ಗಾರಂಪಳ್ಳಿ ಗ್ರಾಪಂ ಹಳ್ಳಿಗಳನ್ನು ಒಂದೆ ತಾಪಂ ಕ್ಷೇತ್ರಕ್ಕೆ ಸೇರಿಸಿ

ಚಿಂಚೋಳಿ,ಏ.4- ತಾಲೂಕಿನ ತಾಲೂಕ ಪಂಚಾಯತ ಕ್ಷೇತ್ರಗಳ ಪುನರ ವಿಂಗಡಣೆಯಲ್ಲಿ ಗಾರಂಪಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 4 ಹಳ್ಳಿಗಳಲ್ಲ್ಲಿ ಗಾರಂಪಳ್ಳಿ, ಯಂಪಳ್ಳಿ ಹಾಗೂ ಗೌಡನಹಳ್ಳಿ ಈ 3 ಹಳ್ಳಿಗಳನ್ನು ಕ್ಷೇತ್ರ ವಿಂಗಡಣೆಯಲ್ಲಿ ಹಸರಗುಂಡಗಿ ತಾಲೂಕ ಪಂಚಾಯತಗೆ ಸೇರ್ಪಡೆ ಮಾಡಲಾಗಿದೆ ಅಲ್ಲದೇ ಹೂಡದಳ್ಳಿ ಗ್ರಾಮವನ್ನು ಕನಕಪುರ ತಾಲೂಕ ಪಂಚಾಯತಗೆ ಸೇರ್ಪಡೆ ಮಾಡಲಾಗಿದೆ, ಅವೈಜ್ಞಾನಿಕವಾಗಿರುವ ಈ ಕ್ಷೇತ್ರವಿಂಗಡಣೆಯನ್ನು ಸರಿಪಡಿಸುವಂತೆ ಗಾರಂಪಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷೆ ಮಾಯಾದೇವಿ ಮಹೇಶ ಗುತ್ತೇದಾರ ಯಂಪಳ್ಳಿ ನೇತೃತ್ವದ ನಿಯೋಗ ಚಿಂಚೋಳಿ ತಹಸಿಲ್ದಾರ್ ಅರುಣ ಕುಮಾರ ಕುಲಕರ್ಣಿ ಅವರನ್ನು ಭೇಟಿ ಮಾಡಿ ಗಾರಂಪಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ನಾಲ್ಕು ಹಳ್ಳಿಗಳು ಒಂದೇ ತಾಲೂಕ ಪಂಚಾಯತಗೆ ಸೇರ್ಪಡೆ ಮಾಡಬೇಕು ಎಂದು ಮನವಿ ಪತ್ರ ಸಲ್ಲಿಸಿದೆ.
ಈ ಸಂದರ್ಭದಲ್ಲಿ. ಗಾರಂಪಳ್ಳಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ರಾಜಕುಮಾರ ತಳವಾರ್ ಗೌಡನಹಳ್ಳಿ. ಗ್ರಾಮ ಪಂಚಾಯತ ಸದಸ್ಯರಾದ ಪವನ ಕುಮಾರ ಪಾಟೀಲ ಹೂಡದಳ್ಳಿ. ಮೋಹನ ಗುತ್ತೇದಾರ ಗಾರಂಪಳ್ಳಿ. ಮಾರುತಿ ಬೇಡರ. ಗಾರಂಪಳ್ಳಿ ಗ್ರಾಮದ ಮುಖಂಡರು ಹನುಮಾನ. ತುಕ್ಕಪ್ಪ ಪೂಜಾರಿ. ಹೂಡದಳ್ಳಿ ಗ್ರಾಮದ ಮುಖಂಡರಾದ ನಾಗೇಂದ್ರಪ್ಪ ಕೊಂಡ. ಭೀಮಯ್ಯ ಗುತ್ತೇದಾರ. ಶಿವಕುಮಾರ ಬಿರಾದರ. ಕೈಲಾಸ್ ಗೌಡ. ಯಂಪಳ್ಳಿ ಗ್ರಾಮದ ಮುಖಂಡರಾದ ವಸಂತ ಮಾಳಗಿ. ಇದ್ದರು