ಗಾಣಿಗ ಸಮಾಜದ ಲಿಂ. ಜಯದೇವ ಜಗದ್ಗುರುಗಳ ಕಾರ್ಯ ಶ್ಲಾಘನೀಯ

ಶಹಾಪುರ :ಅ.2:ತಾಲೂಕಿನ ಸಗರ ಗ್ರಾಮದಲ್ಲಿ ಗಾಣಿಗ ಸಮಾಜದ ವತಿಯಿಂದ ಲಿಂಗ ಲಿಂಗೈಕ್ಯ ಶ್ರೀ ಜಯದೇವ ಜಗದ್ಗುರುಗಳ 85 ನೇ ಪುಣ್ಯ ಸ್ಮರಣೆಯನ್ನು ಸಗರದ ಒಕ್ಕಲಗೇರಿ ಮಠದಲ್ಲಿ ಪೂಜೆ ನೆರವೇರಿಸಿ ಮಾತನಾಡಿದ ಮರುಳ ಮಹಾಂತ ಶಿವಾಚಾರ್ಯರು ಗಾಣಿಗ ಸಮಾಜದ ಅದ್ಭುತ ಶಕ್ತಿಯಾಗಿ ಸಮಾಜದ ಏಳಿಗೆಗಾಗಿ ಜೋಳಿಗೆ ಇಲ್ಲದೆ ಪರಿಶ್ರಮ ಪಟ್ಟು ಹಗಲು ರಾತ್ರಿ ಅನ್ನದೆ ಸಮಾಜದ ಉದ್ದಾರಕ್ಕಾಗಿ ದಣಿವರಿಯದೆ ದುಡಿದು ಅಪಾರ ಆಸ್ತಿ ಸಮಾಜದ ಅಭಿವೃದ್ಧಿಗಾಗಿ ಮೀಸಲಿಟ್ಟು ತಮ್ಮ ಬದುಕನ್ನೇ ಸಮಾಜಕ್ಕಾಗಿ ಶ್ರಮಿಸಿದ ಜಯದೇವ ಜಗದ್ಗುರುಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು ಸಮಸ್ತ ಸಗರ ಗ್ರಾಮದ ಗಾಣಿಗ ಸಮಾಜದ ವತಿಯಿಂದ ಮಠದಲ್ಲಿ ಜಯದೇವ ಜಗದ್ಗುರುಗಳ ಪುಣ್ಯ ಸ್ಮರಣೆಯನ್ನು ಸಮಾಜದ ಬಾಂಧವರು ಸೇರಿಕೊಂಡು ಆಚರಣೆ ಮಾಡಿದರು ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಸಂಗಮೇಶ್ ಕನಗುಂಡ್, ಮಹಾಂತಪ್ಪ ಕೂಡ್ಲೂರ, ಶ್ರೀಶೈಲ ಬಂಟನೂರ, ಶಿವಶರಣಪ್ಪ ಕೂಡ್ಲೂರ, ಮಲ್ಲಿಕಾರ್ಜುನ ಕೂಡ್ಲೂರ,ನಾಗಪ್ಪ ಮುದ್ದ, ನಾಗರಾಜ ಕೂಡ್ಲೂರ, ಚಂದ್ರಶೇಖರ್ ಕನಗುಂಡ್ , ಮಲ್ಲಪ್ಪ ನಂದಿಕೋಲ್, ಚಂದ್ರಶೇಖರ ಮುಂಡರಗಿ ನಾಗರಾಜ ಜೇರಟಗಿಹಾಗೂ ಇತರರಿದ್ದರು.