ಗಾರಂಪಳ್ಳಿಯಲ್ಲಿ ಆರೋಗ್ಯ ಶಿಬಿರ ಯಶಸ್ವಿ

ಚಿಂಚೋಳಿ,ಏ 20: ಕ್ಯಾಲ್ಸಿಯಂಯುಕ್ತ ಪದಾರ್ಥ ದಿನನಿತ್ಯ ಸೇವನೆ ಮಾಡುವುದರಿಂದ ಮೊಳಕಾಲು ನೋವು ಸೇರಿ ಇತರೆ ಕಾಯಿಲೆಯಿಂದ ನಾವು ದೂರ ಉಳಿಯಲು ಸಾಧ್ಯ ಎಂದು ಕಲಬುರಗಿ ಬಸವೇಶ್ವರ ಆಸ್ಪತ್ರೆಯ ಖ್ಯಾತ ತಜ್ಞ ವೈದ್ಯ ಡಾ. ಆನಂದ ಗಾರಂಪಳ್ಳಿ ಹೇಳಿದರು.
ತಾಲೂಕಿನ ಗಾರಂಪಳ್ಳಿ ಗ್ರಾಮದಲ್ಲಿ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಬಸವೇಶ್ವರ ಭೋದನಾ ಮತ್ತು ಸಾರ್ವಜನಿಕ ಆಸ್ಪತ್ರೆ ಮತ್ತು ಬಸವೇಶ್ವರ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು. ದಿನನಿತ್ಯ ಹಸಿ ತರಕಾರಿ ಮತ್ತು ಮೊಳಕೆ ಕಾಳು ಸೇವನೆ ಮಾಡುವುದನ್ನು ರೂಢಿಸಿಕೊಳ್ಳಬೇಕು.ಪ್ರತಿನಿತ್ಯ ವ್ಯಾಯಾಮ ಮತ್ತು ದೇಹ ದಂಡಿಸಬೇಕು ಎಂದು ಸಲಹೆ ನೀಡಿದರು. ಡಾ.ಶರಣು ನಂದ್ಯಾಳ, ಡಾ. ನವೀನ, ಡಾ.ಚಾರುಲತಾ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ದೇವಿಂದ್ರಪ್ಪ ಅವಂಟಿ ಮಾತನಾಡಿದರು.ನಿಡಗುಂದಾ ಕಂಚಾಳಕುಂಟಿ ಮಠದ ಕರುಣೇಶ್ವರ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಕರಬಸಯ್ಯ ಸ್ವಾಮಿ ಪ್ರಾರ್ಥನಾ ಗೀತೆ ಹಾಡಿದರು. ಬಸವೇಶ್ವರ ದೇವಸ್ಥಾನ ಟ್ರಸ್ಟ ಅಧ್ಯಕ್ಷ ಗುರುಪ್ರಸಾದ ಅಂಬಲಗಿ ನಿರೂಪಿಸಿದರು. ಚನ್ನಬಸಯ್ಯ ಗುರುವಿನ ಸ್ವಾಗತಿಸಿದರು. ಗೋಪಾಲ ಎಂ.ಪಿ. ವಂದಿಸಿದರು. ಚಂದ್ರಕಾಂತ ಅಂಬಲಗಿ,
ಸಂಗನಬಸಯ್ಯ ಮಠ, ಬಸವರಾಜ ದೇಶಮುಖ, ಈಶಪ್ಪ ಮಗಿ, ಹಣಮಂತ ಭೋವಿ, ಬಸವರಾಜ ಅಂಬಲಗಿ, ಬಂಡಪ್ಪ ಅಂಬಲಗಿ, ಸಂಗಪ್ಪ ಚಿಂಚೋಳಿ, ಮೊನೇಶ ಮುಸ್ತಾರಿ, ಮೋಹನ ಗುತ್ತೇದಾರ, ಶಿವು ಮಲ್ಕೂಡ, ಅರುಣ ಅಂಬಲಗಿ ಇತರರಿದ್ದರು.