ಸಂಜೆವಾಣಿ ವಾರ್ತೆ
ಚಾಮರಾಜನಗರ, ಅ.03:- ರಾಷ್ಟ್ರದ ಪಿತಾಮಹ ಮಹಾತ್ಮಗಾಂಧೀಜಿಯವರ ನುಡಿ ಮುತ್ತುಗಳು ಪ್ರತಿಯೊಬ್ಬರಿಗೂ ದಾರಿ ದೀಪವಾಗಿದೆ ಎಂದು ಜಿಲ್ಲಾಧಿಕಾರಿಸಿ. ಟಿ. ಶಿಲ್ಪಾನಾಗ್ ಹೇಳಿದರು.
ನಗರದ ಜೆಎಸ್‍ಎಸ್ ಮಹಿಳಾ ಕಾಲೇಜಿನಲ್ಲಿ ವಿವಿಧ ಸಂಘ ಸಂಸ್ಥೆಗಳು, ಭಕ್ತವೃಂದ ಹಾಗೂ ಜೆಎಸ್‍ಎಸ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 108 ನೇ ಜಯಂತಿ ಮಹೋತ್ಸವ, ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ಮಾತ್ರ ಹೋರಾಟ ಮಾಡಿಲಿಲ್ಲ. ಬಡತನ, ಹಿಂಸೆ, ದಾರಿದ್ರ್ಯ, ಅವಮಾನಗಳ ವಿರುದ್ಧ ಹೋರಾಡಿದವರು ಎಂದರು.
ಅದೇರೀತಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಹಾಲಿನ ಉತ್ಪನ್ನಗಳಿಗೆ ಹಾಗೂ ಹಸಿರು ಕ್ರಾಂತಿಯನ್ನು ಮಾಡುವ ಮೂಲಕ ಆಹಾರ ಭದ್ರತೆಗೆ ಒತ್ತನ್ನು ನೀಡಿದವರು. ನಮ್ಮ ದೇಶಕ್ಕೆ ಐದು ವರ್ಷಗಳ ಇತಿಹಾಸವಿದ್ದು, ಅಂದಿನ ಕಾಲದಿಂದಲೂ ನಮ್ಮ ಪೂರ್ವಜರುವ ನಡೆದು ದಾರಿಯನ್ನು ನಾವು ಅನುಸರಿಸಿಕೊಂಡುಹೋಗಬೇಕು. ಜನರ ಸೇವೆಯನ್ನು ಮಾಡುವುದೇನಮ್ಮ ಕೆಲಸವಾಗಿದ್ದು, ಅದನ್ನು ಎಲ್ಲರೂ ಸರಿಯಾಗಿ ಮಾಡಿಕೊಂಡುಹೋಗಬೇಕು ಎಂದು ಸಲಹೆ ನೀಡಿದರು.
ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಡಾ. ಚಿದಂಬರಂ ಮಾತನಾಡಿ, ಮನುಷ್ಯನ ದೇಹದಲ್ಲಿ 5 ಲೀ. ರಕ್ತವಿರುತ್ತದೆ. ಅದರಲ್ಲಿನಾವು ಕೇವಲ 300 ಮಿಲಿ ಮಾತ್ರ ದಾನ ಮಾಡಿದರೆ ನಮಗೆ ಯಾವುದೇ ಕಾರಣಕ್ಕೂ ರಕ್ತದ ಕೊರತೆಯಾಗುವುದಿಲ್ಲ. ಓರ್ವ ಆರೋಗ್ಯ ಯುತಮಾನವ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದರು.
ಬೇರೆ ವಸ್ತುಗಳನ್ನು ತಯಾರು ಮಾಡುವಂತೆ ರಕ್ತವನ್ನು ಕೂಡತಯಾರು ಮಾಡಲು ಆಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರುರಕ್ತದಾನ ಮಾಡುವ ಮೂಲಕ ಜೀವಗಳನ್ನು ಕಾಪಾಡಿಎಂದು ಮನವಿ ಮಾಡಿದರು.
ಇದೇ ವೇಳೆ ಸ್ವಚ್ಛತಾ ಶ್ರಮದಾನದ ಅಂಗವಾಗಿ ಕಾಲೇಜಿನ ಸ್ವಚ್ಛತಾದ ಸಿಬ್ಬಂದಿಗಳಿಗೆ ಸ್ವಚ್ಛತಾಕಿಟ್‍ಅನ್ನು ವಿತರಣೆ ಮಾಡಿದರು. ಹಲವಾರು ಮಂದಿ ರಕ್ತದಾನ ಮಾಡಿದರು. ಇನ್ನೂ ಕೆಲವರು ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡರು.
ಈ ಸಂದರ್ಭದಲ್ಲಿಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಪದ್ಮಿನಿಸಾಹು, ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿಟಿ.ಜೆ. ಉದೇಶ, ರೆಡ್‍ಕ್ರಾಸ್‍ಸಂಸ್ಥೆಯ ಕಾರ್ಯದರ್ಶಿಡಾ. ಮಹೇಶ್, ರಾಜ್ಯಸಮಿತಿಸದಸ್ಯೆಡಾ. ಸಿ. ಎನ್. ರೇಣುಕಾದೇವಿ, ಜೆಎಸ್‍ಎಸ್‍ಆಸ್ಪತ್ರೆಯಅಧೀಕ್ಷಕಡಾ. ಗೋವಿಂದಶೆಟ್ಟಿ, ಸಿಮ್ಸ್‍ನ ರಕ್ತ ನಿಧಿ ಅಧಿಕಾರಿಡಾ. ದಿವ್ಯಾ, ಮೈಸೂರುಜೆಎಸ್‍ಎಸ್ ಮೆಡಿಕಲ್‍ಕಾಲೇಜಿನ ಪ್ರಾಂಶುಪಾಲರಾದಡಾ. ಬಸವಣ್ಣಗೌಡಪ್ಪ, ಸಿ.ಪಿ. ಮಧುರಾವ್, ಡಾ. ರವಿಕುಮಾರ್ ಸೇರಿದಂತೆಇತರರು ಭಾಗವಹಿಸಿದ್ದರು.