ಗಾಂಧೀ ಚೌಕ್ ಸರ್ಕಾರಿ ಶಾಲೆ ಅವರಣದಲ್ಲಿ ಹಂದಿಗಳ ಹಾವಳಿ

ಶಹಾಪುರ:ಜು.22:ನಗರದ ಹೃದಯ ಭಾಗದಲ್ಲಿರುವ ಗಾಂಧೀ ಚೌಕ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯ ಗೇಟ ಅಳವಡಿಸಿದ್ದರೂ ಹಂದಿಗಳು ಮಕ್ಕಳು ಊಟ ಮಾಡಲು ಬಿಡದಂತೆ ಕಾಡುತ್ತಿವೆ. ಮಧ್ಯಾನದಲ್ಲಿ ಮಕ್ಕಳಿಗೆ ಬಿಸಿಯೂಟ ಕುಳಿತರೆ ಸಾಕು ಹಂದಿಗಳು ಮಕ್ಕಳ ಊಟಕ್ಕೂ ಕನ್ನ ಹಾಕುತ್ತವೆ. ಯಾವುದೆ ನಿರ್ಬಂಧವಿಲ್ಲದಂತಾಗಿದ್ದು.ಅಲ್ಲದೆ ಸ್ವಲ್ಪ ಸ್ಕೂಲ್ ಬ್ಯಾಗ ಇಟ್ಟರೆ ಸಾಕು ಬ್ಯಾಗಿನಲ್ಲಿದ್ದ ಮಕ್ಕಳ ಟೀಪಿನ್ ಹರಿದು ತಿನ್ನುತ್ತವೆ. ಈ ಅವ್ಯವಸ್ಥೆಗಳಿಂದ ಮಕ್ಕಳು ತೀರಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕ,ರಾ, ದ,ಸಂಸ, ನಗರ ಸಂಚಾಲಕರಾದ ಪುರುಶೋತ್ತಮ ಬಬಲಾದಿ ಆರೋಪಿಸಿದ್ದಾರೆ.
ಈ ಕುರಿತು ಯಾರೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ.ಅಲ್ಲದೆ ಊಟದ ಮುಸೂರಿ ಅನ್ನ ಡಸ್ಟಪಿನ್ ಗೆ ಹಾಕಿದಲ್ಲಿ ಈ ಅವ್ಯವಸ್ಥೆಗೆ ತೆರಕಾಣುತ್ತಿದ್ದು ನಗರಸಭೆ ಅಧಿಕಾರಿಗಳು ಪ್ರತಿ ಶಾಲೆಗೊಂದು ದೊಡ್ಡದಾದ ಡಸ್ಟಪಿನ್ ಬಾಕ್ಸ್ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಮತ್ತು ಬಿಸಿಯೂಟ ಆಹಾರ ಧ್ಯಾನ್ಯಗಳನ್ನು ಸಮಪರ್ಕವಾಗಿ ಸ್ವಚ್ಚಗೊಳಿಸದೆ ಅಡಿಗೆ ಸಿಬ್ಬಂದಿಯವರು ಯಥಾಸ್ಥಿತಿಯಲ್ಲಿ ಅಡುಗೆ ಮಾಡುತ್ತಿದ್ದಾರೆ. ಅಕ್ಕಿ ಬೇಳೆಕಾಳುಗಳನ್ನು ನೀರಿನಲ್ಲಿ ತೊಳೆದು ಹಾಕಬೇಕು ಅಲ್ಲದೆ ಇದರಿಂದ ಗೊಡಾನಲ್ಲಿದ್ದ ದೂಳನ್ನು ಕಡೆಗಾಗುತ್ತದೆ ಈ ಕುರಿತು ಅಕ್ಷರ ದಾಸೊಹ ಅಧಿಕಾರಿಗಳು ಗಮನ ಹರಿಸಬೇಕು ಎಂದು ಅವರು ಪತ್ರಿಕೆ ಪ್ರಕಟಣೆ ಮುಖಾಂತರ ಒತ್ತಾಯಿಸಿದ್ದಾರೆ.ಅಸುರಕ್ಷತಾ ಅವ್ಯವಸ್ಥೆ ಮುಂದುವರೆದಲ್ಲಿ ಮೇಲಾಧಿಕಾರಿಗಳ ವಿರುದ್ದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನಿಡಿದ್ದಾರೆ.ಹಂದಿಗಳ ಹಾವಳಿಯನ್ನು ತಡೆಗಟ್ಟಿ ಮಕ್ಕಳ ಆರೋಗ್ಯದಡೆಗೆ ಶಿಕ್ಷಕರು ಹೆಚ್ಚು ಗಮನ ಹರಿಸಬೇಕು ಎಂದು ಅವರು ಆಗ್ರಹ ಮಾಡಿದ್ದಾರೆ.