ಗಾಂಧೀಜಿ, ಶಾಸ್ತ್ರೀಜಿ ಜಯಂತಿ ಆಚರಣೆ


ನವಲಗುಂದ, ಅ 2: ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಂತಹ ಮಹಾತ್ಮಾ ಗಾಂಧೀಜಿಯವರ ತ್ಯಾಗವನ್ನು ನಾವೆಲ್ಲರೂ ನೆನೆಯಬೇಕು ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಜಿಯವರನ್ನು ಕೂಡಾ ನೆನಪು ಮಾಡಿಕೊಳ್ಳುವುದರ ಮೂಲಕ ಅವರ ಸರಳತೆಯ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮೋದಿನಸಾಬ್ ಶಿರೂರು ಹೇಳಿದರು.
ಅವರು ಪುರ ಭವನದಲ್ಲಿ ಹಮ್ಮಿಕೊಂಡ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಜಿಯವರ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಎಲ್ಲರೂ ಮಹಾತ್ಮಾ ಗಾಂಧೀಜಿಯವರ ತತ್ವಾದರ್ಶಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಪ್ರಕಾಶ್ ಶಿಗ್ಲಿ, ಶಿವಾನಂದ ತಡಸಿ, ಸುಲೇಮಾನ್ ನಾಸಿಪುಡಿ, ಹುಸೇನಬಿ ಧಾರವಾಡ, ಮ್ಯಾನೇಜರ್ ಎಸ್.ಬಿ. ಪಾಟೀಲ್, ಶೋಭಾ ಹೆಬ್ಬಳ್ಳಿ, ಸಿಬ್ಬಂದಿಗಳಾದ ಸಿ. ಆರ್. ನಮಸ್ತೆಮಠ, ಜೆ.ಎಸ್. ಕಣವಿ, ಜಗದೀಶ್ ಹೂಗಾರ ಹಾಗೂ ಪುರಸಭೆ ಸಿಬ್ಬಂದಿಗಳು ಪೌರಕಾರ್ಮಿಕರ ಉಪಸ್ಥಿತರಿದ್ದರು