ಗಾಂಧೀಜಿ ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು:ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಬೀದರ. ಅ.03: ಮಹಾತ್ಮ ಗಾಂಧೀಜಿಯವರು ಸತ್ಯ. ಅಹಿಂಸೆ ಮತ್ತು ಸತ್ಯಾಗ್ರಹಗಳ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ವಿಶ್ವದ ಶ್ರೇಷ್ಠ ನಾಯಕರಾಗಿದ್ದರು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಹತ್ಮಾ ಗಾಂಧೀಜಿಯವರ 154 ನೇ ಜನ್ಮ ದಿನಾಚರಣೆ ಅಂಗವಾಗಿ ಗಾಂಧೀಜಿಯವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಗಾಂಧೀಜಿಯವರು ನಮ್ಮ ದೇಶದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ. ಜಗತ್ತಿನ ಕೆಲವೇ ಶ್ರೇಷ್ಠ ವ್ಯಕ್ತಿಗಳಲ್ಲಿ ಗಾಂಧೀಜಿಯವರು ಒಬ್ಬರಾಗಿದ್ದಾರೆ. ಏಸು ಕ್ರಿಸ್ತ. ಬುದ್ದ. ಅವರು ಸಂತರಾಗಿ ವಿಶ್ವ ವಿಖ್ಯಾತರಾದರೆ ಗಾಂಧೀಜಿಯವರು ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಜಗತ್ತಿಗೆ ಪರಿಚಿತರಾಗಿರುವುದು ಇದು ಸಾಮಾನ್ಯದ ಮಾತಲ್ಲ. ಆಲ್ಬರ್ಟ್ ಐನ್ ಸ್ಟೈನ್ ಹೇಳುವಂತೆ ರಕ್ತ ಮಾಂಸದಿಂದ ಕೂಡಿದ ಇಂತಹ ವ್ಯಕ್ತಿ ಭೂಮಿಯ ಮೇಲೆ ಹೇಗೆ ಇದ್ಧನು ಎಂದು ಮುಂದಿನ ಯುವ ಪೀಳಿಗೆ ನಂಬಲಾಗದು ಎನ್ನುತ್ತಾರೆ ಎಂದು ಹೇಳಿದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಸಮಾಜದ ವಿವಿಧ ರಂಗಗಳ ಅಭಿವೃದ್ಧಿಗಾಗಿ ಅವರು ಶ್ರಮಿಸಿದ್ದರು. ಅಸ್ಪ್ರೃಶ್ಯತೆ. ಬಡತನ ನಿವಾರಣೆ ಸಾಮಾಜಿಕ ಸಮಾನತೆ ಸೇರಿದಂತೆ ಅಂದಿನ ಜ್ವಲಂತ ಸಮಸ್ಯೆಗಳ ನಿವಾರಣೆಗಾಗಿ ಇಡೀ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು ಎಂದರು.
ಇಂದಿನಂತೆ ಅಂದಿನ ದಿನಮಾನಗಳಲ್ಲಿ ಯಾವುದೇ ಪತ್ರಿಕೆಗಳಾಗಲಿ. ಮಾಧ್ಯಮಗಳ ಹೆಚ್ಚಿನ ಪ್ರಚಾರವಿಲ್ಲದ ಕಾಲದಲ್ಲಿ ಅವರು ಹೋದ ಕಡೆ ಸಾವಿರಾರು ಜನರು ಸೇರುತ್ತಿದ್ದರು. ಅವರ ಶಾಂತಿ, ಅಹಿಂಸೆ, ಸತ್ಯಾಗ್ರಹ ಇಂದಿಗೂ ಪ್ರಸ್ತುತ ಇದ್ದು ಗಾಂಧೀಜಿಯವರು ಮುಂದಾಲೋಚನೆಯ ನಾಯಕರಾಗಿದ್ದರು ಎಂದು ಹೇಳಿದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ. ನಾನು ಸುಡಾನ್ ದೇಶದಲ್ಲಿ ಶಾಂತಿ ಪಾಲನಾ ಪಡೆಯಲ್ಲಿದ್ದಾಗ ಅಲ್ಲಿ 38 ದೇಶಗಳ ಅಧಿಕಾರಿಗಳಿದ್ದರು ಅವರು ನಾವು ಭಾರತ ಎಂದಾಗ ಗಾಂಧಿಜೀಯವರ ನಾಡಿನವರು ತಾವು ಎಂದು ಹೇಳುತ್ತಿದ್ದರು.
ನಾವು ವಿಶ್ವ ಪರ್ಯಟನೆಮಾಡಲು ಮಧ್ಯಪ್ರಾಚ್ಯ ದೇಶ ಹಾಗೂ ರಶೀಯಾಗಳ ಮೂಲಕ ಹೊರಟಾಗ ನಮ್ಮ ವಾಹನಗಳಿಗೆ ಗಾಂಧಿಜೀಯವರ ಪೆÇೀಟೋ ಹಾಕಿ ಹೊರಟಿದ್ದೇವು ಆಗ ಎಲ್ಲಾ ದೇಶಗಳಲ್ಲಿ ಅವರನ್ನು ಗುರುತಿಸುತ್ತಿದ್ದರು. ಅವರು ಮುಂದಾಲೋಚನೆ ನಾಯಕ ಮಾತ್ರರಾಗದೇ ಇಡೀ ತಮ್ಮ ಜೀವನದುದ್ದಕ್ಕು ಸತ್ಯ ಮತ್ತು ಅಹಿಂಸೆಯ ಬಗ್ಗೆ ಹೇಳಿದ್ದರು ಎಂದರು.
ಆರ್.ವ್ಹಿ.ಬಿಡಪ್ಪ ಕಾಲೇಜಿನ ಪ್ರಾಂಶುಪಾಲರಾದ ಮುನಿಯಪ್ಪ ಟಿ. ಅವರು ಗಾಂಧೀಜಿಯವರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ. ಗಾಂಧೀಜಿಯವರು ವರ್ಣ ಭೇಧ ನೀತಿಯ ವಿರುದ್ದ ಆಫ್ರಿಕಾ ದೇಶದಲ್ಲಿ ಹೋರಾಟ ಮಾಡಿದ್ದರು.
ಸತ್ಯಾಗ್ರಹದ ಮೂಲಕ ನಾಗರಿಕರ ಹಕ್ಕುಗಳ ಸಂರಕ್ಷಣೆ ಮಾಡಿದ್ದರು. ಅವರ ರಾಜಕೀಯ ಗುರು ಗೋಪಾಲ ಕೃಷ್ಣ ಗೋಖಲೆ ಅವರ ಮಾರ್ಗದರ್ಶನದಲ್ಲಿ ಅಸಹಕಾರ ಚಳುವಳಿಯಲ್ಲಿ ದುಮುಕಿ ಹಲವಾರು ಹೋರಾಟಗಳನ್ನು ಶಾಂತಿಯುತವಾಗಿ ಮಾಡುವ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಮಾಹಾನ್ ಮಾನವತಾವಾಧಿಯಾಗಿದ್ದ ಗಾಂಧೀಜಿಯವರು ಬಡತನ ನಿವಾರಣೆ. ಮಹಿಳಾ ಹಕ್ಕುಗಳು ರಕ್ಷಣೆ. ಗ್ರಾಮಗಳ ಅಭಿವೃದ್ಧಿ. ಗುಡಿ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡಿದ್ದರು ಎಂದು ಹೇಳಿದರು.
ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಗಾಂಧೀಜಿಯವರ ಕುರಿತು ಪ್ರಬಂಧ ಸ್ಪರ್ಧೆಯನ್ನು ಶಾಲಾ- ಕಾಲೇಜಿನ ಮಕ್ಕಳಿಗೆ ಏರ್ಪಡಿಸಲಾಗಿತ್ತು ಇದರಲ್ಲಿ ಪ್ರಥಮ. ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಮಕ್ಕಳಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು. ಶಿವಕುಮಾರ ಪಾಂಚಾಳ ಮತ್ತು ತಂಡದವರು ಗಾಂಧೀಜಿಯವರ ಕುರಿತು ಮೀರಾ ಭಜನೆ ಹಾಡುಗಳನ್ನು ಹಾಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ. ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೆಶಕರಾದ ಸುರೇಖಾ. ವಾರ್ತಾಧಿಕಾರಿ ಜಿ. ಸುರೇಶ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ. ವಿಜಯಕೃಷ್ಣ. ಶಿರಸ್ತೆದಾರ ಕಿರಣ. ನರೇಶ. ಸೇರಿದಂತೆ ಜಿಲ್ಲಾಧಿಕಾಗಳ ಕಛೇರಿ ಹಾಗೂ ವಾರ್ತಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.