ಗಾಯಿತ್ರಿ ಭವನಕ್ಕೆ ೨೫ ಲಕ್ಷ ನೆರವು – ಭರವಸೆ

ಬ್ರಾಹ್ಮಣ ಸಮಾಜ : ಬಡ ಬ್ರಾಹ್ಮಣರಿಗೆ ಕಿಟ್ ವಿತರಣಾ ಕಾರ್ಯಕ್ರಮ
ರಾಯಚೂರು.ನ.೦೭- ಬ್ರಾಹ್ಮಣ ಸಮಾಜದಲ್ಲಿ ಕಡು ಬಡವರಿದ್ದು, ಇವರಿಗೆ ಅನುಕೂಲವಾಗಲೆಂದು ರಾಜ್ಯ ಸರ್ಕಾರ ಅನೇಕ ಯೋಜನೆ ರೂಪಿಸಿದ್ದು, ಇದರ ಲಾಭ ಪಡೆಯುವಂತೆ ಸಮಾಜದ ಆರ್ಥಿಕವಾಗಿ ಹಿಂದುಳಿದ ಜನರಿಗೆ ಶಾಸಕ ಡಾ.ಶಿವರಾಜ ಪಾಟೀಲ್ ಮನವಿ ಮಾಡಿದರು.
ಅವರಿಂದ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ನಿರ್ದೇಶಕ ಜಗನ್ನಾಥ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ನೀಡಲಾಗುವ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಬ್ರಾಹ್ಮಣರ ಬಡವರ ಕಷ್ಟಗಳನ್ನು ಮನವರಿಕೆ ಮಾಡಿಕೊಂಡ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಈ ಬಡ ಬ್ರಾಹ್ಮಣರ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಚಿಸಿದರು. ಈ ಮಂಡಳಿಯ ಮೂಲಕ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಈ ಕಿಟ್ ವಿತರಿಸುವ ಮೂಲಕ ಬಡವರಿಗೆ ನೆರವಾಗಿದೆ. ವಿದ್ಯಾಭ್ಯಾಸಕ್ಕಾಗಿ ಮಂಡಳಿಯಿಂದ ಅನೇಕ ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಇದರ ಲಾಭ ಪಡೆಯುವಂತೆ ಅವರು ಮನವಿ ಮಾಡಿದ ಅವರು, ಭವನ ನಿರ್ಮಾಣಕ್ಕೆ ೨೫ ಲಕ್ಷ ನೆರವು ನೀಡುವುದಾಗಿ ಹೇಳಿದರು.
ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರು ಹಾಗೂ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ಜಗನ್ನಾಥ ಕುಲಕರ್ಣಿ ಅವರು ಮಾತನಾಡುತ್ತಾ, ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ರಾಜ್ಯ ಸರ್ಕಾರ ಅನೇಕ ಯೋಜನೆಗಳ ಮೂಲಕ ಬ್ರಾಹ್ಮಣರಿಗೆ ನೆರವಾಗುತ್ತಿದೆಂದು ಹೇಳಿದರು. ಶಾಸಕರು ಸ್ಥಳೀಯವಾಗಿ ಸಮುದಾಯದ ಅನುಕೂಲಕ್ಕಾಗಿ ಶ್ರಮಿಸುತ್ತಿರುವುದನ್ನು ಶ್ಲಾಘೀಸಿದರು.ಕರ್ನಾಟಕ ರಾಜ್ಯ ಭ್ರಾಹ್ಮಣ ಅಭಿವೃದ್ಧಿ ಮಂಡಳಿ ಯ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ಮೂರ್ತಿಯವರ ಅವಿರತ ಶ್ರಮ ಹಾಗೂ ಪ್ರಯತ್ನದಿಂದ ಕರೋನ ಮಹಾಮಾರಿಯಿಂದ ಅನೇಕ ಬ್ರಾಹ್ಮಣ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಲುಕಿದ್ದು ಅಂತಹ ಬಡ ಕುಟುಂಬಗಳಿಗೆ ದಿನಸಿ ಆಹಾರ ಕಿಟ್ ಗಳನ್ನು ತರುವಲ್ಲಿ ಅಧ್ಯಕ್ಷರ ಕಾರ್ಯವನ್ನು ಪ್ರಶಂಸಿದರು, ಮತ್ತು ಪ್ರತಿಯೊಬ್ಬ ಬಡ ಬ್ರಾಹ್ಮಣ ವಿದ್ಯಾರ್ಥಿಗಳು ಈಡಬ್ಲ್ಯೂಎಸ್ ಸರ್ಟೀಫಿಕೇಟ್ ತೆಗೆದುಕೊಳ್ಳಬೇಕು ಅಭಿವೃದ್ಧಿ ಮಂಡಳಿ ಯ ಅನೇಕ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭ ದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಯ ನಿರ್ದೇಶಕರಾದ ಶ್ರೀ ಜಗನ್ನಾಥ ಕುಲಕರ್ಣಿ ವಕೀಲರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಯಚೂರು ನಗರಾಧ್ಯಕ್ಷ ರಾದ ಶ್ರೀ ಗುರುರಾಜ ಚಾರ್ಯಜೋಷಿ ತಾಳಿಕೋಟೆ, ಶ್ರೀ ಶಾಮಚಾರ್ ಗಾಣದಾಳ ,ಡಿ.ಕೆ.ಮುರಳೀಧರ,.ಪಪ್ರಕಾಶ್ ಆಲಂಪಲ್ಲಿ ಶ್ರೀ ತಿರುಮಲರಾವ್ ಕುಲಕರ್ಣಿ ಗಾಣಧಾಳ, ನರಸಿಂಹ ಮೂರ್ತಿ ಕುಲಕರ್ಣಿ,ಮೋಹನ್ ದೇವರು,ಹನುಮಂತ ರಾವ್ ಕಲ್ಲೂರಕರ್ , ಗೋಪಾಲಕೃಷ್ಣ ತಟ್ಟಿ,, ಪ್ರವೀಣ್ ಕುಮಾರ್ ಜಾಹಗೀರ್ದಾರ್ ರಮೇಶ್ ಕುಲಕರ್ಣಿ, ಹನುಮೇಶ ಮಾನ್ವೀಕರ್ ಹಾಗೂ ಭ್ರಾಹ್ಮಣ ಸಮಾಜದ ಇನ್ನು ಅನೇಕ ಗಣ್ಯರು ಉಪಸ್ಥಿತರಿದ್ದರು.