ಗಾಯಗೊಂಡ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳ ಮನೆಗೆ ತಹಶೀಲ್ದಾರ ಭೇಟಿ,ಸಾಂತ್ವನ

ಮುದ್ದೇಬಿಹಾಳ;ಡಿ.28: ಡಿ,22 ರಂದು ಹುಲ್ಲೂರು ,ಕೊಪ್ಪ ತಾಂಡ,ಕೊಪ್ಪ, ಸಿದ್ದಾಪುರ ಗ್ರಾಮದಿಂದ ಗ್ರಾಮ ಪಂಚಾಯತಿ ಮತ ಪೆಟ್ಟಿಗೆ ಹಾಗೂ ಚುನಾವಣಾ ಸಿಬ್ಬಂದಿಗಳನ್ನು ಹೊತ್ತು ಬರುತಿದ್ದ ಸಾರಿಗೆ ವಾಹನ ಆಲಮಟ್ಟಿ ರಸ್ತೆಯ ಗೆದ್ದಲಮರಿ ಬಳಿ ಬಸ್ ಗೆ ( ಸಿಮೆಂಟ್ ಕಾಂಕ್ರೀಟ್ ಮಿಕ್ಸಿಂಗ್) ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿ ಗಾಯಗೊಂಡಿದ್ದ ಚುನಾವಣಾ ಕರ್ತವ್ಯ ನಿತರ ಸಿಬ್ಬಂದಿಗಳÀ ಮನೆಗೆ ತಹಶಿಲ್ದಾರ ಎಂ ಎಸ್ ಅರಕೇರಿ ಹಾಗೂ ತಾಲೂಕಾ ಪ್ರಾಥಮೀಕ ಶಾಲ ಶಿಕ್ಷಕರ ಸಂಘದವರೋಂದಿಗೆ ರವಿವಾರ ಬೇಟಿ ನೀಡಿ ಸಾಂತ್ವಾನ ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದೋಂದು ಆಕಸ್ಮೀಕ ಘಟನೆಯಾಗಿದೆ ಯಾದರೂ ಯಾರೇ ಆಗಲಿ ಕರ್ತವ್ಯ ನಿರತವರ್ನು ರಕ್ಷೀಸುವುದು ಸರಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ವಿಜಯಪುರ ಜಿಲ್ಲಾಧಿಕಾರಿ ಅವರ ಆದೇಶದ ಮೇರೆಗೆ ಅಪಘಾತದಲ್ಲಿ ಗಾಯಗೊಂಡಿವವ ಮನೆಗೆ ಬೇಟಿ ನೀಡಿ ಯೋಗಕ್ಷೇಮ ವಿಚಾರಿಸಿ ಅವರಿಗೆ ಧೈರ್ಯ ತುಂಬಲಾಗಿದೆ.
ಸಧ್ಯ ಗಾಯಗೊಂಡಿರುವ ಶಿಕ್ಷಕರಾಗಲಿ ಅಥವಾ ಇತರೇ ಸರಕಾರಿ ಇಲಾಖೆ ಅಧಿಕಾರಿಗಳಾಗಲಿ ಅಂತವರು ಸಂಪೂರ್ಣ ಗುಣಮುಖರಾಗಿ ಯಥಾಸ್ಥಿಗೆ ಮರಳುವವರೆಗೂ ಸರಕಾರಿ ರಜೆ ನೀಡಲು ಆಯಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಸೂಚಿಸಲಾಗಿದೆ ಜತೆಗೆ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೋ ಅಂತವರ ಆರೋಗ್ಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಬೇಕು ಪತ್ರ ಬರಯುವ ಮೂಲಕ ರಾಜ್ಯ ಚುನಾವಣಾ ಆಯೋಗಕ್ಕೆ ಮತ್ತು ಸರಕಾರಕ್ಕೆ ನೈಜ ವರದಿ ಕಳುಸಿಕೊಡಲಾಗಿದೆ.
ಈ ವೇಳೆ ಚುನಾವಣಾ ಕರ್ತವ್ಯ ನಿರತ ಶಿಕ್ಷಕ ಲಕ್ಷ್ಮಣ ಮಲ್ಲಪ್ಪ ಚಲವಾದಿ ಅವರು ಮಾತನಾಡಿ ಚುನಾವಣಾ ಮತದಾನ ಮುಗಿಸಿ ಮತ ಪೆಟ್ಟಿಗೆಗಳನ್ನು ಹೊತ್ತು ತರುವ ಸಂದರ್ಭದಲ್ಲಿ ಅಪಘಾತದಲ್ಲಿ ಪ್ರಜ್ಞೇ ತಪ್ಪಿ ಬಿದ್ದಿದ್ದೇ ಮುಂದೆನು ಆಗಿದೆ ಎಂಬುದು ನನಗೆ ಗೊತ್ತಿಲ್ಲ ಆದರೇ ಇದೋಂದು ಆಕಸ್ಮೀಕ ಘಟನೆ ಸರಕಾರಿ ಕೆಲಸ ದೇವರ ಕೆಲಸವೆಂದು ನಂಬಿರುವ ನಮಗೆ ಇದೋಂದು ಕೆಟ್ಟ ಘಳಿಗೆ ಹಾಗಂತ ಯಾವ ಅಧಿಕಾರಿಗಳನ್ನಾಗಲಿ ಅಥವಾ ಬೇರೆ ಯಾರನ್ನಾಗಲಿ ನಿಂದಿಸುವುದು ಸರಿಯಲ್ಲ. ಅದೃಷ್ಠವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದೇವೆ ದೇವರು ನಮ್ಮ ಮೇಲಿದ್ದಾನೆ.
ಸಧ್ಯ ಮತ ಏಣಿಕೆ ಭರ್ಜರಿ ತಯಾರಿ ಸಮಯದಲ್ಲಿಯೂ ಬಿಡುವು ಮಾಡಿಕೊಂಡು ನಮ್ಮ ಸ್ಥೀತಿಗತಿ ತಿಳಿಯಲು ನಮ್ಮ ಮನೆಗೆ ಬಂದು ನಮ್ಮ ಆರೋಗ್ಯ ಯೋಗಕ್ಷೇಮ ವಿಚಾರಿಸಿ ಸರಕಾರ ನಿಮ್ಮ ಹಿಂದೆ ಇದೇ ನಿಮ್ಮ ರಕ್ಷಣೆ ನಮ್ಮ ಹೋಣೆ ಎಂದು ಹೇಳಿ ಆತ್ಮ ಸ್ಥೈರ್ಯ ತುಂಬಿದ ತಹಶಿಲ್ದಾರ ಎಂ ಎಸ್ ಅರಕೇರಿಯವರ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದರು.
ಈ ಸಂದರ್ಭದಲ್ಲಿ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸಗೌಡ ಮುದ್ನೂರ, ಉಪಾಧ್ಯಕ್ಷ ಶಾಂತಪ್ಪ ಬಿರಾದಾರ, ಸÀ ರೇಣುಕಾ ಹಿರೇಮಠ, ಪ್ರಧಾನ ಕಾರ್ಯದರ್ಶಿ ನಾಗಪ್ಪ ತುರಡಗಿ,ಸಹಕಾರ್ಯದರ್ಶಿ ಎಸ್ ಆರ್ ಪಾಟೀಲ, ಜ್ಯೋತಿ ಕುಂದರಗಿ, ಸಂಘಟನಾ ಕಾರ್ಯದರ್ಶಿ ಈರಯ್ಯಾ ಮಠ, ಅಲ್ಲಿಸಾಬ ಖಾಜಿ, ಟಿ ಎನ್ ರೂಢಗಿ, ಶಿರಸ್ತೆದಾರ ವೇಂಕಟೇಶ ಅಂಬಿಗೇರ ಸೇರಿದಂತೆ ಹಲವರು ಇದ್ದರು.