ಚಿಂಚೋಳಿ: ಎ.3:ತಾಲೂಕಿನ ಗಾರಂಪಳ್ಳಿ ಗ್ರಾಮದ ಶ್ರೀ ನಂದಿ ಬಸವೇಶ್ವರ ದೇವಸ್ಥಾನದ ಗಲ್ಲಾಪೆಟ್ಟಿಗೆ ಭಾನುವಾರ ತಡ ರಾತ್ರಿ ಕಿಡಿಗೇಡಿಗಳು ಕಳವು ಮಾಡಿದ್ದಾರೆ.
ಬೆಳಗ್ಗೆ ಯಥಾಪ್ರಕಾರ ಪೂಜೆ ಮಾಡಲು ದೇವಸ್ಥಾನ ಪೂಜಾರಿ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲದೆ ಸೋಮವಾರ ದೇವಸ್ಥಾನದಲ್ಲಿ ಭಕ್ತರು ರುದ್ರಾಭಿಷೇಕ ಕೂಡ ಇತ್ತು. ಪೂಜಾರಿ ದೇವಸ್ಥಾನದ ಒಳಗೆ ಹೋಗಬೇಕೆಂಬುವಷ್ಟರಲ್ಲಿ ದೇವಸ್ಥಾನಕ್ಕೆ ಹಾಕಿದ ನಾಲ್ಕು ಬೀಗದ ಕೈಯನ್ನು ಒಡೆದು ಗಲ್ಲಾಪೆಟ್ಟಿಗೆ ತೆಗೆದುಕೊಂಡು ಹೋಗಿದ್ದಾರೆ. ಇದೇ ಸ್ಥಳದಲ್ಲಿ ಗಲ್ಲಾಪೆಟ್ಟಿಗೆ ಕಳೆದ ಭಾನುವಾರ ತಡರಾತ್ರಿ ಇದೇ ಗಲ್ಲಾಪೆಟ್ಟಗೆ ಕಳವು ಮಾಡಲು ಯತ್ನಿಸಿದ್ದರು. ಈ ಕುರಿತು ಚಿಂಚೋಳಿ ಠಾಣೆಗೆ ದೂರು ಕೂಡ ನೀಡಲಾಹಿತ್ತು. ಇದನ್ನೆ ಸಮಯ ಸಾಧಿಸಿಕೊಂಡ ಕಿಡಿಗೇಡಿಗಳು ಭಾನುವಾರ ತಡರಾತ್ರಿ ದೇವಸ್ಥಾನದ ಒಳಗೆ ಇರಿಸಲಾಗಿದ್ದ ಪೆಟ್ಟಿಗೆಯನ್ನು ಹೊತ್ತು ಕೊಂಡು ಹೋದ ಘಟನೆ ತಿಳಿಯುತ್ತಲೇ ದೇವಸ್ಥಾನದ ಎದುರು ಗ್ರಾಮಸ್ಥರು ಜಮಾವಣೆಗೊಂಡು. ಘಟನಾ ಸ್ಥಳಕ್ಕೆ ಪೆÇಲೀಸರು ಬರುವವರೆಗೆ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಠಾಣೆಗೆ ಮಾತನಾಡಿ ವಿಷಯ ತಿಳಿಸಿದ ತಕ್ಷಣ ಬರುವುದಗಾಗಿ ಹೇಳಿ. ಪಿಎ??? ಮಹಿಬೂಬಲಿ ತಮ್ಮ ತಂಡದೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಕ್ಷಣ ಕಿಡಿಗೇಡಿಗಳನ್ನು ಶೀಘ್ರ ಬಂಧಿಸುವುದಾಗಿ ಹೇಳಿ ದೇವಸ್ಥಾನದ ಸುತ್ತಲು ಎರಡು ರೌಂಡ ಹಾಕಿ ಹೋದರು.
ಈ ಕುರಿತು ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಸ್ಥಾನದ ಪೂಜೆ ವಿಳಂಬ
ಪ್ರತಿನಿತ್ಯ ಬೆಳಗ್ಗೆ ನಡೆಯಬೇಕಿದ್ದ ಪೂಜೆ ದೇವಸ್ಥಾನದ ಗಲ್ಲಾಪೆಟ್ಟಿಗೆ ಕಳವು ಆಗಿದ್ದರಿಂದ ಸೋಮವಾರ ನಡೆಯಬೇಕಿದ್ದ ಪೂಜೆ ಮಧ್ಯಾಹ್ನ 2ಕ್ಕೆ ನೆರವೇರಿತು.
ಪದೇ ಪದೆ ಗಲ್ಲಾಪೆಟ್ಟಿಗೆ ಕಳವಿಗೆ ಯತ್ನ
ಗ್ರಾಮದಲ್ಲಿ ಪದೇ ಪದೆ ಗಲ್ಲಾಪೆಟ್ಟಿಗೆ ಕಳವು ಮಾಡುತ್ತಿದ್ದು, ಇದನ್ನು ಪೆÇಲೀಸರು ಗಂಭೀರವಾಗಿ ಪರಿಗಣಿಸಿ ಕಿಡಿಗೇಡಿಗಳಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.