ಗಾಜಾ-ಇಸ್ರೇಲ್ ಕದನಮಕ್ಕಳ ಮೇಲೆ ಪರಿಣಾಮ

ಟೆಲ್ ಅವೀಲ್ (ಇಸ್ರೇಲ್), ಜ.೧೦- ಇಸ್ರೇಲ್ ಹಾಗೂ ಹಮಾಸ್ ನಡುವಿನ ಕದನದಿಂದಾಗಿ ಗಾಜಾದ ನಾಗರಿಕರ ಅದರಲ್ಲೂ ಮಕ್ಕಳ ಮೇಲಿನ ತುಂಬಾ ಪರಿಣಾಮ ಬಿದ್ದಿದೆ. ಹಾಗಾಗಿ ಅಡೆತಡೆಗಳನ್ನು ತೆಗೆದುಹಾಕುವ ಅಗತ್ಯವಿದ್ದು, ಇದರಿಂದ ಹೆಚ್ಚಿನ ಅಗತ್ಯ ಸಹಾಯವನ್ನು ಗಾಜಾಗೆ ನೀಡಬಹುದು ಎಂದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಥನಿ ಬ್ಲಿಂಕೆನ್ ತಿಳಿಸಿದ್ದಾರೆ.
ಕದನ ಆರಂಭವಾದ ಬಳಿಕ ನಾಲ್ಕನೇ ಬಾರಿಗೆ ಇಸ್ರೇಲ್‌ಗೆ ಭೇಟಿ ನೀಡಿ, ಟೆಲ್ ಅವೀವ್‌ನಲ್ಲಿ ಮಾತನಾಡುತ್ತಾ ಬ್ಲಿಂಕೆನ್, ಅಲ್ಲಿನ ನಾಯಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ನಾಗರಿಕ ಜನಸಂಖ್ಯೆಯಲ್ಲಿ ತನ್ನನ್ನು ತಾನು ಹುದುಗಿಸಿಕೊಂಡಿರುವ ಹಮಾಸ್ ಉಗ್ರರ ವಿರುದ್ಧದ ಹೋರಾಡುವಲ್ಲಿ ಇಸ್ರೇಲ್ ದೊಡ್ಡ ಸವಾಲನ್ನು ಎದುರಿಸುತ್ತಿದೆ. ಯುದ್ದದ ಭೀಕರ ಪರಿಸ್ಥಿತಿಯ ಬಗ್ಗೆ ಪ್ರದೇಶದ (ಮಧ್ಯಪ್ರಾಚ್ಯ) ಹಲವು ನಾಯಕರು ಕಳವಳವನ್ನು ಹಂಚಿಕೊಂಡಿದ್ದಾರೆ. ಕಳೆದ ಮೂರು ದಿನಗಳಲ್ಲಿ ಇಸ್ರೇಲ್‌ನ ನೆರೆಹೊರೆಯವರಿಂದ ಹೊಸ ಮತ್ತು ಶಕ್ತಿಯುತ ಸಂದೇಶವನ್ನು ಕೇಳಿದ್ದೇನೆ. ಅವರು ಇಸ್ರೇಲ್‌ನೊಂದಿಗೆ ಜೊತೆಯಾಗಿ ವಾಸಿಸಲು ಮಾತ್ರವಲ್ಲದೆ ಇಸ್ರೇಲ್ ಸೇರಿದಂತೆ ಪ್ರತಿಯೊಬ್ಬರನ್ನು ಸುರಕ್ಷಿತವಾಗಿರಿಸುವ ರೀತಿಯಲ್ಲಿ ಪ್ರದೇಶವನ್ನು ಸಂಯೋಜಿಸಲು ಸಿದ್ಧರಾಗಿದ್ದಾರೆ. ಕೆಲವು ಕಠಿಣ ನಿರ್ಧಾರಗಳು ಮತ್ತು ಕಠಿಣ ಆಯ್ಕೆಗಳ ಅಗತ್ಯವಿರುತ್ತದೆ
ಇದರಲ್ಲಿ ಪ್ಯಾಲೆಸ್ಟಿನಿಯನ್ ರಾಜಕೀಯ ಹಕ್ಕುಗಳ ಸಾಕ್ಷಾತ್ಕಾರಕ್ಕೆ ಸ್ಪಷ್ಟವಾದ ಮಾರ್ಗ ಮತ್ತು ಪ್ಯಾಲೆಸ್ಟೀನಿಯನ್ ರಾಜ್ಯಕ್ಕೆ ಇಸ್ರೇಲ್ ಒಪ್ಪಿಕೊಳ್ಳುವುದನ್ನು ಒಳಗೊಂಡಿರುತ್ತದೆ. ಅಲ್ಲದೆ ಇದು ದೀರ್ಘಕಾಲೀನ ಶಾಂತಿಗೆ ಪ್ರಮುಖವಾಗಿದೆ ಎಂದು ಅವರು ತಿಳಿಸಿದರು. ಇನ್ನು ಬ್ಲಿಂಕೆನ್ ಹೇಳಿಕೆಗೆ ಇಸ್ರೇಲ್ ಸಮ್ಮತಿ ಸೂಚಿಸಿದೆಯೇ ಎಂಬುದು ಇನ್ನೂ ಅಧಿಕೃತವಾಗಿ ತಿಳಿದು ಬಂದಿಲ್ಲ. ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಈ ಹಿಂದೆ ಕೂಡ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಂಥ ರಾಜ್ಯದ ಪರಿಕಲ್ಪನೆಗೆ ವಿರೋಧ ವ್ಯಕ್ತಪಡಿಸಿದ್ದರು.