ಗಾಂಧೀಜಿಯವರ ಸರಳ ಜೀವನ ಇಂದಿಗೂ ಪ್ರಸ್ತುತ

ಧಾರವಾಡ,ಆ10: ರಾಜಕೀಯ, ಆಧ್ಯಾತ್ಮ, ಆರೋಗ್ಯ, ಸಾಹಿತ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ಜೀವಿತುದ್ದಕ್ಕೂ ಸಕ್ರೀಯರಾಗಿದ್ದ ಗಾಂಧೀಜಿ ಅವರ ಸರಳ ಜೀವನ ಇಂದಿಗೂ ಪ್ರಸ್ತುತ ಎಂದು ಚಿಂತಕ ಡಾ. ಸಂಜೀವ ಕುಲಕರ್ಣಿ ಹೇಳಿದರು.
ಅವರು ಹುತಾತ್ಮ ಮೈಲಾರ ಮಹಾದೇವಪ್ಪನವರ ಟ್ರಸ್ಟ್, ಹಾವೇರಿ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಹಾವೇರಿ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ಸಹಯೋಗದಲ್ಲಿ ಏರ್ಪಡಿಸಿದ ಕ್ವಿಟ್ ಇಂಡಿಯಾ ಚಳವಳಿ ಸ್ಮರಣೆ' ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡುತ್ತಿದ್ದರು. ಮುಂಬಯಿಯ ಅಗಸ್ಟ್ ಕ್ರಾಂತಿ ಮೈದಾನದಲ್ಲಿಮಾಡು ಇಲ್ಲವೆ ಮಡಿ’ ಎಂಬ ಘೋಷಣೆ ಮೊಳಗಿಸಿದ ಐದೂವರೆ ಗಂಟೆಯ ಭಾಷಣ ಇಂದಿಗೂ ಅವಿಸ್ಮರಣೀಯ ಎಂದು ಡಾ. ಸಂಜೀವ ಕುಲಕರ್ಣಿ ಹೇಳಿದರು.
ಅಧ್ಯಕ್ಷತೆಯನ್ನು ಹಿರಿಯ ಲೇಖಕಿ, ಕ.ವಿ.ವ. ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರು ಗಾಂಧಿ ಚಿಂತನೆಗಳ ಕಮ್ಮಟವನ್ನು ಯುವ ಜನಾಂಗಕ್ಕಾಗಿ ಏರ್ಪಡಿಸಬೇಕು. ಗಾಂಧಿ ಒಂದು ಜೀವನ ಕ್ರಿಯೆ ಎಂದರು. ಮೈಲಾರ ಮಹದೇವ ಟ್ರಸ್ಟಿನ ಹಿರಿಯ ಸದಸ್ಯ ವ್ಹಿ. ಎನ್. ತಿಪ್ಪನಗೌಡರ ಪ್ರಾಸ್ತಾವಿಕ ನುಡಿಗಳನ್ನಾಡಿಮೈಲಾರರು ಗಾಂಧೀಜಿಯವರ ಅಹಿಂಸಾ ತತ್ವದಲ್ಲಿ ಸದಾ ದುಡಿದವರು’ ಎಂದರು.
ಸಭೆಯನ್ನುದ್ದೇಶಿಸಿ ಸರ್ವಶ್ರೀ ನಿಂಗಣ್ಣ ಕುಂಟಿ, ಡಾ. ಪ್ರಕಾಶ ಭಟ್ ಮಾತನಾಡಿದರು.
ಹಾವೇರಿಯ ಕಲಾಬಳಗದವರಾದ ಸರ್ವಶ್ರೀ ಬಸವರಾಜ ಶಿಗ್ಗಾಂವಿ, ಬಸವರಾಜ ಕರಡಿ, ಈರಣ್ಣ ಬೆಳವಡಿ, ಶಂಕರ ತುಮ್ಮಣ್ಣವರ, ಶಂಕರ ಬಡಿಗೇರ, ದೇಶಭಕ್ತಿ ಗೀತೆಗಳ ಹಾಡಿದರು.
ಆರಂಭದಲ್ಲಿ ಸೌಮ್ಯ ಬಡಿಗೇರ ಪ್ರಾರ್ಥಿಸಿದರು. ಎಸ್.ಆರ್. ಹಿರೇಮಠ ನಿರೂಪಿಸಿದರು. ಪೃಥ್ವಿರಾಜ ಬೆಟಗೇರಿ ಪರಿಚಯಿಸಿದರು. ಕೊನೆಯಲ್ಲಿ ಹಾವೇರಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣವರ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ವೀರಣ್ಣ ಒಡ್ಡೀನ, ಡಾ. ಮಹೇಶ ಹೊರಕೇರಿ, ಡಾ. ಶಿವಾನಂದ ಶೆಟ್ಟರ, ಎಂ.ಎಂ. ಚಿಕ್ಕಮಠ, ಕೆ.ಎಚ್. ನಾಯಕ, ಬಿ.ಎಸ್. ಶಿರೋಳ, ಪ್ರಮೀಳಾ ಜಕ್ಕಣ್ಣವರ, ಚಂದ್ರಶೇಖರ ಅಮೀನಗಡ, ಮಹಾಂತೇಶ ನರೇಗಲ್ ಮುಂತಾದವರಿದ್ದರು.