ಗಾಡ್ ಹಿಂದೆ ತೇಜ್

“ರೀವೈಂಡ್” ಚಿತ್ರದ ಬಳಿಕ ರಾಮಚಾರಿ-2 ಚಿತ್ರೀಕರಣದಲ್ಲಿ ತೊಡಗಿರುವ ನಟ,ನಿರ್ದೇಶಕ ತೇಜ್ ಇದೀಗ “ಗಾಡ್” ಹಿಂದೆ ಬಿದ್ದಿದ್ದಾರೆ. ಅವರರ್ಥದಲ್ಲಿ ಗಾಡ್ ಎಂದರೆ ದೇವರಲ್ಲ ಬದಲಾಗಿ “ ಗ್ಲೋರಿ ಆಫ್ ಡಾನ್”.

ಈ ಚಿತ್ರವನ್ನು ಕನ್ನಡ,ತೆಲುಗು, ತಮಿಳು, ಹಿಂದಿ, ಮಲೆಯಾಳಂ ಸೇರಿದಂತೆ ಪ್ಯಾನ್ ಇಂಡಿಯಾದಲ್ಲಿ ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದಾರೆ.ಇದೇ ಕಾರಣಕ್ಕೆ ಚಿತ್ರದ ಎಲ್ಲಾ ಎಲ್ಲಾ ಕೆಲಸಗಳನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ.

ಚಿತ್ರದಲ್ಲಿ ಪೊಲೀಸ್, ಡಾನ್ ಮತ್ತು ಸೈಕೋಪಾಥ್ ಚಿತ್ರಗಳು ಪ್ರಮುಖವಾಗಿ ಬರಲಿವೆ. ಇದಲ್ಲದೆ ಇನ್ನೂ ಹಲವು ಪಾತ್ರ ಬಂದು ಹೋಗಲಿವೆ. ಡಾನ್ ಪಾತ್ರಕ್ಕೆ ನಿರ್ದೇಶಕ ತೇಜ್ ಮತ್ತು ಸೈಕೋಪಾಥ್ ಪಾತ್ರಕ್ಕೆ ಸಂಪತ್ ಮೈತ್ರೇಯ ಮಾತ್ರ ಆಯ್ಕೆಯಾಗಿದ್ದಾರೆ. ಇನ್ನು ಪೊಲೀಸ್ ಪಾತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಬೇಕಾಗಿದೆ.

ಗಾಡ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ, ನಟ, ತೇಜ್, ದೊಡ್ಡ ಮಟ್ಟದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದೇ ಮೊದಲ ಬಾರಿ ವಿದೇಶದ ನಾಯಕಿಯನ್ನು ಕರೆತರುವ ಉದ್ದೇಶವೂ ಇದೆ.ಜೊತೆಗೆ ತಮಿಳಿನ ಕಲಾವಿದರೂ ಇರಲಿದ್ದಾರೆ.ಚಿತ್ರ ಎಲ್ಲಾ ಭಾಷೆಗೂ ಹೊಂದಿಕೆಯಗಲಿದೆ ಎಂದರು.

ಗ್ಲೋರಿ ಆಫ್ ಡಾನ್ ಪಕ್ಕಾ ಕಮರ್ಷಿಯಲ್ ಚಿತ್ರ. ಸಮಾಜದಲ್ಲಿ ಯಾರು ಒಳ್ಳೆಯವರು ಎನ್ನುವುದು ಚಿತ್ರದ ತಿರುಳು.ಪೊಲೀಸ್, ಡಾನ್ ಮತ್ತು ಸೈಕೊಪಾತ್ ಮೂರು ಪಾತ್ರದಲ್ಲಿ ಯಾರು ಒಳ್ಳೆಯವರು ಎನ್ನುವುದು ಚಿತ್ರದ ತಿರುಳು ಎಂದರು

ಚಿತ್ರದಲ್ಲಿ ಸುಮಾರು ಪಾತ್ರ ಬಂದು ಹೋಗುತ್ತದೆ ಡಾನ್ ಪಾತ್ರ ಸಮಾಜಕ್ಕೆ ಒಳ್ಳೆಯದು ಮಾಡ್ತಾನೆ, ಪೊಲೀಸ್ ಕಾಪಾಡಬೇಕು ಅವರು ಯಾಕೆ ಕಾಪಾಡಲ್ಲ ಎನ್ನುವುದು ಕತೆ ಚಿತ್ರವನ್ನು ಆಗಸ್ಟ್‍ನಿಂದ ಚಿತ್ರೀಕರಣ ಮಾಡಲಾಗುವುದು ಎಂದು ಮಾಹಿತಿ ಹಂಚಿಕೊಂಡರು.

ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡುವ ಉದ್ದೇಶವೊಂದಲಾಗಿದೆ ಎನ್ನುವ ಮಾಹಿತಿ ಹಂಚಿಕೊಂಡರು.

ಕಮರ್ಷಿಯಲ್ ಚಿತ್ರ

ಗಾಡ್ – ಗ್ಲೋರಿ ಆಫ್ ಡಾನ್ ಚಿತ್ರ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ತೆರೆಗೆ ತರುವ ಉದ್ದೇಶ‌ ನಿರ್ದೇಶಕ ಹಾಗು ನಟ ತೇಜ್ ಅವರದು. ಇದೊಂದು ಕಮರ್ಷಿಯಲ್ ಚಿತ್ರ ಮೂರು ಪಾತ್ರಗಳ ಪೈಕಿ ನಾನು ಮತ್ತು ಸಂಪತ್ ಮೈತ್ರೇಯ ಪಾತ್ರಕ್ಕೆ ಆಯ್ಕೆ ಖಚಿತವಾಗಿದೆ. ಉಳಿದ ಪಾತ್ರದ ಆಯ್ಕೆ ನಡೆಯುತ್ತಿದೆ ಎಂದರು ಅವರು