ಗಾಂಧಿ ಸ್ಮಾರಕದ ಮುಂದೆ ವಿಶ್ರಾಂತಿ ಬೆಂಚುಗಳು

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಅ.5:- ಪಟ್ಟಣದ ಮಹಾತ್ಮ ಗಾಂಧೀಜಿ ಪವಿತ್ರ ಚಿತಾಭಸ್ಮ ಹಾಗೂ ರಾಷ್ಟ್ರಿಯ ಹುತಾತ್ಮರ ಸ್ಮಾರಕದ ಮುಂದಿನ ಪುಟ್ ಬಾತ್ ರಸ್ತೆಯಲ್ಲಿರುವ ಮರದಡಿ ವೃದ್ಧರ ವಿಶ್ರಾಂತಿಗಾಗಿ ಬೆಂಚುಗಳನ್ನು ಅಳವಡಿಸಿ ಆ ರಸ್ತೆಯಲ್ಲಿ ವಾಹನ ಓಡಾಡದಂತೆ ಕಬ್ಬಿಣದ ಪೈಪುಗಳನ್ನು ಜೆಸಿಐ ಕೂಡ್ಲಿಗಿ ಗೋಲ್ಡನ್ ವತಿಯಿಂದ ಅಳವಡಿಸಲಾಯಿತು.                                                                                                  ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಯವರ  ಜನ್ಮ ದಿನಾಚರಣೆ ಅಂಗವಾಗಿ ಜೆಸಿಐ ಕೂಡ್ಲಿಗಿ ಗೋಲ್ಡನ್ ಅಧ್ಯಕ್ಷರಾದ ಅಬೂಬಕರ್ ಮತ್ತು ಪದಾಧಿಕಾರಿಗಳು ಸೇರಿ ಐದಾರು ಕುಳಿತುಕೊಳ್ಳುವ ಬೆಂಚುಗಳನ್ನು ವ್ಯವಸ್ಥೆ ಮಾಡಿ ಆಲ್ಲಿನ  ಫುಟ್ ಬಾತ್ ರಸ್ತೆಯ ಸುರಕ್ಷತೆಗಾಗಿ ಕಬ್ಬಿಣದ ಪೈಪು ಅಳವಡಿಸಿ ವಾಹನಗಳು ಸಂಚರಿಸದಂತೆ ಮಾಡಿದ್ದಾರೆ. ತಂಪನೆಯ ಮರದಡಿಯಲ್ಲಿ ವಾಯುವಿಹಾರಕ್ಕೆ ಬಂದವರು ವಯೋವೃದ್ಧರು ಕುಳಿತುಕೊಳ್ಳಲು ಬೆಂಚಿನ ವ್ಯವಸ್ಥೆ ಕಲ್ಪಿಸಿದ ಜೆಸಿಐ ಪದಾಧಿಕಾರಿಗಳಿಗೆ ಪಟ್ಟಣದ ಜನತೆ ಅಭಿನಂದನೆ ತಿಳಿಸಿದ್ದಾರೆ ಹಾಗೂ ಇಂತಹ ಸಮಾಜ ಸೇವಾ ಕಾರ್ಯ ಹೆಚ್ಚು ಹೆಚ್ಚು ನಡೆಯಲಿ ಎಂದು ಆಶಿಸಿದ್ದಾರೆ.