ಗಾಜಿಪುರ ಕಲ್ಯಾಣ ಮಂಟಪಕ್ಕೆ ಕೆಕೆಆರ್ ಡಿಬಿಯಿಂದ ರೂ 8 ಲಕ್ಷ ಬಿಡುಗಡೆ : ರೇವೂರ

ಕಲಬುರಗಿ: ಮಾ.17: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ವತಿಯಿಂದ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ದತ್ತಾತ್ರೇಯ ಸಿ,ಪಾಟೀಲ ರೇವೂರ ರವರ ಅಮೃತ ಹಸ್ತದಿಂದ ನಗರದ ಗಾಜಿಪುರ ಬಡಾವಣೆಯಲ್ಲಿ ಬರುವ ನಾಟೀಕಾರದಲ್ಲಿ ಶ್ರೀ ನಾಗಾವಿ ಯಲ್ಲಮ್ಮ ದೇವಾಲಯ ಸಮಿತಿ ವತಿಯಿಂದ ಕಲ್ಯಾಣ ಮಂಟಪದ ನಿರ್ಮಾಣಕ್ಕಾಗಿ ಸುಮಾರು ರೂ 8,ಲಕ್ಷ ಅನುದಾನ ಬಿಡುಗಡೆ ಮಾಡಿ ಮಾತನಾಡುತ್ತಾ ಈ ಭಾಗದಲ್ಲಿ ಕಲ್ಯಾಣ ಮಂಟಪ ಮಾಡುವ ಮೂಲಕ ಬಡವರು, ದಲಿತರ ಜನಾಂಗಕ್ಕಾಗಿ ನಾನು ಬದ್ಧ ಎಂದರು.
ಈ ಸಂದರ್ಭದಲ್ಲಿ ದಶರಥ ಧಮ್ಮನಸೂರು, ನಾಗಪ್ಪ ನಾಟೀಕಾರ, ಸುರೇಶ ನಾಟೀಕಾರ, ರುಕ್ಕಪ್ಪಾ ನಾಟೀಕಾರ, ಲಕ್ಮಣ ನಾಟೀಕಾರ, ಮಂಜುನಾಥ ನಾಲವಾರಕರ್, ಗೋಪಾಲ ನಾಟೀಕಾರ, ಮನೋಹರ ಬೀರನೂರ, ದತ್ತು ಭಾಸಗಿ, ಅರವಿಂದ ನಾಟೀಕಾರ, ಬಸವರಾಜ ನಾಟೀಕಾರ, ನಾಗರಾಜ ಸೋಲಾಪುರ, ರಾಜಪುರ ಮಲ್ಲು, ಉಮಾಕಾಂತ ನಾಟೀಕಾರ ಇನ್ನಿತರರು ಭಾಗವಹಿಸಿದರು.