
ವಿಜಯಪುರ :ಎ.10: ಗಾನಯೋಗಿ ಸಂಘದ ವತಿಯಿಂದ ವಿಜಯಪುರ ನಗರದ ಹೃದಯಭಾಗವಾದ ಗಾಂಧಿ ಚೌಕ್ ಬ್ರಿಜ್ ಕೆಳಗಡಯ ಗೋಡೆಗಳ ಮೇಲೆ ಮತದಾನ ಜಾಗೃತಿಯ ಕುರಿತು ನಾನ್ನುಡಿಗಳನ್ನು ಬರೆದು ಮತದಾರರಲ್ಲಿ ಜಾಗೃತಿ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಗಾನಯೋಗಿ ಸಂಘದ ಅಧ್ಯಕ್ಷರಾದ ಪ್ರಕಾಶ ಆರ್.ಕೆ. ಮಾತನಾಡಿ, ನಮ್ಮ ಭವಿಷ್ಯ ನಾವು ಮಾಡುವ ಮತದಾನದ ಮೇಲೆ ನಿಂತಿದೆ, ಪ್ರತಿಯೊಬ್ಬರು ಮತದಾನ ಮಾಡಿ ನಮ್ಮ ದೇಶವನ್ನು ಭದ್ರಬುನಾಧಿ ಮಾಡಬೇಕು. ಮತದಾರರು ಯಾವುದೇ ಆಸೆ, ಆಮೀಂಸೆಗೆ ಒಳಗಾಗಬಾರದು, ಮತವನ್ನು ಯಾವುದೇ ಆಮೀಂಸೆಗೆ ಒಳಗಾಗಿ ನಿಮ್ಮ ಮತ ಮಾರಿಕೊಂಡರೆ ನಿಮ್ಮ ಸ್ವಾಭೀಮಾನ, ನಿಮ್ಮ ಬೆಳವಣಿಗೆ, ನಿಮ್ಮ ಏಳ್ಗೆಗಳ ಹಕ್ಕು ಕಳೆದುಕೊಂಡಂತೆ, ಮತವೆಂಬುದು ಮನೆಗೆ ಹೆಣ್ಣುಮಗುವಿದ್ದಂತೆ ಅದನ್ನು ಮಾರಿಕೊಂಡರೆ ಮಗಳಿಗೆ ದ್ರೋಹ ಬಗೆದಂತೆ ಎಂದು ಮತದಾನರ ಜಾಗೃತಿ ಮೂಡಿಸಿದರು.
ಇದೇ ಸಂದರ್ಭದಲ್ಲಿ ಮತದಾನದ ಕುರಿತು ನಾನ್ನುಡಿಗಳಾದ ಮತದಾನ ನಿಮ್ಮ ಹಕ್ಕು ಚಲಾಯಿಸಬನ್ನಿ, ಪ್ರಜಾಪ್ರಭುತ್ವದ ಅಡಿಗಲ್ಲಿಗೆ ನಮ್ಮ ಮತ, ವ್ಯಯ ಮಾಡದೆ ಹಾಕಿ ಮತ, ನೋಟಗಾಗಿ ವೋಟು ಅಲ್ಲ, ಪ್ರಜಾಪ್ರಭುತ್ವದ ಉಳಿವಿಗಾಗಿ ವೋಟು. “ಮತದಾನ ಎನ್ನುವುದು ಮನೆಯ ಮಗಳಿದ್ದಂತೆ, ಅದನ್ನು ಹಣಕ್ಕಾಗಿ ಇನ್ಯಾವುದೋ ಆಮಿಷಕ್ಕಾಗಿ ಮಾರಿಕೊಳ್ಳಬೇಡಿ”.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪ್ರಕಾಶ್.ಆರ್.ಕೆ. ಬಾಹುಬಲಿ ಶಿವಣ್ಣವರ.ರಾಜಕುಮಾರ್ ಹೊಸಟ್ಟಿ.ವೀರೇಶ್ ಸೊನ್ನಲಗಿ, ಸಚಿನ್ ವಾಲಿಕಾರ್ , ವಿಠ್ಠಲ್ ಗುರುವಿನ್, ರವಿ ರತ್ನಾಕರ್, ಸಂತೋಷ್ ಚವ್ಹಾಣ, ಮಹೇಶ್ ಕುಂಬಾರ್, ವಿಕಾಸ್ ಕಂಬಾಗಿ. ಬಾಬು ಬಿಸೆ.ಸಚೀನ ಚವ್ಹಾಣ. ರಾಹುಲ್ ಎಂ. ರೇವಣಸಿದ್ದಯ್ಯ ಹಿರೇಮಠ. ಮುಂತಾದವರು ಇದ್ದರು.