೆ ಸಂಪರ್ಕ ಕಡಿತದಿಂದಾಗಿ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಗಾರಂಪಳ್ಳಿ ಗ್ರಾಮಸ್ಥರು, ಕಳೆದ ಸರ್ಕಾರ ಮನವಿ ಮಾಡಿ ಇಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಬೇಕೆಂದು ಅನೇಕ ಬಾರಿ ಮನವಿ ಮಾಡಿದರು ಕೂಡ ಗಾರಂಪಳ್ಳಿ ಗ್ರಾಮಕ್ಕೆ ಹೊಸ ಸೇತುವೆ ಕಾಮಗಾರಿ ಮಂಜೂರು ಮಾಡಿಲ್ಲ ಪ್ರತಿ ವರ್ಷ ಇಂತಹ ಸಮಸ್ಯೆ ಹೆಚ್ಚುತ್ತಿದೆ.
ಹೆಚ್ಚಿನ ಮಳೆಯಾದರೂ ಹಾಗೂ ನಾಗರಾಳ ಜಲಾಶಯದಿಂದ ನೀರು ಬಿಟ್ಟರೂ ಕೂಡ ಗ್ರಾಮದ ಸೇತುವೆ ಮುಳುಗಿ ಹೋಗುತ್ತೆ.
ಗಾರಂಪಳ್ಳಿ ಗ್ರಾಮಕ್ಕೆ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಮಂಜೂರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ