ಗಾನಯೋಗಿ ಸಂಘದಿಂದ ಭೂತನಾಳ ಕೆರೆ ಸ್ವಚ್ಛತೆ

(ಸಂಜೆವಾಣಿ ವಾರ್ತೆ)
ವಿಜಯಪುರ :ಜು.3: ಗಾನಯೋಗಿ ಸಂಘದ ವತಿಯಿಂದ ವಿಜಯಪುರ ನಗರದ ಹೊರವಲಯದಲ್ಲಿರುವ ಭೂತನಾಳೆ ಕೆರೆಯ ದಡದಲ್ಲಿರುವ ಬಿಯರ್ ಬಾಟಲ್, ಸಿಗರೆಟ್ ಪಾಕೆಟ್, ಪ್ಲಾಸ್ಟಿಕ್ ಬಾಟಲ್, ಇನ್ನಿತರ ಪ್ರಕೃತಿಗೆ ಹಾನಿ ಉಂಟು ಮಾಡುವ ತ್ಯಾಜ್ಯವನ್ನು ಜನರು ಎಸಿದಿರುವುದನ್ನು ಕಂಡು ಈ ತ್ಯಾಜವನ್ನು ತಗೆದು ಸ್ವಚ್ಚತೆ ಮಾಡಲಾಯಿತು.
ಈ ಸಂದರ್ಭ ದಲ್ಲಿ ಅಧ್ಯಕ್ಷರಾದ ಪ್ರಕಾಶ್.ಆರ್.ಕೆ. ಮಾತನಾಡಿ, ಕೆರೆಯ ಹತ್ತಿರಕ್ಕೇ ಸಾಕಷ್ಟು ಜನ ವಿಶ್ರಾಂತಿಗಾಗಿ ಆಗಮಿಸಿದ್ದು, ಅಲ್ಲಿಯ ವಾತಾವರಣ ಕಂಡು ವಾಕರಕೆ ಬರುವ ಸ್ಥೀತಿಗೆ ತಂದಿರುತ್ತಾರೆ. ನಮ್ಮ ಗಾನಯೋಗಿ ಸಂಘದಿಂದ ಸಾರ್ವಜನಿಕರಿಗೆ ವಿನಂತಿಸುವುದೇನೆಂದರೆ ನಮ್ಮ ಸುತ್ತಮುತ್ತಲಿನ ಪರಿಸರ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ದಯಮಾಡಿ ಯಾರೂ ಗಲೀಜ ಮಾಡಬಾರದು, ಸಾಧ್ಯವಿದ್ಧರೆ ಸ್ವಚ್ಛತೆಯನ್ನು ಕಾಪಾಡಿ ಆಗದಿದ್ದರ ಆರಾಮಾಗಿ ಪರಿಸರದ ವಾತಾವರಣ ಸವಿಯಿರಿ ಆದರೆ ಗಲೀಜು ಮಾಡಬೇಡಿ ಎಂದು ಪ್ರತಿಯೊಬ್ಬರಿಗೆ ಪ್ರತಿಯೊಬ್ಬರಿಗೂ ಪ್ರಕಟಣೆಯ ಮೂಲಕ ವಿನಂತಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಹುಬಲಿ ಶಿವಣ್ಣವರ, ರಾಜಕುಮಾರ್ ಹೊಸಟ್ಟಿ, ವೀರೇಶ್ ಸೊನ್ನಲಗಿ, ಸಚಿನ್ ವಾಲಿಕಾರ್ , ವಿಠ್ಠಲ್ ಗುರುವಿನ್, ರವಿ ರತ್ನಾಕರ್, ಸಂತೋಷ್ ಚೌಹಾಣ್, ಮಹೇಶ್ ಕುಂಬಾರ್, ವಿಕಾಸ್ ಕಂಬಾಗಿ. ರೇವಣಸಿದ್ದಯ್ಯ ಹಿರೇಮಠ ಹಾಗೂ ಇನ್ನಿತರರು ಇದ್ದರು.