ಗಾಯಕ ಕುಮಾರ್ ಸಾನುಗೂ ಅಮರಿಕೊಂಡ ಕೊರೋನ ಸೋಂಕು


ಮುಂಬೈ , ಅ 16- ಹಿರಿಯ ಗಾಯಕ ಕುಮಾರ್ ಸಾನುಗೆಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ.
ಅವರೆ ಅಧಿಕೃತ ಫೇಸ್ ಬುಕ್ ನಲ್ಲಿ ಈ ಮಾಹಿತಿಯನ್ನು ಶುಕ್ರವಾರ ಬಹಿರಂಗಪಡಿಸಿದ್ದಾರೆ.

ದುರದೃಷ್ಟವಶಾತ್ ಕೊರೋನ ಸೋಂಕು ತಗಲಿದೆ. ದಯವಿಟ್ಟು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ.ಧನ್ಯವಾದಗಳು ಎಂದು ಫೇಸ್ಬುಕ್ನಲ್ಲಿ ಬರೆಯಲಾಗಿದೆ.

ಕಾಮೆಂಟ್ ವಿಭಾಗದಲ್ಲಿ ಸಾನು ಅವರ ಅಭಿಮಾನಿಗಳು ಬೇಗನೆ ಚೇತರಿಸಿಕೊಳ್ಳಿ ಎಂದು ಶುಭ ಹಾರೈಸಿದ್ದಾರೆ. 90ರ ದಶಕದಲ್ಲಿ ಕುಮಾರ್ ಸಾನು ಅತ್ಯಂತ ಬೇಡಿಕೆಯ ಗಾಯಕರಾಗಿದ್ದರು.

ಈ ವಾರಾರಂಭದಲ್ಲಿ ಲಾಸ್ ಏಂಜಲಿಸ್ ನಲ್ಲಿರುವ ತಮ್ಮ ಕುಟುಂಬ ಭೇಟಿಯಾಗಲು ಅವರು ಅಮೆರಿಕಕ್ಕೆ ತೆರಳಬೇಕಾಗಿತ್ತು ಎಂದೂ ಹೇಳಲಾಗಿದೆ.