ಗಾಣದಕಟ್ಟೆ.ಲಿಂಗದಹಳ್ಳಿಯಲ್ಲಿ ‘ವಿನಯ ನಡಿಗೆ, ಹಳ್ಳಿ ಕಡೆಗೆ  ಪಾದಯಾತ್ರೆ 

ಸಂಜೆವಾಣಿ ವಾರ್ತೆ

 ಚನ್ನಗಿರಿ, ಜ.22;ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಜಿ.ಬಿ. ವಿನಯ್ ಕುಮಾರ್ ಅವರ ‘ವಿನಯ ನಡಿಗೆ, ಹಳ್ಳಿ ಕಡೆಗೆ’ ವಿನೂತನ ಪಾದಯಾತ್ರೆ ತಾಲ್ಲೂಕಿನ ಜಿ.ಗಾಣದಕಟ್ಟೆ, ಲಿಂಗದಹಳ್ಳಿ ಗ್ರಾಮಗಳಲ್ಲಿ ಯಶಸ್ವಿಯಾಗಿ ಜರುಗಿತು.  ಚನ್ನಗಿರಿ ತಾಲ್ಲೂಕಿನಲ್ಲಿ ಆರು ದಿನಗಳ ಕಾಲ ಸುಮಾರು 60 ಹಳ್ಳಿಗಳ್ಳಿ ಪಾದಯಾತ್ರೆ  ಮತ್ತು ಗ್ರಾಮವಾಸ್ತವ್ಯ ನಡೆಯಲಿದೆ.ಪಾದಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳು,ರೈತರು. ಮುಖಂಡರು, ಮಹಿಳೆಯರು, ಯುವಕರು, ಅಭಿಮಾನಿಗಳು ಪಾಲ್ಗೊಂಡಿದ್ದರು.