ಗಾಯಗೊಂಡ ಯುವಕನಿಗೆ ಸಚಿವರ ನೆರವು

ಬೆಂಗಳೂರಿನಿಂದ ಪ್ರಯಾಣಿಸುತ್ತಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ರವರು ತೀರ್ಥಹಳ್ಳಿ ತಾಲೂಕಿನ ಬೇಗುವಳ್ಳಿ ಸಮೀಪ ಹಸುವೊಂದು ರಸ್ತೆಗೆ ಅಡ್ಡ ಬಂದ ಉಂಟಾದ ಅಪಘಾತದಲ್ಲಿ ಯುವಕನೊಬ್ಬ ಗಾಯಗೊಂಡು ಬಳಲುತ್ತಿದ್ದನ್ನು ಕಂಡು ಕೂಡಲೇ ತಮ್ಮ ಬೆಂಗಾವಲು ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುವಲ್ಲಿ ನೆರವಾಗಿದ್ದು, ಸಚಿವರ ಕಾಳಜಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.