ಗಾರಂಪಳ್ಳಿ ಗ್ರಾಪಂ ಪ್ರಥಮ ಸಾಮಾನ್ಯ ಸಭೆ

ಚಿಂಚೋಳಿ,ಫೆ.23- ತಾಲೂಕಿನ ಗಾರಂಪಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷೆ ಮಾಯಾದೇವಿ ಮಹೇಶ ಗುತ್ತೇದಾರ ಅವರ ಅಧ್ಯಕ್ಷತೆಯಲ್ಲಿಂದು ಗ್ರಾಪಂ ಪ್ರಥಮ ಸಾಮಾನ್ಯ ಸಭೆ ಜರಗಿತು.
ಈ ಸಭೆಯಲ್ಲಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.
ಸಭೆಯಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ರಾಜಕುಮಾರ ತಳವಾರ. ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಯಾದ ಮಾರುತಿ. ಗ್ರಾಮ ಪಂಚಾಯತ ಸದಸ್ಯರಾದ ಮೋಹನ್ ಗುತ್ತೇದಾರ. ಬಸವರಾಜ ದೇಶಮುಖ, ಪವನ ಪಾಟೀಲ, ಮಾರುತಿ ಬೇಡರ, ಲಕ್ಷ್ಮೀಕಾಂತ ಗೌನಳ್ಳಿ, ರವಿಗೌಡ ಅಲ್ಲಾಪುರ, ಬಕ್ಕಮ್ಮ ಎಮ್ಮೇರ. ಶಕುಂತಲಾ ಪಾಟೀಲ. ಮಹಾದೇವಿ ಮುತ್ತಂಗಿ. ಚಂದ್ರಕಲಾ ಭೋವಿ, ಮಲ್ಲಮ್ಮ ಮಾಳಗಿ ಮತ್ತು ಗ್ರಾಮ ಪಂಚಾಯತ ಕಾರ್ಯದರ್ಶಿ ಶ್ವೇತಾ ಗುತ್ತೇದಾರ, ಗ್ರಾಮ ಪಂಚಾಯತ ಸಿಬ್ಬಂದಿಗಳು ಇದ್ದರು.