ಗಾಜರಕೋಟ ಗ್ರಾಮದಲ್ಲಿ ನೂತನ ಬಸವೇಶ್ವರ ವೃತ್ತದ ನಾಮಫಲಕವ ಉದ್ಘಾಟನೆ

ಗುರುಮಠಕಲ್:ಎ.24:ತಾಲೂಕಿನ ಗಾಜರಕೋಟ ಗ್ರಾಮದಲ್ಲಿ ವೀರಶೈವ ಸಮಾಜದ ವತಿಯಿಂದ ಬಸವೇಶ್ವರ ವೃತ್ತದಲ್ಲಿ ಭಕ್ತಿ ಭಂಡಾರಿ, ವಿಶ್ವಗುರು, ಬಸವಣ್ಣನವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಬಸವೇಶ್ವರ ವೃತ್ತದಲ್ಲಿ ಷಟಸ್ಥಲ ಧ್ವಜಾರೋಹಣವನ್ನು ಮಾಡುವುದರೊಂದಿಗೆ. ನೂತನ ಬಸವೇಶ್ವರ ವೃತ್ತದ ನಾಮಫಲಕವನ್ನು ಉದ್ಘಾಟಿಸಿ, ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸುವುದರೊಂದಿಗೆ ಆಚರಿಸಲಾಯಿತು.
12ನೇ ಶತಮಾನದ ವಚನಗಳ ರಚನೆಯೊಂದಿಗೆ ಅನುಭವ ಮಂಟಪವನ್ನು ಸ್ಥಾಪಿಸಿ ಸಮಾಜದಲ್ಲಿದ್ದ ಅನೇಕ ಕಂದಾಚಾರಗಳನ್ನು ತೊಲಗಿಸಿ ಜನಸಾಮಾನ್ಯರಿಗೆ ಲಿಂಗ ಪೂಜೆಯ ಮಹತ್ವವನ್ನು ತಿಳಿಸಿ ಅನೇಕರಿಗೆ ಲಿಂಗ ದೀಕ್ಷೆ ನೀಡಿದ ಮಹಾನ್ ಮಾನವತವಾದಿ ಬಸವಣ್ಣನವರು ಎಂದು ತಮ್ಮ ಉಪನ್ಯಾಸದಲ್ಲಿ ವೇದಮೂರ್ತಿ ವೀರಭದ್ರಯ್ಯ ಸ್ವಾಮಿಯವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಹಿರಿಯರಾದ ಶ್ರೀ ಸಿದ್ದಲಿಂಗ ರೆಡ್ಡಿ ಪೆÇಲೀಸ್ ಪಾಟೀಲ್, ಬಸವರಾಜ್ ಪರಡಿ, ಶಂಕ್ರಪ್ಪ ಅರುಣಿ ನಾಗಪ್ಪಹೋಟ್ಟಿ, ಸುರೇಶ ಹೋಟ್ಟಿ,ಹಾಜರಿದ್ದರು. ಅನೇಕ ಯುವಕರು ವರ್ಣರಂಜಿತ ಸಿಡಿಮದ್ದುಗಳನ್ನು ಸಿಡಿಸಿ ಉತ್ಸಾಹದಿಂದ ಪಾಲ್ಗೊಂಡರು.