ಗಾದಗಿಯಲ್ಲಿ ಬಿಜೆಪಿ ಪರ ಮತಯಾಚನೆ

(ಸಂಜೆವಾಣಿ ವಾರ್ತೆ)
ಬೀದರ:ಡಿ.8: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಜನಪರ ಆಡಳಿತ ನೀಡುತ್ತಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲುವು ಪಕ್ಕಾ ಎಂದು ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ವಿಶ್ವಾಸವ್ಯಕ್ತಪಡಿಸಿದರು.
ತಾಲೂಕಿನ ಗಾದಗಿಯಲ್ಲಿ ಚುನಾವಣೆ ನಿಮಿತ್ತ ಆಯೋಜಿಸಿದ ಪ್ರಚಾರ ಸಭೆಯಲ್ಲಿ ಮಾತನಾಡಿ, ನಮ್ಮ ಅಭ್ಯರ್ಥಿ ಪ್ರಕಾಶ ಖಂಡ್ರೆ ಹಿರಿಯರು ಹಾಗೂ ಅನುಭವಿಗಳು. ಎರಡು ಬಾರಿ ಶಾಸಕರಾಗಿ ಜನಪರ ಕೆಲಸಗಳು ಮಾಡಿದ್ದಾರೆ. ಖಂಡ್ರೆ ಅವರಿಗೆ ಎಲ್ಲ ಸದಸ್ಯರು ಬೆಂಬಲಿಸುವ ಮೂಲಕ ಭಾರಿ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ಜಿಲ್ಲೆಯ ಎಲ್ಲೆಡೆ ಉತ್ತಮ ವಾತಾವರಣ ಇದೆ. ಈಗಾಗಲೇ ಒಂದು ಸುತ್ತಿನ ಪ್ರಚಾರ ಮುಗಿಸಿ, ಎರಡನೇ ಹಂತದ ಮತಯಾಚನೆ ಆರಂಭಿಸಲಾಗಿದೆ. ಎಲ್ಲ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಕಮಲ ಅರಳಿಸುವುದು ನಮ್ಮ ಧ್ಯೇಯ ಎಂದು ಹೇಳಿದರು.
ಈ ಸಭೆಯಲ್ಲಿ ಬಾಬು ವಾಲಿ, ಈಶ್ವರ್ ಸಿಂಗ್ ಠಾಕೂರ, ವಿಜಯಕುಮಾರ್ ಪಾಟೀಲ್ ಗಾದಾಗಿ, ವಿಜಯಕುಮಾರ್ ಆನಂದೆ,ಅಶೋಕ್ ಹೋಕರಣೆ,
ಖುಶಾಲರಾವ್ ಪಾಟೀಲ್, ಗುರುನಾಥ್ ಜಯಂತಿಕರ್, ರಾಜೇಂದ್ರ ಪೂಜಾರಿ, ಇತರರು ಇದ್ದರು.