ಗಾಂವಕರ ದಂಪತಿಗಳಿಗೆ ದ.ಕ ಸಂಘದಿಂದ ನಾಳೆ ಸನ್ಮಾನ

ಕಲಬುರಗಿ:ಆ.14:ಶಿಕ್ಷಣ ತಜ್ಞರು ಉತ್ತಮ ಆಡಳಿತಗಾರರು ಹಾಗೂ ಕಲ್ಬುರ್ಗಿಯಲ್ಲಿ ಕಾಲೇಜ್ ಪ್ರಾಧ್ಯಾಪಕರಾಗಿ , ಸಾಕ್ಷರತಾ ಅಧಿಕಾರಿಯಾಗಿ ನಂತರ ರಾಜ್ಯದ ವಿವಿಧ ಕಡೆಗಳಲ್ಲಿ ಶಿಕ್ಷಣ ರಂಗದಲ್ಲಿ ಉನ್ನತ ಸ್ಥಾನದಲ್ಲಿದ್ದುಕೊಂಡು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿ ನಿವೃತ್ತಿ ಹೊಂದಿದ ಡಾ. ದೇವಾನಂದ ಆರ್ ಗಾಂವಕರ್ ಮತ್ತು “ಪಡುವಣದ ಪ್ರವಾಸ” ಕೃತಿಗೆ ಇತ್ತೀಚೆಗೆ ಪುಸ್ತಕ ಬಹುಮಾನವನ್ನು ಪಡೆದ ಲೇಖಕಿ ಶ್ರೀಮತಿ ಶಾಲಿನಿ ಗಾಂವಕರ್ ಅವರಿಗೆ ದಕ್ಷಿಣ ಕನ್ನಡ ಸಂಘದ ವತಿಯಿಂದ ಆಗಸ್ಟ್ 15 ರಂದು ಮಂಗಳವಾರ ಸಾಯಂಕಾಲ 5 ಗಂಟೆಗೆ ಕಲಬುರ್ಗಿಯ “ನಂದ ಗೋಕುಲ” (ಎಸ್ ಬಿ ಟೆಂಪಲ್ ರಸ್ತೆ ,ವಿಠಲ ನಗರ) ದಲ್ಲಿ ವಿಶೇಷ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ.
ದಕ್ಷಿಣ ಕನ್ನಡ ಸಂಘದಲ್ಲಿ ದೇವಾನಂದ ಗಾಂವಕರ್ ಕಾರ್ಯದರ್ಶಿಗಳಾಗಿ ಅನುಪಮ ಸೇವೆ ಸಲ್ಲಿಸಿದ್ದರು.ರಾಜ್ಯದ ವಿವಿಧ ಕಡೆಗಳಲ್ಲಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಅಂಕೋಲಾದಲ್ಲಿ ಸದ್ಯ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಶಾಲಿನಿಯವರು ಇತ್ತೀಚೆಗೆ ಬರಹಗಾರ್ತಿಯಾಗಿ ಪ್ರವಾಸ ಅನುಭವದ ಕೃತಿಗಳನ್ನು ಪ್ರಕಟಿಸುತ್ತಿದ್ದು ಅವರ ಸಾಹಿತ್ಯ ಸೇವೆಯಲ್ಲಿ ತೊಡಗಿಸಿ ಕೊಂಡವರು ಹಾಗೂ ಅವರು ಸಂಘದ ಹಿರಿಯ ಸದಸ್ಯರಾಗಿ ಮಹಿಳಾ ಘಟಕದಲ್ಲಿ ಸಂಘದ ಬೆಳವಣಿಗೆಗೆ ತಮ್ಮ ಕೊಡುಗೆಯನ್ನು ನೀಡಿದವರು. ಈ ದಂಪತಿಗಳನ್ನು ಕಲ್ಬುರ್ಗಿಯ ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷರಾದ ಶ್ರೀಮತಿ ವಿದ್ಯಾರಾಣಿ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ, ಗೌರವಾಧ್ಯಕ್ಷರಾದ ಪ್ರಶಾಂತ ಶೆಟ್ಟಿ ಇನ್ನಾ ಕಾರ್ಯದರ್ಶಿ ಪುರಂದರ ಭಟ್ ಮತ್ತುತರರು ಭಾಗವಹಿಸಲಿದ್ದಾರೆ. ನಂತರ ಸಂಘದ ಮಾಸಿಕ ಸಭೆ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಸಂಘದ ಎಲ್ಲ ಸದಸ್ಯರು ಹಾಜರಾಗಿ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಬೇಕಾಗಿ ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ