ಗಾಯಕ ಕಾಮಿಸೆಟ್ಟಿಗೆ ಪ್ರಧಾನಿ ಅಭಿನಂದನೆ

ವಾರಂಗಲ್ ,ಜು. ೯- ಸ್ವಲೀನತೆಯಿಂದ ಬಳಲುತ್ತಿರುವ ಗಾಯಕ ಕಾಮಿಸೆಟ್ಟಿ ವೆಂಕಟ್ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಾರಂಗಲ್‌ನಲ್ಲಿ ಭೇಟಿ ಮಾಡಿ ಅಭಿನಂದಿಸಿದ್ದಾರೆ. ವೆಂಕಟ್ ಪ್ರತಿಭೆಯ ಶಕ್ತಿ ಕೇಂದ್ರವಾಗಿದ್ದಾರೆ. ಅಂಗವೈಕಲ್ಯ ಮೆಟ್ಟಿ ನಿಟ್ಟು ಗಾಯನವನ್ನು ವೃತ್ತಿಯನ್ನು ಮುಂದುವರಿಸುವ ಕನಸು ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ವಿಯಾಗಲಿ ಎಂದಿದ್ದಾರೆ.
ಕಾಮಿಸೆಟ್ಟಿ ವೆಂಕಟ್ ಅವರು ಪ್ರತಿಭೆ ಮತ್ತು ಯುವ ಶಕ್ತಿಯ ಶಕ್ತಿಕೇಂದ್ರ. ತಮ್ಮ ಸ್ವಲೀನತೆ ಮೆಟ್ಟಿ ನಿಂತು ಗಾಯನದಲ್ಲಿ ತೊಡಗಿಸಿಕೊಂಡಿದ್ದಾರೆ. ಆಸ್ಕರ್ ವಿಜೇತ ಆರ್ ಆರ್ ಆರ್ ಚಿತ್ರದ ನಾಟು ನಾಟುವನ್ನು ಹಾಡಿದರು ಮತ್ತು ನೃತ್ಯ ಮಾಡಿದರು. ಅವರ ಸ್ಥೈರ್ಯಕ್ಕೆ ನಮಸ್ಕರಿಸುತ್ತೇನೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.ವಾರಂಗಲ್‌ನಲ್ಲಿ ಎಡಪಂಥೀಯ ಉಗ್ರವಾದದಿಂದ ಸಂಬಂಧಿಕರನ್ನು ಕಳೆದುಕೊಂಡವರ ಕುಟುಂಬಗಳನ್ನು ಪ್ರಧಾನಿ ಮೋದಿ ಭೇಟಿಯಾಗಿ ಅಭಿನಂಧನೆ ಸಲ್ಲಿಸಿದರು.
ವಾಗ್ದಾಳಿ: ವಾರಂಗಲ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಭ್ರಷ್ಟಾಚಾರದ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಬಿಆರೆಸ್ ಸರ್ಕಾರ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿ ರಾಜ್ಯ ವಂಶಾಡಳಿತ ರಾಜಕಾರಣದ ಜಾಲದಲ್ಲಿ ಸಿಲುಕಿಕೊಂಡಿದೆ ಎಂದು ದೂರಿದ್ದಾರೆತೆಲಂಗಾಣ ಜನತೆಗೆ ಬಿಆರೆಸ್ ಮತ್ತು ಕಾಂಗ್ರೆಸ್ ಎರಡೂ ಅಪಾಯಕಾರಿ’ .ಕೆಸಿಆರ್ ’ಅತ್ಯಂತ ಭ್ರಷ್ಟ ಸರ್ಕಾರ’ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.