ಗಾಯಕ ಮೂಸೆವಾಲಾವ ಹತ್ಯೆ: ಮೂವರ ಬಂಧನ

ಚಂಡೀಗಢ, ಸೆ.10-ಗಾಯಕ ಸಿಧು ಮೂಸೆವಾಲ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ನೇಪಾಳ ಗಡಿಯಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.ತಲೆ ಮರೆಸಿಕೊಂಡಿದ್ದ ಶೂಟರ್ ದೀಪಕ್ ಮಂಡಿ ಮತ್ತು ಆತನ ಇಬ್ಬರು ಸಹಚರರಾದ ಕಪಿಲ್ ಪಂಡಿತ್ ಮತ್ತು ರಾಜಿಂದರ್ ರನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ.
ಪಂಜಾಬ್ ಪೊಲೀಸರು, ಕೇಂದ್ರ ತನಿಖಾ ಸಂಸ್ಥೆಗಳು ಮತ್ತು ದೆಹಲಿ ಪೊಲೀಸರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, ಇಬ್ಬರು ಸಹಚರರೊಂದಿಗೆ ಪರಾರಿಯಾಗಿದ್ದ ಸಿಧು ಮೂಸ್ ವಾಲಾ ಶೂಟರ್ ದೀಪಕ್ ಅಲಿಯಾಸ್ ಮುಂಡಿಯನ್ನು ಬಂಧಿಸಿದ್ದಾರೆ. ಸಿಎಂ ಭಗವಂತ್ ಮಾನ್ ನಿರ್ದೇಶನದ ಮೇರೆಗೆ ಡ್ರಗ್ಸ್ ಮತ್ತು ದರೋಡೆಕೋರರ ವಿರುದ್ಧದ ಹೋರಾಟದಲ್ಲಿ ಇದು ಪ್ರಮುಖ ಗೆಲುವು ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ಟ್ವೀಟ್ ಮಾಡಿದ್ದಾರೆ.
ಪಂಜಾಬ್ ನ ಮನ್ಸಾದಲ್ಲಿ ಗಾಯಕ ಸಿಧು ಮೂಸೆವಾಲಾ ಅವರ ಮೇಲೆ ಬಂಧೂಕುದಾರಿಗಳು ಗುಂಡಿನ ದಾಳಿ ಮಾಡಿದ್ದರು.ಮೂಸೆವಾಲಾ ದೇಹಕ್ಕೆ 19 ಗುಂಡುಗಳು ಹೊಕ್ಕಿದ್ದವು. ದಾಳಿ ನಡೆದ 15 ನಿಮಿಷದಲ್ಲೇ ಅವರು ಸಾವನ್ನಪ್ಪಿದ್ದರು.