ಗಾನಯೋಗಿ ಸಂಘದಿಂದ ಸಿಟಿ ಬಸ್ ಸ್ಟಾಪ್ ಸ್ವಚ್ಛತೆ

ವಿಜಯಪುರ : ಜೂ.13:ಗಾನಯೋಗಿ ಸಂಘದ ವತಿಯಿಂದ ವಿಜಯಪುರದ ಕನಕದಾಸ ಬಡಾವಣೆಯ ಸಿಟಿ ಬಸ್ ಸ್ಟಾಪ್ ಸ್ವಚ್ಛಗೊಳಿಸಿ ಬಸ್ ಸ್ಟಾಪ್ ಗೋಡೆಗಳಿಗೆ ಅಂದವಾಗಿ ಬಣ್ಣ ಹಚ್ಚಿ “ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾಗಿ ಭಾರತಾಂಬೆಯ ಮಡಿಲಿಗೆ ಸೇರಿದ ಮಹಾನ್ ಯೋಧರು”ಹೆಸರುಗಳನ್ನು ಬಸ್ ಸ್ಟಾಪ್ ಒಳಗಡೆ ಬರೆಯಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪ್ರಕಾಶ್.ಆರ್.ಕೆ ಮಾತನಾಡಿ, ಕನಕದಾಸ ಬಡಾವಣೆಯ ಬಸ್‍ಸ್ಟಾಪ್ ನೋಡಿ ತುಂಬಾ ಮುಜುಗರವಾಗುತ್ತದೆ. ಬಸ್‍ಸ್ಟಾಪನಲ್ಲಿ ಜನರು ನಿಲ್ಲಬೇಕೆಂದು ವಾಕರಿಕೆ ಬರುವ ಸಂದಿಗ್ಧ ಪರಿಸ್ಥಿತಿ ಸಂಚಾರಕರು ಎದುರಿಸಬೇಕಾಗುತ್ತಿರುವುದು ನಮ್ಮ ಗಮನಕ್ಕೆ ಬಂದ ಕಾರಣ ನಾವು ಅದನ್ನು ಸರಿಪಡಿಸಿ ಜನರು ಬಸ್‍ಸ್ಟಾಪನಲ್ಲಿ ಮಾಡಿರುವ ಹೊಲಸನ್ನು ತೊಳೆದು ಸರಾಯಿ ಬಾಟಲಿ, ಗುಟ್ಕಾ, ಮುಂತಾದ ವ್ಯಸನಗಳಿಂದ ಗಲೀಜಾದ ಬಸ್‍ನಿಲ್ದಾಣಕ್ಕೊಂದು ಅಂದವಾಗಿ ಪೇಂಟ್‍ಮಾಡಡಿ ಅದಕ್ಕೊಂದು ಮೆರಗು ನೀಡುವಲ್ಲಿ ಮುಂದಾಗಿದ್ದೇವೆ, ಸಾರ್ವಜನಿಕರೆಲ್ಲರೂ ಈ ಬಸ್‍ಸ್ಟಾಪ್‍ಮೇಲೆ ಯಾವುದೇ ಜಾಹೀರಾತು ಫಲಕ ಲಗತ್ತಿಸದೇ ಅದರ ಮೇಲೆ ಗುಟ್ಕಾ ಮುಂತಾದವುಗಳಿಂದ ಗಲೀಜು ಮಾಡದೇ ಶುದ್ಧವಾಗಿಟ್ಟುಕೊಂಡು ಹೋಗಬೇಕೆಂಬುದು ನನ್ನ ಆಶಯವಾಗಿದೆ ಕನಕದಾಸ ಬಡಾವಣೆಯ ಜನತೆಗೆ ನಾನು ಪ್ರಕಟಣೆಯ ಮೂಲಕ ಮನವಿ ಮಾಡಿಕೊಳ್ಳುವೆ ಎಂದರು.
ಈ ಸಂದರ್ಭದಲ್ಲಿ ಬಾಹುಬಲಿ ಶಿವಣ್ಣವರ, ರಾಜಕುಮಾರ್ ಹೊಸಟ್ಟಿ, ವೀರೇಶ್ ಸೊನ್ನಲಗಿ, ಸಚಿನ್ ವಾಲಿಕಾರ್, ವಿಠ್ಠಲ್ ಗುರುವಿನ್, ರವಿ ರತ್ನಾಕರ್, ಸಂತೋಷ್ ಚೌಹಾಣ್, ಮಹೇಶ್ ಕುಂಬಾರ್, ವಿಕಾಸ್ ಕಂಬಾಗಿ. ರಾಹುಲ್, ಸಚಿನ್ ಚೌಹಾಣ್, ಬಾಬು, ಪ್ರಮೋದ್ ಚೌಹಾಣ್, ರೇವಣಸಿದ್ದಯ್ಯ ಹಿರೇಮಠ ಹಾಗೂ ಇನ್ನಿತರರು ಇದ್ದರು.