ಚಿಂಚೋಳಿ,ಜೂ.7- ಸಾರಿಗೆ ಸಂಸ್ಥೆಯ ಬಸ್ ಕಾಣದ ಊರು ತಾಲೂಕಿನ ಗರಂಪಳ್ಳಿ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ, ಈ ಗ್ರಾಮಕ್ಕೆ ಸರಕಾರಿ ಸಾರಿಗೆ ಬಸ್ ವ್ಯವಸ್ಥೆ ಇಲ್ಲಿಯವರೆಗೂ ಆಗಿರಲಿಲ್ಲಾ, ಈ ಸಮಸ್ಯೆ ಅರಿತ ಶಾಸಕರು, ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಿ, ಕೂಡಲೇ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು,
ಶಾಸಕರ ಸೂನೆಯಂತೆ ಗುರಂಪಳ್ಳಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಮೊದಲಬಾರಿಗೆ ಗ್ರಾಮಕ್ಕೆ ಬಂದ ಬಸ್ ಅನ್ನು ಹಸರಗುಂಡಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರ್ವತಕುಮಾರ ದೇಸಾಯಿ, ಅವರು ಬಸ್ಸಿಗೆ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಚಿಂಚೋಳಿಯ ಬಸ್ ಡಿಪೆÇೀ ಮ್ಯಾನೇಜರ್ ಅಶೋಕ್ ಪಾಟೀಲ್, ಬಿಜೆಪಿ ಪಕ್ಷದ ತಾಲೂಕ ವಕ್ತಾರಾದ ಶ್ರೀಮಂತ ಬಿ ಕಟ್ಟಿಮನಿ, ಬಿಜೆಪಿ ಪಕ್ಷದ ಮುಖಂಡರಾದ ಕೆ ಎಂ ಬಾರಿ, ಅಮರ ಲೊಡ್ಡನುರ, ಗ್ರಾಮದ ಮುಖಂಡರಾದ ಇಸಾಮೋದ್ದಿನ, ಸಮ್ಮದ್, ದಶರಥ್ ದಳಪತಿ, ಹಯ್ಯಾತಲಿ, ಆನಂದ, ಮೈ ಮೈನೋದ್ದಿನ ಶಾಮಿನ, ಶಿವಕುಮಾರ್, ಮತ್ತು ಅನೇಕ ಗ್ರಾಮಸ್ಥರು ಇದ್ದರು