ಗಾಂಧೀಜಿಯಂತೆ ಬದುಕು ರೂಪಿಸಿಕೊಳ್ಳಬೇಕು-ಗುಡಿಸಿ


ಧಾರವಾಡ,ನ.11- ಮಹಾತ್ಮಾ ಗಾಂಧೀಜಿಯವರು ಭಾರತದ ರಾಷ್ಟ್ರೀಯ ಚಳುವಳಿಯ ಅದ್ವಿತೀಯ ನಾಯಕರು. ಅವರ ದೇಶಪ್ರೇಮ, ಸತ್ಯ, ಅಹಿಂಸೆಯಲ್ಲಿಯಲ್ಲಿಯ ಅಚಲ ನಂಬಿಕೆ, ದೀನ ದಲಿತರ ಕಾಳಜಿಗಳು ಅವರನ್ನು ಅಸಾಮಾನ್ಯ ನಾಯಕನನ್ನಾಗಿಸಿದವು, ನಾನು ಬದುಕಿದರೆ ಗಾಂಧೀಜಿಯಂತೆ ನನ್ನ ಬದುಕು ರೂಪಿಸಿಕೊಳ್ಳಬೇಕು ಎಂದು ಕ.ವಿ.ವಿ. ಕುಲಪತಿ ಪ್ರೊ. ಕೆ. ಬಿ. ಗುಡಸಿ ಹೇಳಿದರು.
ಸರ್. ಸಿದ್ದಪ್ಪ ಕಂಬಳಿ ಪ್ರತಿಷ್ಠಾನವು ಕೆ. ಸಿ. ಡಿ. ಆವರಣದಲ್ಲಿ ಆಯೋಜಿಸಿದ್ದ ಮಹಾತ್ಮಾ ಗಾಂಧೀಜಿ ಮತ್ತು ಸರ್. ಸಿದ್ದಪ್ಪ ಕಂಬಳಿಯವರು ಧಾರವಾಡ ಭೆಟ್ಟಿಯ ಶತಮಾನೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಸರ್. ಸಿದ್ದಪ್ಪ ಕಂಬಳಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿ, ಸರ್. ಸಿದ್ದಪ್ಪ ಕಂಬಳಿಯವರು ದೇಶ ಸೇವೆಗೆ ಆಯ್ಕೆ ಮಾಡಿಕೊಂಡಿದ್ದು ದೀನದಲಿತರ ಸೇವೆಯಾಗಿತ್ತು, ಸರಕಾರದಲ್ಲಿದ್ದುಕೊಂಡೆ ಜನಹಿತ ಸಾಧಿಸುವ ಮಾರ್ಗವಾಗಿತ್ತು. ಕಂಬಳಿಯವರಿಗೆ ಗಾಂಧೀಜಿಯವರ ಬಗ್ಗೆ ಅಪಾರ ಗೌರವವಿತ್ತು ಎಂದು ಹೇಳಿದರು.
ಸರ್. ಸಿದ್ದಪ್ಪ ಕಂಬಳಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಶಂಕರ ಕುಂಬಿ ಮಾತನಾಡಿ, ಸರ್. ಸಿದ್ದಪ್ಪ ಕಂಬಳಿಯವರಿಗೆ ಮುಷ್ಕರ, ಚಳುವಳಿಯ ಮಾರ್ಗವಲ್ಲ ಸರಕಾರದೊಳಗೆ ಇದ್ದುಕೊಂಡೆ ಜನಸೇವೆ ಮಾಡುವುದಾಗಿತ್ತು. ಶಿಕ್ಷಣ ಪ್ರೇಮಿಗಳಾದ ಕಂಬಳಿಯವರು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದರು. ಕಂಬಳಿಯವರು ಸೌಜನ್ಯ, ಸಹೃದಯತೆಯ ಸಾಕಾರಮೂರ್ತಿಗಳಾಗಿದ್ದರು ಎಂದು ಹೇಳಿ ಸರ್, ಸಿದ್ದಪ್ಪ ಕಂಬಳಿ ಮತ್ತು ಮಹಾತ್ಮಾ ಗಾಂಧೀಜಿಯವರ ಸಂಬಂಧ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಕ್ಕಮಹಾದೇವಿ ಬೆಲ್ಲದ, ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಡಿ. ಬಿ. ಕರಡೋಣಿ, ಕ.ವಿ.ವ.ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್. ಉಡಿಕೇರಿ, ಬಸವಪ್ರಭು ಹೊಸಕೇರಿ, ಡಾ. ಸಂಜೀವ ಕುಲಕರ್ಣಿ, ಸರ್. ಕಂಬಳಿ ಪ್ರತಿಷ್ಠಾನದ ಪ್ರತಿಷ್ಠಾನದ ಕಾರ್ಯದರ್ಶಿ ಶಿವಶರಣ ಕಲಬಶೆಟ್ಟಿ, ವೀರಣ್ಣ ಒಡ್ಡೀನ, ಡಾ. ಜಗದೀಶ ಗುಡದೂರ, ಡಾ. ಕಲ್ಯಾಣಿ, ಡಾ. ಅರುಣಾ ಹಳ್ಳಿಕೇರಿ, ಡಾ. ಮಂಜಲಿ ಸಾಲುಂಕೆ, ಡಾ. ಗೀತಾ ಚವ್ಹಾಣ, ಡಾ. ಕೊಟ್ರೇಶ, ಡಾ. ಎಲ್. ಟಿ. ನಾಯಕ, ಡಾ. ಸಿ. ಜಿ. ಪಾಟೀಲ, ಡಾ. ಎಂ. ಎನ್. ಮ್ಯಾಗೇರಿ, ಡಾ. ಎಸ್. ಆರ್. ಗಣಿ, ಕರೆಪ್ಪ ಸುಣಗಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.