ಗಾಂಧೀಜಿ, ಶಾಸ್ತ್ರೀಜಿಯವರ ತತ್ವಾದರ್ಶ ಅಳವಡಿಸಿಕೊಳ್ಳಿ


ನವಲಗುಂದ, ಅ 2: ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‍ಬಹದ್ದೂರ ಶಾಸ್ತ್ರೀಯವರು ಮಾಡಿರುವ ತ್ಯಾಗ, ಹೋರಾಟ, ಸತ್ಯಾಗ್ರಹದಂತಹ ಹಲವಾರು ಗುಣಗಳು ಪ್ರತಿಯೊಬ್ಬ ಭಾರತೀಯರಿಗೆ ಮಾದರಿಯಾಗಿದ್ದು, ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ನಾಗರತ್ನಾ ಕುರಡೇಕರ ಹೇಳಿದರು.
ಅವರು ಪಟ್ಟಣದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‍ಬಹದ್ದೂರ ಶಾಸ್ತ್ರೀಯವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಗೌರವಾರ್ಪಣೆ ಸಲ್ಲಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಂ.ಬಿ. ಬಾಗಡಿ ಮಾತನಾಡಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‍ಬಹದ್ದೂರ ಶಾಸ್ತ್ರೀಜಿ ಇವರ ಜೀವನವು ಪ್ರತಿಯೊಬ್ಬ ಭಾರತೀಯರಿಗೆ ಸ್ಪೂರ್ತಿಯಾಗಿದ್ದು, ಎಲ್ಲರೂ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗಿದರೆ ದೇಶವು ಇನ್ನೂ ಪ್ರಗತಿ ಕಾಣಲಿದೆ ಎಂದರು.
ಶ್ರೀಧರ ಲೋನಕರ ಸ್ವಾಗತ ಭಾಷಣ ಮಾಡಿದರು. ರವಿ ಬ್ಯಾಹಟ್ಟಿ ಪ್ರಾಸ್ತಾವಿಕ ನುಡಿ ಹಾಗೂ ಪ್ರತಿಭಾ ನಿಡಗುಂದಿ ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಸಂತೋಷ ಹುಬ್ಬಳ್ಳಿ, ಆಯ್.ಬಿ. ಸಾತಿಹಾಳ, ಬಸವರಾಜ ಜಿ. ಸೂಡಿ, ಬಿ.ವಿ. ಏಣಗಿ, ಪ್ರಸನ್ನ ಪಂಢರಿ, ವಿನಾಯಕ ಮಿರಜಕರ, ಸವಿತಾ, ಚಿಕ್ಕಣ್ಣವರ, ಸುಗುಣ ಡಿ.ವಿ. ಸೇರಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.