ಗಾಯತ್ರಿ ಸಿದ್ದೇಶ್ವರ್ ಪರ ರೋಡ್ ಶೋ


ಸಂಜೆವಾಣಿ ವಾರ್ತೆ
ದಾವಣಗೆರೆ. ಮೇ.೬; ದಾವಣಗೆರೆ ಲೋಕಸಭಾ ಕ್ಷೇತ್ರ ಹಿಂದುತ್ವದ ಭದ್ರಕೋಟೆಯಾಗಿದೆ ರಾಜ್ಯದಲ್ಲಿ ಹಿಂದುತ್ವದ ಅಲೆ ಪ್ರಾರಂಭವಾಗಿದ್ದೇ ದಾವಣಗೆರೆಯಿಂದ ಹಾಗಾಗಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಗೆಲುವು ಶತಸಿದ್ದ ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ‌ ರವಿ ವಿಶ್ವಾಸ ವ್ಯಕ್ತಪಡಿಸಿದರು.ದಾವಣಗೆರೆಯಲ್ಲಿ ಬಿಜೆಪಿ‌ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಪರ ರೋಡ್ ಶೋ ಮೂಲಕ ಮತಯಾಚನೆ ಮಾಡಿ‌ ಮಾಧ್ಯಮದವರೊಂದಿಗೆ‌ ಮಾತನಾಡಿದ ಅವರು ದಾವಣಗೆರೆ ಬಿಜೆಪಿ ಭದ್ರಕೋಟೆಯಾಗಿಯೇ ಉಳಿಯಲಿದೆ .ಜನ ಮತ್ತೊಮ್ಮೆ ಮೋದೀಜಿಯವರನ್ನು ಪ್ರಧಾನಿಯಾಗಿಸಲು‌  ಬಯಸಿದ್ದಾರೆ ಹಾಗಾಗಿ ಬಿಜೆಪಿ ಅಭ್ಯರ್ಥಿ ಗೆಲುವು ಶತಸಿದ್ದ.ಪ್ರಸ್ತುತ ವಾತಾವರಣ ಗಮನಿಸಿದರೆ ಬಿಜೆಪಿ ಗೆಲುವು ಪಡೆಯಲಿದೆ ಎಂಬುದು ಗೋಚರಿಸುತ್ತದೆ ಎಂದರು.ಮಾಜಿ ಸಚಿವ ಭೈರತಿ ಬಸವರಾಜ್ ಮಾತನಾಡಿ ಖಂಡಿತವಾಗಿ ಗಾಯತ್ರಿ ಸಿದ್ದೇಶ್ವರ್ ಗೆಲುವು ಪಡೆಯಲಿದ್ದಾರೆ.ಕಳೆದ ಬಾರಿ ಜಿ.ಎಂ ಸಿದ್ದೇಶ್ವರ್ ಜಯಭೇರಿ ಬಾರಿಸಿದಂತೆ ಈ‌ಬಾರಿ ಗಾಯತ್ರಿ ಸಿದ್ದೇಶ್ವರ್ ಗೆಲ್ಲುವ ವಿಶ್ವಾಸವಿದೆ.ರಾಜ್ಯದಲ್ಲಿ ೨೮  ಸ್ಥಾನ ಗೆಲ್ಲುವ ವಿಶ್ವಾಸವಿದೆ.ಜನರ ಉತ್ಸಾಹ,ಪ್ರೀತಿ ನೋಡಿದರೆ ಬಿಜೆಪಿ ಅಭ್ಯರ್ಥಿ ಅಧಿಕ‌ಮತಗಳಿಂದ ಗೆಲ್ಲಲಿದ್ದಾರೆ ಎಂದರು.
ಈ ವೇಳೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು,ಅಭಿಮಾನಿಗಳು ಇದ್ದರು.