ಕಲಬುರಗಿ,ಏ 11: ಜಿಲ್ಲೆಯ ಆರ್ಕೆಸ್ಟ್ರಾ ಬಳಗದ ಹಿರಿಯ ಗಾಯಕರು, ಅಭಿನವ ವಿನೋದ ರಾಠೋಡ ಮತ್ತು ಕಿಶೋರ್ ಕುಮಾರರೆಂದೇ ಪ್ರಖ್ಯಾತರಾದ ಭರತ ಗಾಯಕವಾಡ ಇತ್ತೀಚಿಗೆ ಹೃದಯಾಘಾತದಿಂದ ಮುಂಬೈನಲ್ಲಿ ನಿಧನರಾದ ಪ್ರಯುಕ್ತ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನಗರದ ಕನ್ನಡ ಭವನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ದಿ. ಭರತ ಗಾಯಕವಾಡರ ಹಿತೈಷಿಗಳಾದ ಎಮ್.ಜಿ. ಘನಾತೆ, ವಾಲ್ಮಿಕ್ ಕಾಂಬಳೆ, ಚಾಂದ್ ಜಾಕ್ಸನ್, ಮಧು ಮಲ್ಲಾಬಾದಿ, ಬಲವಂತ ಉದನೂರ, ಆನಂದ ಆಲಮೇಲಕರ್, ಪಪ್ಪು ಉರ್ಕಿಮಠ, ಪ್ರಮೋದ್ ಪಟವಾರಿ, ರಾಜು ಜೋಷಿ, ರಾಜು ರೆಡ್ಡಿ, ಮಹಾದೇವ ಸಂಗಾವಿ, ವಿಠ್ಠಲ ಮೇತ್ರೆ, ರಾಜು ಕೋಬಾಳ, ಶಿವಕುಮಾರ್ ಪೂಜಾರಿ, ಸಿದ್ದು ಹಂಚನಾಳ, ಮಹಾದೇವ ಅಸ್ಟಗಿ, ಕಲ್ಪನಾ ಗೋಲ್ಡಸ್ಮಿತ್, ಸುಜಾತಾ ಸ್ವಾಮಿ ಉಪಸ್ಥಿತರಿದ್ದು ಶ್ರದ್ಧಾಂಜಲಿ ಅರ್ಪಿಸಿದರು.