ಗಾಂಧಿ ವೃತ್ತದಲ್ಲಿ ಪಂಜಿನ ಮೆರವಣಿಗೆ

ಮೈಸೂರು:ಮಾ:24: ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಅಮರ ಸೇನಾನಿಗಳಾದ ಕ್ರಾಂತಿವೀರ ಭಗತ್ ಸಿಂಗ್, ಸುಖದೇವ್ ಹಾಗೂ ರಾಜಗುರು ಅವರನ್ನು ಬ್ರಿಟಿಷರು ನೇಣಿಗೇರಿಸಿದ ಈ ಬಲಿದಾನದ ದಿನದಂದು ಶಹೀದ್ ದಿವಸ್ ಭಾರತಾಂಬೆಯ ಹೆಮ್ಮೆಯ ಪರಾಕ್ರಮಿ ಸುಪುತ್ರರು ಹಾಗೂ ಮಹಾನ್ ದೇಶಭಕ್ತರಾದ ಇವರ ಹೋರಾಟ, ತ್ಯಾಗ, ಬಲಿದಾನವನ್ನು ನೆನೆಯುತ್ತಾ. ಚಾಮರಾಜ ವಿಧಾನಸಭಾ ಕ್ಷೇತ್ರದ ಹೃದಯ ಭಾಗದಲ್ಲಿರುವ ಗಾಂಧಿ ವೃತ್ತದಲ್ಲಿ ಚಾಮರಾಜ ಬಿಜೆಪಿ ಯುವ ಮೋರ್ಚಾ ವತಿಯಿಂದ ಪಂಜಿನ ಮೆರವಣಿಗೆ ಮಾಡಿ ಇಂಕ್ವಿಲಾಬ್ ಜಿಂದಾಬಾದ್, ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಎಂದು ಘೋಷಣೆ ಕೂಗುತ್ತಾ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಧೀರಜ್ ಪ್ರಸಾದ್, ಜೈ ಶಂಕರ್, ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಿರಣ್ ಗೌಡ, ಚಾಮರಾಜ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್. ಆರ್, ನಗರ ಯುವ ಮೋರ್ಚಾ ಉಸ್ತುವಾರಿ ರಮೇಶ್, ಚಾಮರಾಜ ಕ್ಷೇತ್ರದ ಮುಖಂಡ ಮಂಜುನಾಥ್, ಚಾಮರಾಜ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯ ದರ್ಶಿಗಳಾದ ಅರ್ಜುನ್ ಕುಮಾರ್, ಪ್ರಜ್ವಲ್ ಶ್ರೀವತ್ಸ, ಉಪಾಧ್ಯಕ್ಷರಾದ ಶಿವುಕುಮಾರ್, ಪಂಕಜ್ ಪಾರೀಕ್, ಯೋಗೇಶ್, ಗೋವಿಂದ್, ರಾಕೇಶ್, ಶಿವುಕುಮಾರ್, ನಿಶಾಂತ್, ಮನೀಷ್, ಸನತ್, ವೇದ ರಾಜ್, ಯೋಗಿ, ಪ್ರವೀಣ್, ಅಭಿಲಾಷ್, ಕುಶಾಲ್, ಮೈಸೂರು ನಗರ ಯುವ ಮೋರ್ಚಾ ಖಜಾಂಚಿ ಅರುಣ್ ಟಿ. ಎಸ್, ಚಾಮರಾಜ ಕ್ಷೇತ್ರದ ಎಸ್. ಟಿ. ಮೋರ್ಚಾ ಅಧ್ಯಕ್ಷ ನಾರಾಯಣ ಸ್ವಾಮಿ, ಉಪಾಧ್ಯಕ್ಷರಾದ ಆನಂದ್ ನಾಯಕ್, ಚಾಮರಾಜ ಕ್ಷೇತ್ರದ ಮಹಿಳಾ ಮೋರ್ಚಾ ಕಾರ್ಯದರ್ಶಿ ಸ್ವಪ್ನ ಶೇಖರ್ ಸೇರಿದಂತೆ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.