ಗಾಣಾಗಾಪುರ: ಸಮುದಾಯ ವಂತಿಕೆ ಸಂಗ್ರಹಣಾ ಅಭಿಯಾನ

ಕಲಬುರಗಿ,ಮಾ.14-ಅಫಜಲಪೂರು ತಾಲೂಕಿನ ಗಾಣಾಗಪುರ ಗ್ರಾಮಪಂಚಾಯತ್ ನಲ್ಲಿ ಜಲ ಜೀವನ ಮಿಷನ ಅಡಿಯಲ್ಲಿ ಕಾರ್ಯಾತ್ಮಕ ಮನೆ ನಳ ಸಂಪರ್ಕ ನೀಡುವುದಕ್ಕೆ ಸಮುದಾಯ ಮಾಲಿಕತ್ವ ವಹಿಸುವ ಹಾಗೂ ಕಾರ್ಯಕ್ರಮದಲ್ಲಿ ಭಾಗೀದಾರರಾಗಲು ಸಮುದಾಯ ವಂತಿಕೆ ಸಂಗ್ರಹಣಾ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗಾಣಗಾಪುರ ಗ್ರಾಮವು ಜಲ ಜೀವನ ಮಿಷನ ಅಡಿಯಲ್ಲಿ ಆಯ್ಕೆಗೊಂಡು, ಯೋಜನೆಯ ವರದಿ ತಯಾರಿ ಆಗಿದ್ದು ಟೆಂಡರ್ ಕರೆಯುವ ಹಂತದಲ್ಲಿದ್ದು, ಇದಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ವಭಾವಿಯಾಗಿ ಯೋಜನೆಗೆ ಸರಕಾರದಿಂದ 90% ಅನುದಾನದ ನೀಡುತ್ತಿದ್ದು, ಬಾಕಿ ಉಳಿದ 10% ಪ್ರತಿ ಶತ ಅನುದಾನವನ್ನು ಸಮುದಾಯ ವಂತಿಕೆ ನೀಡಿ ಗ್ರಾಮಸ್ಥರು ಯೋಜನೆಯಲ್ಲಿ ಭಾಗೀದಾರರಾಗಲು & ಮಾಲಿಕತ್ವ ವಹಿಸುವ ನಿಟ್ಟಿನಲ್ಲಿ ಆಯೋಜಿಸದ ಕಾರ್ಯಕ್ರಮದಲ್ಲಿ ಅಫಜಲಪೂರು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅಬ್ದುಲ್ ನಭಿ ಸಭೆಯ ಮೂಲಕ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಜಲ ಜೀವನ ಮಿಷನ ಯೋಜನೆಯ ಡಿಪಿಎಂ. ಡಾ.ರಾಜು ಕಂಬಾಳಿಮಠ ರವರು ಮಾತನಾಡಿ ಜಲ ಜೀವನ ಮಿಷನ್ ಯೋಜನೆ ಯಶಸ್ವಿಯಾಗಬೇಕಾದರೆ ಸಮುದಾಯದ ಪಾತ್ರ ಅವಶ್ಯಕವಾಗಿದೆ, ಜಲ ಜೀವನ ಮಿಷನ ಯೋಜನೆಯಡಿಯಲ್ಲಿ ವೈಯಕ್ತಿಕ ಶೌಚಾಲಯ, ಬಚ್ಚಲು ಗುಂಡಿ, ನಿರ್ಮಾಣ ಮಾಡಿಕೊಳ್ಳುವಂತೆ ತಿಳಿಸಿದರು. ಯೋಜನೆಯ ತಾಂತ್ರಿಕ ವಿಚಾರಗಳನ್ನು ಸದರಿ ಗ್ರಾಮದ ಸಹಾಯಕ ಅಭಿಯಂತರಾದ ಸರ್ವಜ್ಞ ಪೂಜಾರಿ ತಿಳಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಮಹಾಂತೇಶ ಜಮಾದಾರ್ ಮಾತನಾಡಿ ಗ್ರಾಮಸ್ಥರು ಜಲ ಜೀವನ ಮಿಷನ್ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದರು.
ವೇದಿಕೆ ಮೇಲೆ ಅಫಜಲಪೂರು ಸಹಾಯಕ ಕಾರ್ಯಪಾಲಕ ಅಭಿಯಂತರಾದ ರಮೇಶ ಮಂಠಾಳೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಸರ್ವಮಂಗಳಾ ದತ್ತಪ್ಪಗೌಡ ಪಾಟೀಲ್, ಉಪಾಧ್ಯಕ್ಷರಾದ ಕರುಣಾಕರ ನಾರಾಯಣಭಟ್ಟ ಪೂಜಾರಿ ಉಪಸ್ಥಿತರಿದ್ದು, ತಮ್ಮ ಪಾಲಿನ ಸಮುದಾಯ ವಂತಿಕೆ ನೀಡಿದರು. ಸಭೆಯಲ್ಲಿ ಗುರುಬಸಪ್ಪ ಡಿ ಪಾಟೀಲ್, ವಿಯಲಕ್ಷ್ಮಿ ನಾಗೇಶ ಹೊಸ್ಮನಿ, ಶೇಖ ಅಲಿ ನಬಿಸಾಬ ತಾಂಬೋಳಿ, ಶಾಂತಪ್ಪ ಸಿದ್ದಪ್ಪ ಹೊಸಮನಿ, ಶೈನಜಬಿ ಅನ್ವರ ತಾಂಬೋಳೀ, ಸರ್ವಜ್ಞ ಪೂಜಾರಿ ರವರು ಒಟ್ಟು ರೂ.22500/-ಸಮುದಾಯವ ವಂತಿಕೆ ರೂ.ಗಳನ್ನು ನೀಡಿದರು., ರೂಡಾ ಸಂಸ್ಥೆಯ ತಂಡದ ನಾಯಕರಾದ ಸಂತೋಷ ಮೂಲಗೆ, ತಾಲೂಕು ನೋಡಲ್ ಅಧಿಕಾರಿ ಸುರೇಶ ಪಟ್ನಾಯಕ್ ,ಶ್ರವಣಕುಮಾರ ಅಕ್ಕಿಮನಿ ಭಾಗವಹಿಸಿದ್ದರು.