
ಕೋಲಾರ,ಸೆ.೨-ನಗರದ ಗಾಂಧಿವನದ ಮುಂಭಾಗದಲ್ಲಿ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ನಗರದ ಸೌಂದರ್ಯಕ್ಕೆ ಧಕ್ಕೆಯುಂಟಾಗುವಂತೆ ಮುಳಬಾಗಿಲು ಶಾಸಕ ಸಂವೃದ್ದಿ ಮಂಜುನಾಥ್ ಅವರ ಭಾವ ಚಿತ್ರವುಳ್ಳ ಫ್ಲೆಕ್ಸಿಯನ್ನು ಅಳವಡಿಸಿದ್ದಾರೆ.
ನಗರದ ಪೊಲೀಸ್ ಠಾಣೆಯ ಮುಂದೆಯೇ ಇರುವ ರಾಷ್ಟ್ರಪಿತ ಮಹಾತ್ಮಗಾಂಧಿಯ ಪ್ರತಿಮೆಗೆ ಅಡ್ಡಲಾಗಿ ಮುಂಭಾಗದಲ್ಲಿ ಸಂವೃದ್ದಿ ಮಂಜುನಾಥ್ ಅವರು ಶುಭಾಷಯ ಕೋರುವ ಫ್ಲೆಕ್ಸಿಯನ್ನು ಅಳವಡಿಸಿರುವವರಿಗೆ ಕನಿಷ್ಟ ಮಹಾತ್ಮಗಾಂಧಿಗೆ ಗೌರವ ಕೊಡ ಬೇಕು, ಫ್ಲೆಕ್ಸಿಯನ್ನು ಅಳವಡಿಸುವುದರಿಂದ ಅವರ ಪ್ರತಿಮೆಯನ್ನು ಕಾಣಲು ಅಡ್ಡಲಾಗಿದೆ ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲವಾಗಿರುವುದು ದುರಾದೃಷ್ಟಕರವಾಗಿದೆ.
ಈ ರೀತಿ ಹಣದ ಮದದಲ್ಲಿ ಫ್ಲೆಕ್ಸಿಗಳನ್ನು ಸಿಕ್ಕಿದ ಕಡೆ ಅಳವಡಿಸಿ ನಗರದ ಸೌಂಧರ್ಯಕ್ಕೆ ಅಲ್ಲದೆ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ರಾಷ್ಟ ಪಿತ ಮಹಾತ್ಮಗಾಂಧಿ ಪ್ರತಿಮೆಗೆ ಅಡ್ಡಲಾಗಿ ಅಳವಡಿಸಿರುವುದು ಎಷ್ಟು ಮಾತ್ರ ಸರಿಯಿದೆ ? ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಈ ರೀತಿ ನಗರದಲ್ಲಿ ಫೆಕ್ಸಿಗಳನ್ನು ಅಳವಡಿಸಲು ಶಾಸಕ ಸಂವೃದ್ದಿ ಮಂಜುನಾಥ್ ಅವರ ಬೆಂಗಲಿಗರು ನಗರಸಭೆಯಿಂದ ಅನುಮತಿ ಪಡೆದಿರುವರೇ ? ನಗರಸಭೆಗೆ ಇದರ ವಿರುದ್ದ ಕ್ರಮ ಕೈಗೊಳ್ಳುವ ಅಧಿಕಾರ ಇದೆ. ಇದನ್ನು ಅನುಷ್ಟನಕ್ಕೆ ತರಬೇಕೆಂಬ ಪರಿಜ್ಞಾನ ನಗರಸಭೆ ಅಧಿಕಾರಿಗಳಿಗೆ ಇಲ್ಲವೇ ? ಅಧಾವ ಅನಧಿಕೃತವಾಗಿ ಫ್ಲೆಕ್ಸಿಗಳನ್ನು ಅಳವಡಿಸಿ ಕೊಳ್ಳಲು ಸಂಬಂಧ ಪಟ್ಟವರಿಂದ ಏನಾದರೂ ಭಕ್ಷಿಸಿ ಪಡೆದಿದ್ದಾರೆಯೇ ? ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತ ಪಡೆಸಿದ್ದಾರೆ. ಈ ರೀತಿ ರಾಷ್ಟ ನಾಯಕರ ಪ್ರತಿಮೆಗಳು ಕಾಣದಂತೆ ಅಡ್ಡಲಾಗಿ ಫ್ಲೆಕ್ಸಿಗಳನ್ನು ಅಳವಡಿಸುವುದು ಅಪಮಾನ ಮಾಡಿದಂತಾಗಿದೆ ಈ ಸಂಬಂಧವಾಗಿ ಪೊಲೀಸ್ ಅಧಿಕಾರಿಗಳ ನೋಟಿಸ್ ಜಾರಿ ಕ್ರಮ ಕೈಗೊಳ್ಳಲು ಅವಕಾಶ ಇದೆಯಾದರೂ ಸಹ ತಮಗೆ ಸಂಬಂಧ ಇಲ್ಲದವರಂತೆ ತಟಸ್ಥರಾಗಿರುವ ಧೋರಣೆಯು ಸಮಂಜಸವಲ್ಲ.
ಸಂವೃದ್ದಿ ಮಂಜುನಾಥ್ ಅವರು ಖರ್ಗೆಯವರು ದಂಡ ಪಾವತಿಸಿದಂತೆ ನಗರಸಭೆಗೆ ದಂಡ ಪಾವತಿಸ ಬೇಕು,ಮತ್ತು ನಗರಸಭೆ ಅಧಿಕಾರಿಗಳು ನಗರದ ಸೌಂದರ್ಯವನ್ನು ಕಾಪಾಡುವಲ್ಲಿ ಬೇಜವಾಬ್ದಾರಿ ತೋರುತ್ತಿರುವುದರಿಂದ ಜಿಲ್ಲಾಡಳಿತ ಸಂಬಂಧ ಪಟ್ಟ ಅಧಿಕಾರಿಗಳನ್ನು ಕರ್ತವ್ಯದಿಂದ ಅಮಾನತ್ತು ಪಡೆಸ ಬೇಕೆಂದು ಪ್ರಜ್ಞಾವಂತರ ವೇದಿಕೆಯು ಆಗ್ರಹ ಪಡೆಸಿದೆ.