ಗಾಂಧೀಜಿಯ ಆದರ್ಶಗಳು ಅನುಕರಣೀಯ

ಮೋಹನದಾಸ ಕರಮಚಂದ್ ಗಾಂಧಿ ಸಹಸ್ರಮಾನದ ಮಾನವ. ಬಿಬಿಸಿ ನಡೆಸಿದ ಸಮೀಕ್ಷೆಯ ಅನ್ವಯ ಏಸು, ಐನ್‌ಸ್ಟೆöÊನ್, ಕಾರ್ಲ್ಮಾರ್ಕ್ಸ್ ಮುಂತಾದವರನ್ನು ಹಿಂದಕ್ಕಿಟ್ಟು ಪ್ರಥಮ ಸ್ಥಾನ ಪಡೆದ ಮಹಾತ್ಮ.1869ರ ಅಕ್ಟೋಬರ್ 2 ರಂದು ಗುಜರಾತಿನ ಪೋರ್ ಬಂದರಿನಲ್ಲಿ ಜನಿಸಿದ ಮೋಹನದಾಸ ಕರಮಚಂದ ಗಾಂಧಿ ‘ರಾಷ್ಟçಪಿತ’ ಎಂದು ಭಾರತದಲ್ಲಿ ಪೂಜ್ಯರು. ಇಡೀ ವಿಶ್ವದಲ್ಲಿ ಅವರು ‘ಮಹಾತ್ಮ’ ಎಂದೇ ಗೌರವಾನ್ವಿತರು. ಗಾಂಧೀಜಿ ಸರಿಸಾಟಿಯಿಲ್ಲದ ಜನನಾಯಕರು. ಬ್ರಿಟಿಷರ ದಾಸ್ಯದಲ್ಲಿ ತಹತಹಿಸುತ್ತಿದ್ದ ಭಾರತೀಯರನ್ನು ತಮ್ಮ ಆದರ್ಶ ಗುಣಗಳಿಂದ ಸೂಜಿಗಲ್ಲಿನಂತೆ ತಮ್ಮೆಡೆಗೆ ಸೆಳೆದರು. ಅವರ ನಾಯಕತ್ವದಿಂದ ಇಡೀ ಭಾರತೀಯರ ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾಯಿತು. ಬ್ರಿಟೀಷರನ್ನು ಎದುರಿಸಲು ಅವರು ಭಾರತೀಯರಿಗೆ ನೀಡಿದ ದಿವ್ಯಾಸ್ತçವೆಂದರೆ ‘ಸತ್ಯಾಗ್ರಹ’ ‘ಅಹಿಂಸೆ’ ಮತ್ತು ‘ಸತ್ಯ’. ನೈತಿಕತೆಯಿಲ್ಲದ ವ್ಯಾಪಾರ, ಮರ್ಯಾದರಹಿತಭೋಗ, ಸಿದ್ದಾಂತವಿಲ್ಲದ ರಾಜಕೀಯ, ಚಾರಿತ್ರö್ಯವಿಲ್ಲದ ಜ್ಞಾನ, ಮಾನವೀಯತೆ ಮೆರೆಯದ ವಿಜ್ಞಾನ, ಕರ್ಮವಿಲ್ಲದ ಸಂಪತ್ತು ಮತ್ತು ತ್ಯಾಗವಿಲ್ಲದ ಪೂಜೆ ಇವು ಗಾಂಧೀಜಿ ದೃಷ್ಟಿಯಲ್ಲಿ ಸಪ್ತ ಪಾತಕಗಳು ಎನಿಸಿದ್ದವು.ವಿದೇಶಿ ವಸ್ತುಗಳಿಗೆ ಬಹಿಷ್ಕಾರ, ಸ್ವದೇಶಿ ವಸ್ತುಗಳ ಬಳಕೆ, ಗ್ರಾಮೀಣ ಜನರ ಸ್ವಾವಲಂಬನೆ, ಮದ್ಯಪಾನ ನಿಷೇಧ, ಹಿಂದೂ-ಮುಸ್ಲಿA ಐಕ್ಯತೆ, ಹಿಂದಿ ಪ್ರಚಾರ, ದೇಶೀಯ ಭಾಷೆಗಳಿಗೆ ಪ್ರೋತ್ಸಾಹ ಇವು ಭಾರತೀಯರ ಮುಂದೆ ಅವರು ಇರಿಸಿದ ರಚನಾತ್ಮಕ ಕಾರ್ಯಗಳು. ‘ಗಾಂಧಿ ಟೋಪಿ’ ಮತ್ತು ‘ಚರಕ’ ಇವು ದೇಶದ ಸ್ವಾತಂತ್ರö್ಯ ಹೋರಾಟದ ಸಂಕೇತಗಳೆನಿಸಿದವು. ಕರನಿರಾಕರಣೆ, ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಕಾಯಿದೆಭಂಗ ಹೋರಾಟ, ಉಪವಾಸ – ಈ ಎಲ್ಲವೂ ಬಾಪೂ ಭಾರತೀಯರನ್ನು ಮುನ್ನಡೆಸಿದ ಸ್ವಾತಂತ್ರö್ಯ ಹೋರಾಟದ ವಿವಿಧ ಮಜಲುಗಳು. ಹೋರಾಟದ ಕೊನೆಯ ಹಂತವಾಗಿ ಗಾಂಧೀಜಿ ಸಾರಿದ ಸ್ವಾತಂತ್ರö್ಯ ಸಂಗ್ರಾಮದ ಘೋಷಣೆ ‘ಕ್ವಿಟ್ ಇಂಡಿಯಾ’ ‘ಚಲೇ ಜಾವ್’, ಇಂಗ್ಲಿಷರೇ ಭಾರತವನ್ನು ಬಿಟ್ಟು ತೊಲಗಿ’ ಚಳುವಳಿಗಳು ಭಾರತೀಯರಲ್ಲಿ ಅಮೃತ ಸಿಂಚನವನ್ನುAಟುಮಾಡಿತು. 1942ರಲ್ಲಿನ ಈ ಘೋಷಣೆ ಪ್ರತಿತೊಬ್ಬ ಭಾರತೀಯನ ಪಾಲಿಗೆ ‘ಮಾಡು ಇಲ್ಲವೇ ಮಡಿ’ ಎನ್ನುವ ಸಂದೇಶವನ್ನು ಬಿತ್ತರಿಸಿತು. ಇಂಗ್ಲೀಷ್ ಸರ್ಕಾರ ಈ ಅದ್ಭುತ ಎನಿಸಿದ ಚಳುವಳಿಯನ್ನು ಹತ್ತಿಕ್ಕಲು ಹರಸಾಹಸ ಮಾಡಿತು. ಗಾಂಧೀಜಿ ಮತ್ತು ಮುಖಂಡರನ್ನು ಬಂಧಿಸಿ ಸೆರೆಮನೆಗೆ ದೂಡಿತು. ಸಾವಿರ-ಸಾವಿರ ಸಂಖ್ಯೆಯಲ್ಲಿ ಜನರನ್ನು ಬಂಧಿಸಿತು. 1944ರಲ್ಲಿ ಗಾಂಧೀಜಿ ಬಿಡುಗಡೆಯಾದರು. ಬ್ರಿಟಿಷರಿಗೆ ಭಾರತವನ್ನು ಬಿಟ್ಟು ಹೊರಡುವುದು ಅನಿವಾರ್ಯ ಎನಿಸಿತು. ಭಾರತೀಯರಿಗೆ ಅಧಿಕಾರ ಹಸ್ತಾಂತರಿಸಲು ಸಿದ್ಧತೆ ನಡೆಸಿದರು. ಇದು ಭಾರತೀಯರ ನೈತಿಕ ಹೋರಾಟಕ್ಕೆ ಸಿಕ್ಕಿದ ಗೌರವವಾಗಿತ್ತು. 1947ರ ಆಗಸ್ಟ್ 15ರಂದು ಗಾಂಧೀಜಿ ನಡೆಸಿದ ದೀರ್ಘ ಹೋರಾಟಕ್ಕೆ ಗೆಲುವು ದೊರೆಯಿತು. ಭಾರತೀಯರು ಬಯಸಿದ್ದ ಸ್ವಾತಂತ್ರö್ಯ ದೊರೆಯಿತು.ಸತ್ಯ, ಧರ್ಮ, ನ್ಯಾಯ, ನಿಷ್ಠೆ ಮೊದಲಾದ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ವಿಭೂತಿಪುರುಷ ಬಾಪೂ. “ಸರ್ವೋದಯ”ವನ್ನು ಬಯಸಿದ್ದರು. ‘ರಾಮರಾಜ್ಯ’ ಸ್ಥಾಪನೆಯ ಕನಸು ಕಂಡಿದ್ದರು. “ಬಲ ಶಾರೀರಿಕ ಸಾಮರ್ಥ್ಯದಿಂದ ಬರುವುದಿಲ್ಲ. ಅದಮ್ಯ ಇಚ್ಛಾಶಕ್ತಿಯಿಂದ ಬರುತ್ತದೆ” ಎಂದು ಅವರು ಬಲವಾಗಿ ನಂಬಿದ್ದರು. ಅವರ ದೃಷ್ಟಿಯಲ್ಲಿ ‘ಸ್ವಾರ್ಥತ್ಯಾಗ’ ಮತ್ತು “ಸೇವಾ ಭಾವನೆ” ಮಹತ್ವದಾಗಿತ್ತು. ಗಾಂಧೀಜಿ ‘ಗೀತೆ”ಯನ್ನು ತಮ್ಮ ಪ್ರಾಣ ಎನ್ನುತ್ತಿದ್ದರು. ಕರ್ಮ ಮಾಡುವುದಷ್ಟೇ ನಮ್ಮ ಕೆಲಸ, ಫಲ ಪರಮಾತ್ಮನ ಇಚ್ಚೆಯದು ಎಂದು ಅವರು ನಂಬಿದ್ದರು. ಸಮಯ ಪರಿಪಾಲನೆ, ಶಿಸ್ತು, ಅಸ್ಪೃಶ್ಯತೆಯ ನಿರ್ಮೂಲನೆ, ಗ್ರಾಮಸ್ವರಾಜ್ಯ, ಮೂಲಶಿಕ್ಷಣ ಮೊದಲಾದವು ಗಾಂಧೀಜಿ ಜೀವನದಲ್ಲಿ ಹಾಸು ಹೊಕ್ಕಾಗಿತ್ತು. ಕಿರಿಯರು ಮತ್ತು ಹಿರಿಯರಿಗೆ ಅವರ ಆದರ್ಶ ಜೀವನ ದಾರಿ ದೀಪವಾಗಲಿದೆ.ಗಾಂಧೀಜಿಯವರ ಜೀವನದ ಮಾನವೀಯತೆಯ ಮುಖ.ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹದ ಬಿಸಿ ದಿನೇ ದಿನೇ ಗಾಢವಾಗುತ್ತಿತ್ತು. ಸತ್ಯಾಗ್ರಹಿಗಳು ತಮ್ಮ ನಿಲುವಿಗೆ ಅಂಟಿಕೊAಡು ಜೈಲು ಸೇರುತ್ತಿದ್ದರು. ಜೈಲುಗಳು ಸತ್ಯಾಗ್ರಹಿಗಳಿಂದ ತುಂಬಿತ್ತು. ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲು ಸೇರಿದ ಕುಟುಂಬದವರಿಗೆ ಟಾಲ್‌ಸ್ಟಾಯ್ ಆಶ್ರಮಕ್ಕೆ ಹೋಗಿ ಅವರುಗಳಿಗೆ ಸಾಂತ್ವನ ಹೇಳುತ್ತಿದ್ದರು. ಅವರಲ್ಲಿ ನೈತಿಕ ಸ್ಥೆöÊರ್ಯ ತುಂಬುತ್ತಿದ್ದರು. ಹೆಂಗಸರು ಮತ್ತು ಮಕ್ಕಳಿಗೆ ತಮ್ಮ ಕೈಲಾದ ಚಿಕ್ಕ ಚಿಕ್ಕ ಕೆಲಸಗಳನ್ನು ಮಾಡಿಕೊಡುತ್ತಿದ್ದರು.

 ಒಮ್ಮೆ ಬಟ್ಟೆ ಒಗೆಯಲು ಹೆಂಗಸರು ಚಿಕ್ಕ ಗಂಟು ಹಿಡಿದು ಹೊರಟರು. ಅವರು ಪ್ರತಿಯೊಬ್ಬ ಮಹಿಳೆಯ ಬಳಿ ಬಂದು, “ನಿಮ್ಮ ಮಕ್ಕಳ ಬಟ್ಟೆಗಳನ್ನು ಕೊಡಿ. ಅವುಗಳನ್ನು ನದಿಯಲ್ಲಿ ಒಗೆದುಕೊಂಡು ಬರುತ್ತೇನೆ. ಮಕ್ಕಳು ಇನ್ನೂ ಚಿಕ್ಕವರು. ಅವರನ್ನು ಇಲ್ಲಿಯೇ ಬಿಟ್ಟು ಅಥವಾ ಕಂಕುಳಲ್ಲಿ ಎತ್ತಿಕೊಂಡು ನದಿಯವರೆಗೆ ಹೋಗುವುದು ಬೇಡ. ನಾನು ಬಟ್ಟೆ ಒಗೆದು ತರುತ್ತೇನೆ. ನೀವು ಇದಕ್ಕಾಗಿ ಸಂಕೋಚಪಡುವುದು ಬೇಡ. ಒಂದು ಒಳ್ಳೆಯ ಉದ್ದೇಶದಿಂದ ಪುರುಷರು ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲಿಗೆ ಹೋಗಿದ್ದಾರೆ. ನಾನು ಅವರ ಕುಟುಂಬದ ಜನರಿಗೆ ಕಿಂಚಿತ್ತು ಸಹಾಯ ಮಾಡುವುದು ಬೇಡವೇ?” ಎಂದು ಹೇಳಿ ಅವರಿಂದ ಒಗೆಯಲು ಬಟ್ಟೆ ತೆಗೆದುಕೊಳ್ಳುತ್ತಿದ್ದರು. ಮಹಿಳೆಯರು ಸಂಕೋಚದಿAದ ಬಟ್ಟೆ ಕೊಡುತ್ತಿದ್ದರು. ಗಾಂಧೀಜಿ ಅವುಗಳನ್ನು ನದಿಯಲ್ಲಿ ಒಗೆದು ಚೊಕ್ಕಟಗೊಳಿಸಿ, ಬಿಸಿಲಿನಲ್ಲಿ ಒಣಗಿಸಿ ಚೆನ್ನಾಗಿ ಮಡಿಸಿ ಮಹಿಳೆಯರಿಗೆ ಒಪ್ಪಿಸುತ್ತಿದ್ದರು. 

 ಗಾಂಧೀಜಿ ಮರಣಹೊಂದಿ 75 ವರ್ಷಗಳಾದವು. ಅವರು ಆಚರಿಸಿದ ಸದ್ಗುಣಗಳು ಹಿಂದೆ, ಇಂದೂ, ಮುಂದೆಯೂ ನಮ್ಮೆಲ್ಲರಿಗೂ ದಾರಿದೀಪ. ಅವರು ಈ ಯುಗದ ಶ್ರೇಷ್ಠ ಪುರುಷ. ಅವರ ದಾರಿಯಲ್ಲಿ ಜೀವನ ನಡೆಸುವುದು ವ್ಯಕ್ತಿಗೆ ಮತ್ತು ಸಮಾಜಕ್ಕೆ ಒಳ್ಳೆಯದು. 

– ಶಿವನಕೆರೆ ಬಸವಲಿಂಗಪ್ಪ

– ಕರುಣಾ ಜೀವ ಕಲ್ಯಾಣ ಟ್ರಸ್ಟ್ (ರಿ)

ದಾವಣಗೆರೆ