ಗಾಂಧೀಜಿಯವರ 154ನೇ ಜನ್ಮದಿನೋತ್ಸವ ಆಚರಣೆ

(ಸಂಜೆವಾಣಿ ವಾರ್ತೆ)
ಇಂಡಿ : ಅ.3: ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿಯವರ 154ನೇ ಜನ್ಮದಿನ ಹಾಗೂ ಭಾರತದ ಎರಡನೇ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ119ನೇ ಜನ್ಮದಿನಾಚರಣೆಯನ್ನು ದೇಶದೆಲ್ಲೆಡೆ ಇಬ್ಬರ ಮಹಾನ ವ್ಯಕ್ತಿಗಳ ತಮ್ಮ ಕಾಯ9ಗಳು ಹಾಗೂ ಆಲೋಚನೆಗಳ ಮೂಲಕ ದೇಶ ಮತ್ತು ಪ್ರಪಂಚದಾದ್ಯಂತ ಜನರ ಮನಸ್ಸಿನಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ಸೋಮಯ್ಯ ಮಠಪತಿ ಹೇಳಿದರು. ತಾಲೂಕಿನ ನಾದ ಬಿಕೆ ಪ್ರಾಥಮಿಕ ಶಾಲೆಯಲ್ಲಿ ಇಂದು ಮಹಾತ್ಮ ಗಾಂಧೀಜಿಯವರ 154 ನೇ ಜನ್ಮದಿನಾಚರಣೆಯ ಕಾಯ9ಕ್ರಮದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಮಾತನಾಡಿದ ಅವರು ಗಾಂಧೀಜಿ ಅವರು 2ನೇ ಅಕ್ಟೋಬರ್ 1869 ರಲ್ಲಿ ಗುಜರಾತಿನ ಪೆÇರಬಂದರನಲ್ಲಿ ಜನಿಸಿದರು.ಶಾಸ್ತ್ರಿ ಅವರು 2ಅಕ್ಟೋಬರ್ 1904ರಲ್ಲಿ ಉತ್ತರ ಪ್ರದೇಶದ ಮೊಘಲಸರಾಯ್ ನಲ್ಲಿ ಜನಿಸಿದರು. ಇವ9ರ ಒಳ್ಳೆಯ ಸಾಧನೆಯಿಂದ ನಾವೆಲ್ಲಾ ಪ್ರೇರಿತರಾಗಿ ದೇಶದ ಒಳತಿಗಾಗಿ ಅವರ ಹಾದಿಯಲ್ಲಿ ನಡೆದರೆ ಮಾತ್ರ ದೇಶ ಪ್ರಗತಿಯಾಗಲು ಸಾಧ್ಯ ಎಂದು ಹೇಳಿದರು.
ಶ್ರೀ ಸೋಮಶೇಖರ ಮ್ಯಾಕೇರಿಯವರು ಮಾತನಾಡಿ-ಮಹಾತ್ಮ ಗಾಂಧೀಜಿಯವರ ಆರಂಭಿಸಿದ ಸತ್ಯಾಗ್ರಹ,ಸಾಮೂಹಿಕ ಚಳುವಳಿಗಳು , ಬ್ರಿಟಿಷ್ ರನ್ನು ಭಾರತದಿಂದ ಓಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಹೇಳಲಾಗುತ್ತಿದೆ.ಅದೇ ಸಮಯದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಕೊಡುಗೆಯನ್ನು ಹೊಂದಿದ್ದಾರೆ ಎಂದು ಹೇಳಿದರು.
ಶಾಲಾ ಮುಖ್ಯೋಪಾಧ್ಯಾಯರಾದ-ಶ್ರೀ ಎಸ್.ಜೆ.ಹಿಳ್ಳಿಯವರು ಮಾತನಾಡಿ ಮಹಾತ್ಮ ಗಾಂಧೀಜಿಯವರು ಯಾವಾಗಲೂ ಸತ್ಯ ಮತ್ತು ಅಹಿಂಸೆಯ ಮಾಗ9ವನ್ನು ಅನುಸರಿಸಲು ಜನರಿಗೆ ಕಲಿಸಿದರು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅತ್ಯಂತ ಪ್ರಾಮಾಣಿಕ ನಾಯಕ ಎಂದು ಹೆಸರುವಾಸಿಯಾಗಿದ್ದರು.ಗಾಂಧೀಜಿಯವರು ರಾಷ್ಟ್ರ ಪಿತ,ಬಾಪೂಜಿ, ಮಹಾತ್ಮ ಗಾಂಧಿ ಎಂದು ಕರೆಸಿಕೊಂಡಿದೆ, ಶಾಸ್ತ್ರಿ ಅವರು ಶಾಂತಿಯ ಮನುಷ್ಯ ಎಂದು ಹೆಸರುವಾಸಿಯಾಗಿದ್ದರು ಎಂದು ಹೇಳಿದರು.
ಶ್ರೀ ಎಸ್.ಎಮ್. ಕುಂಬಾರ ಶಿಕ್ಷಕರು ಮಾತನಾಡಿ-ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದೆ ಸದಾ ಶಾಸ್ವತವಾಗಿರುವ ಹೆಸರು ಅಂದರೆ ಅದು ರಾಷ್ಟ್ರಪಿತ ಮಹಾತ್ಮ ಗಾಂಧಿ .ಶಾಂತಿ ,ಅಹಿಂಸೆಯಿಂದಲೇ ಹೋರಾಟ ಮಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು ಗಾಂಧೀಜಿ.ದಂಡಿ ಸತ್ಯಾಗ್ರಹ,ಉಪ್ಪಿನ ಸತ್ಯಾಗ್ರಹ,ಕ್ವೀಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಹೋರಾಟಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹಾತ್ಮ ಗಾಂಧಿ ಅವರ ಹುಟ್ಟು ಹಬ್ಬವನ್ನು ಪ್ರತಿವರ್ಷ ಅಕ್ಟೋಬರ್ 2ರಂದು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಶ್ರೀ ಮಾರುತಿ ಗೊಂದಳಿ ಶಿಕ್ಷಕರು ಮಾತನಾಡಿ-ಮಹಾತ್ಮ ಗಾಂಧೀಜಿ ಅಹಿಂಸಾ ಹಾಗೂ ಸತ್ಯದ ಹಾದಿಯನ್ನು ತುಳಿದರು ಗಾಂಧಿ ಹತ್ಯೆಯಾದಾಗ ವಿಶ್ವ ಸಂಸ್ಥೆಯು ತನ್ನ ಹಾಗೂ ಭಾರತ ಹಾಗೂ ಎಲ್ಲಾ ದೇಶಗಳ ಬಾವುಟ ಅಧ9ಕ್ಕೆ ಇಳಿಸಲಾಯಿತು.ಯಾಕೆಂದರೆ ಗಾಂಧಿ ಮಾನವೀಯತೆ ಭಂಡಾರಿಯಾಗಿದ್ದರು.ಮಾನವೀಯತೆಯ ಹತ್ಯಯಾಯಿತೆಂದು ಆ ನಿಧಾ9ರ ಮಾಡಿದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ಶ್ರೀ ಎಸ್.ಜೆ.ಹಿಳ್ಳಿ. ಎಸ .ಡಿ .ಎಮ್.ಸಿ.ಅಧ್ಯಕ್ಷರಾದ ಶ್ರೀ ಸೋಮಯ್ಯ ಮಠಪತಿ.ಶಿಕ್ಷಕರಾದ-ಶ್ರೀ ಬಿ.ಎಸ್.ವಾಲಿ . ಶ್ರೀ ಬಿ.ಎಸ್.ಪಾಟೀಲ .ಶ್ರೀ ಎ.ಬಿ.ರೇವತಗಾಂವ.ಶ್ರೀ ಎಸ್.ಎಮ್.ಕುಂಬಾರ.ಶ್ರೀಮತಿ ರೂಪಾ ಎಲ್.ಕೆ. ಶ್ರೀ ಮಾರುತಿ ಗೊಂದಳಿ. ಶ್ರೀ ಮಂಜುನಾಥ ಗೊಂದಳಿ.ಶ್ರೀ ಬಸವರಾಜ ಮೇಲಿನಕೇರಿ.ಶ್ರೀ ಅನಿಲ ವಾಲಿಕಾರ . ಶ್ರೀ ಮಹಾದೇವ ನಾಗರಹಳ್ಳಿ. ಶ್ರೀ ತೀಥ9ಪ್ಪ ಕೊಳ್ಳುರ.ಇತರರು ಉಪಸ್ಥಿತರಿದ್ದರು.