ಗಾದಗಿಯಲ್ಲಿ ಬಿಜೆಪಿ ಜಿಲ್ಲಾ ಬೂತ್ ವಿಜಯ ಅಭಿಯಾನ

ಬೀದರ:ಜ.3:ಗಾದಗಿ ಗ್ರಾಮದಲ್ಲಿ ಜಿಲ್ಲಾ ಬಿ.ಜೆ.ಪಿ ವತಿಯಿಂದ ಬೃಹತ್ ಜಿಲ್ಲಾ ಬೂತ್ ವಿಜಯ ಅಭಿಯಾನ ಉದ್ಘಾಟನೆಯನ್ನು ಕೇಂದ್ರ ಸಚಿವರಾದ ಶ್ರೀ ಭಗವಂತ ಖೂಬಾ ಉದ್ಘಾಟಿಸಿ ಮಾತನಾಡಿ ಬರುವ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಬೂತ್ ಮಜಬೂತ್ ಮಾಡಲು ಸಲಹೆ ನೀಡಿದರು, ಅಭಿಯಾನಕ್ಕೆ ಸಂಭದಿಸಿದ ಸಂಘಟನಾತ್ಮಕ ಕಾರ್ಯಗಳನ್ನು ಚಾಚು ತಪ್ಪದೆ ಮುಗಿಸಲು ಸೂಚಿಸಿದರು, ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಜನಪರ ಅಭಿವೃದ್ಧಿಗಳನ್ನು ಮನೆ ಮನೆಗೆ ತಲುಪಿಸಿ ಜಿಲ್ಲೆಯಲ್ಲಿ 1504 ಬೂತ್ ಗಳನ್ನು ಚುನಾವಣೆಗೆ ಜಿಲ್ಲಾ ಸಜ್ಜಾಗಲೂ ಕೋರಿದರು, ಅಧ್ಯಕ್ಷರಾದ ಶಿವಾನಂದ ಮಂಠಾಳಕರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘಟನಾತ್ಮಕ ಕಾರ್ಯಕ್ರಮಗಳಿಗೆ ಒತ್ತು ಕೊಡಲು ತಿಳಿಸಿದರು,
ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ ಮಲ್ಕಾಪೂರೆ ಮಾತನಾಡಿ ರಾಜ್ಯ ಸರ್ಕಾರ ಎಸ್ ಸಿ ಹಾಗು ಎಸ್. ಟಿ ಮೀಸಲಾತಿ ಹೆಚ್ಚಿಸಿ ದುರ್ಬಲ ಸಮಾಜಕ್ಕೆ ಹೊಸ ಆಯಾಮ ನೀಡಿದ್ದು, ಇದು ಈ ಬಾರಿ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು , ಈಶ್ವರಸಿಂಗ ಠಾಕೂರ ಮಾತನಾಡಿ ಬಿಜೆಪಿ ನುಡಿದಂತೆ ನಡೆಯುವ ಪಕ್ಷ, ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷದ ಕಾರ್ಯಕರ್ತರು ನಾವು ಹೀಗಾಗಿ ಈ ಚುನಾವಣೆ ಸವಾಲಾಗಿ ಸ್ವೀಕರಿಸೋಣ ಎಂದು ತಿಳಿಸಿದರು. ಅಭಿಯಾನಡ ಜಿಲ್ಲಾ ಸಂಚಾಲಕರು ಹಾಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಎಸ್ ಪಾಟೀಲ್ ಗಾದಗಿ ಪ್ರಸ್ತವಿಕವಾಗಿ ಮಾತನಾಡಿದರು. ಸಾವಿರಾರು ಕಾರ್ಯಕರ್ತರು ಗಣ್ಯರನ್ನು ಮಹಾದ್ವಾರದಿಂದ ಮಂಟಪದವರೆಗೆ ಡೊಳ್ಳು, ಪಟಾಕಿ ಸಿಡಿಸುತ್ತಾ ಅಭಿಯಾನವನ್ನು ಬ್ರಹತ್ ಮೆರವಣಿಗೆ ಮೂಲಕ ಬರಮಾಡಿಕೊಂಡರು, ನಂತರ ಬೂತ್ ಅಧ್ಯಕ್ಷರಾದ ಸಿದ್ದು ಹೊನ್ನಾರವರ ಮನೆ ಮೇಲೆ ಪಕ್ಷದ ಧ್ವಜ ಹಾರಿಸಿದರು. ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರಾದ ರಾಜೇಂದ್ರ ಪೂಜಾರಿ, ಪೀರಪ್ಪ ಔರಾದೆ, ಕುಶಾಲ್ ಪಾಟೀಲ್ ಗಾದಗಿ, ವಿಜಯಕುಮಾರ ಆನಂದೆ, ನಗರ ಅಧ್ಯಕ್ಷ ಶಶಿ ಹೊಸಳ್ಳಿ, ಶಿವಪುತ್ರ ವೈದ್ಯ,ಬಾಬು ವಾಲಿ, ಮಹೇಶ್ವರ ಸ್ವಾಮಿ,ವಿಶ್ವನಾಥ್ ಪಾಟೀಲ್ ಮಾಡಗೋಳ್ ಪ್ರಕಾಶ ಖಿoಡಿ, ಲಕ್ಷ್ಮಿ ಅಗಸೆ, ಶಿವಕುಮಾರ್ ಬೈರಾನಳ್ಳಿ, ರಾಜು ನೆಮತಾಬಾದ, ದೀಪಕ್ ಗಾದಗೆ , ಪಂಡರಿ ಲದ್ದೇ, ರವಿ ಚಿಮಕೋಡ್, ಉಪಸ್ಥಿತರಿದ್ದರು.
ಈ ಅಭಿಯಾನ ದಲ್ಲಿ ಪ್ರತಿ ಮತಗಟ್ಟೆಯಲ್ಲಿ 25 ಕಾರ್ಯಕರ್ತರ ಮನೆಮೇಲೆ ಧ್ವಜಾರೋಹಣ ಮಾಡಿದರು. ಈ ಅಭಿಯಾನದ ಕಾರ್ಯಕ್ರಮವು ಜನೆವರಿ 2 ರಂದು ಜಿಲ್ಲೆಯ ಎಲ್ಲಾ ಮಂಡಲಗಳಲ್ಲಿ ಚಾಲನೆ ನಿಡಲಾಗುವುದು ಎಂದು ಜಿಲ್ಲಾ ಬೂತ್ ವಿಜಯ ಅಭಿಯಾನದ ಸಂಚಾಲಕ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿಜಯಕುಮಾರ ಎಸ್ ಪಾಟೀಲ್ ಗಾದಗಿ ಅವರು ಪ್ರತಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.