ಗಾರಂಪಳ್ಳಿ: ಅಸ್ಪೃಶ್ಯತೆ ನಿರ್ಮೂಲನೆ ಬೀದಿನಾಟಕ ಪ್ರದರ್ಶನ

ಚಿಂಚೋಳಿ,ಫೆ.23- ತಾಲೂಕಿನ ಗಾರಂಪಳ್ಳಿ ಗ್ರಾಮದಲ್ಲಿ ಜಿ.ಪಂ ಮತ್ತು ಕಂದಾಯ ಇಲಾಖೆ ಹಾಗೂ ಮಾತೋಶ್ರೀ ನರಸಮ್ಮಾ ಗ್ರಾಮೀಣ ಮಹಿಳಾ ವಿವಿಧೋದ್ದೇಶ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಅಸ್ಪೃಶ್ಯತೆ ನಿರ್ಮೂಲನೆ ಬೀದಿನಾಟಕ ಪ್ರದರ್ಶನಕ್ಕೆ ನಿವೃತ್ತ ಅರಣ್ಯ ಇಲಾಖೆಯ ಅಧಿಕಾರಿಗಳಾದ ಹಣಮಂತಪ್ಪ ಚಾಲನೆ ನೀಡಿದರು.
ರಾಷ್ಟ್ರಕ್ಕೆ ಸ್ವಾತಂತ್ರ್ಯ ಸಿಕ್ಕು 8 ದಶಗಳಾದರೂ ಸಹಿತ ಇಲ್ಲಿ ಅಸ್ಪೃಶ್ಯತೆ ಜೀವಂತವಾಗಿರುವುದು ವಿಷಾಧನೀಯವಾಗಿದೆ ಹಾಗೂ ಬಸವಾದಿ ಶರಣರು ಜನಸಾಮಾನ್ಯರಿಗೆ ಅರ್ಥವಾಗುವಂತಹ ಆಡುಭಾಷೆಯಲ್ಲಿ ವಚನಗಳ ಮೂಲಕ ಸಮಾನತೆಗಾಗಿ ಶ್ರಮಿಸಿದರು ಎಂದು ಅವರು ಹೇಳಿದರು.
ಡಾ.ಬಿ.ಆರ್ ಅಂಬೇಡ್ಕರ್ ಸಂವಿಧಾನದಲ್ಲಿ ಅಳವಡಿಸಿ ಕಾನೂನು ಮಾಡಿದ್ದಾರೆ ಆದರು ಸಹಿತ ಸಮಾಜದಲ್ಲಿ ಅಸ್ಪೃಶ್ಯತೆ ಜೀವಂತವಿರುವುದರಿಂದ ಕಂಡುಬರುತ್ತಿದೆ. ಸರ್ಕಾರ ಸಂಘ ಸಂಸ್ಥೆಗಳ ಮೂಲಕ ವಿವಿದ ಗ್ರಾಮಗಳಲ್ಲಿ ಈ ಪಿಡುಗಿನ ಕುರಿತು ವಿಚಾರ ಸಂಕಿರಣ. ಬೀದಿನಾಟಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸಮಾಜದಲ್ಲಿ ನಾವೆಲ್ಲರು ಒಂದೇ ಮೇಳು ಕೀಳು ಅಲ್ಲ ಎಲ್ಲರೂ ಸಹೋದರಂತೆ ಬಾಳಿದರೆ ಮಾತ್ರ್ರ ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ನಿರ್ಮೂಲನೆವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಮಾಯದೇವಿ ಮಹೇಶ ಉಪಾದ್ಯಕ್ಷರಾದ ರಾಜಕುಮಾರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಮಾರುತಿ. ಗ್ರಾಮದ ಮುಖಂಡರಾದ ಚಂದ್ರಶೇಖರ ಗುತ್ತೆದಾರ್. ಬಾಬುರಾವ ಬುಳ್ಳಾ. ಮೋಹನ. ಬಸವರಾಜ. ಚಂದ್ರಕಲಾ ಹಣಮಂತ. ಜಗನ್ನಾಥ. ಸೋಮು. ಮಾರುತಿ. ಮಲ್ಲಮ್ಮಾ. ಪವನಕುಮಾರ. ಮಾಹದೇವಿ. ಮಾರುತಿ ಗಂಜಗಿರಿ. ಉಮೇಶ ದೋಟಿಕೊಳ. ತಿಪ್ಪಣ್ಣಾ ತಾಜಲಪೂರ. ಗೋಪಾಲ್ ಪೂಜಾರಿ. ಮೌನೇಶ್ ಮುಸ್ತರಿ. ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.