ಗಾಂಧಿ ಜಯಂತಿಯಂದು ವಿಜಯನಗರ ಜಿಲ್ಲೆ ಉದಯ: ಆನಂದ್ ಸಿಂಗ್

  • ಹಬ್ಬದ ರೀತಿಯಲ್ಲಿ ಸಮಾರಂಭ
  • ಬೃಹತ್ ವೇದಿಕೆ ರಚನೆ
  • ಸಿನಿ ಸಿಂಗರ್ ಗಳಿಂದ ಹಾಡುಗಾರಿಕೆ.
  • ಬಾಣ ಬಿರುಸು ಪ್ರದರ್ಶನ
  • ಕರಕುಶಲ ಪ್ರದರ್ಶನ
  • ವಿವಿಧ ಮಠಾಧೀಶರ ಉಪಸ್ಥಿತಿ.
  • ಪ್ರತಿ ತಾಲೂಕಿನಿಂದ ಜ್ಯೋತಿ
  • ಕೋಟ್ಯಾಂತರ ಕಾಮಗಾರಿಗಳಿಗೆ ಚಾಲನೆ
  • ಜನ‌ ಸೇರದಂತೆ ನಗರದ ಹಲವಡೆ ಎಲ್ ಈ ಡಿ ಪರದೆಗಳ ವ್ಯವಸ್ಥೆ
  • ಮಹಾನಗರ ಪಾಲಿಕೆ ವಿಷಯ ಸಧ್ಯಕ್ಕೆ ಕೈಬಿಟ್ಟಿದೆ.

ಎನ್.ವೀರಭದ್ರಗೌಡ
ಹೊಸಪೇಟೆ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜಯಂತಿಯಂದು ವಿಜಯನಗರ ಜಿಲ್ಲೆಯ ಉದ್ಘಾಟನೆ ನಡೆಯಲಿದೆ ಎಂದು ಜಿಲ್ಲೆಯ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಅವರು ಇಂದು ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭದ ಸಿದ್ದತೆ ಕುರಿತ ಸಮಾರಂಭದಲ್ಲಿ ಈ ವಿಷಯ ತಿಳಿಸಿದರು.

ವಿದ್ಯಾರಣ್ಯರು, ಹಕ್ಕ ಬುಕ್ಕರು ಸ್ಥಾಪನೆ ಮಾಡಿದ್ದ. ವಿಶ್ವದಲ್ಲಿ ಎರಡನೇ ಅತಿ ಶ್ರೀಂಮತ ಸಾಮ್ರಾಜ್ಯವಾಗಿತ್ತು ವಿಜಯನಗರ ಸಾಮ್ರಾಜ್ಯ.

ಈ ಸಾಮ್ರಾಜ್ಯದ ಹೆಸರಲ್ಲಿ ಈ‌ಜಿಲ್ಲೆ ಹೊಸಪೇಟೆ ಕೇಂದ್ರ ಸ್ಥಾನವಾಗಿದೆ. ಈ ಉದ್ಘಾಟನಾ ಸಮಾರಂಭ ಹಲವು ಕಾರಣಗಳಿಂದ ತಡವಾಗಿದೆ. ಹಬ್ಬದ ವಾತಾವರಣದಲ್ಲಿ ಅಕ್ಟೋಬರ್ 2 ಮತ್ತು 3 ರಂದು ಎರೆಡು ದಿನಗಳ ಸಮಾರಂಭದಲ್ಲಿ ಜಿಲ್ಲೆಯ ಉದ್ಘಾಟನೆ ಹಮ್ಮಿಕೊಂಡಿದೆ.
ಹಾಗಾಗಿ ಅಂದು ನಗರದ ಎಲ್ಲಾ ವಾಣಿಜ್ಯ ಮಳಿಗೆದಾರರಿಂದ ಜಗ ಮಗಿಸುವ ವಿದ್ಯುತ್ ದೀಪದ ಅಲಂಕಾರ ಮಾಡಿಸಬೇಕು. ಮನೆಗಳ ಮುಂದೆ ತಳಿರು ತೋರಣ ಕಟ್ಟಿ, ಸಾರಿಸಿ ರಂಗೋಲಿ ಹಾಕಿ, ದೀಪ ಬೆಳಗಿಸಿ ಸಂಭ್ರಮಿಸಬೇಕು. ಹಂಪಿಯಿಂದ ನಾಡ ಜ್ಯೋತಿ ಬರಲಿದ್ದು ಅದರಂತೆ ಜಿಲ್ಲೆಯ ಇತರೇ ತಾಲೂಕಿನಿಂದ ಜ್ಯೋತಿ ತರಬೇಕು ಎಂದರು.

ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅಕ್ಟೋಬರ್ 2 ರಂದು ಸಂಜೆ 6.30 ಕ್ಕೆ ಉದ್ಘಾಟಿಸಲಿದ್ದು,
ಹಲವು ಸಚಿವರು ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು. ಉಜ್ಜನಿ‌ ಪೀಠದ ಸಿದ್ದಲಿಂಗ ಶ್ರೀಗಳು, ವಿದ್ಯಾರಣ್ಯ, ಕೊಟ್ಟೂರು ಸಂಸ್ಥಾನ ಮಠದ ಸಂಗನಬಸವ ಸ್ವಾಮಿಗಳು ಸೇರಿದಂತೆ ವಿವಿಧ ಮಠಾಧೀಶರು ಇರಲಿದ್ದಾರೆ.
ಅದಕ್ಕೂ ಮುನ್ನ ಹೊಸಪೇಟೆಯ ವಡಕರಾಯನ ದೇವಸ್ಥಾನದಿಂದ ಸಂಜೆ 4 ಕ್ಕೆ ವಿಜಯನಗರ ವೈಭವದ ಮೆರವಣಿಗೆ ಸ್ಥಳೀಯ 50 ಸೇರಿದಂತೆ 80 ಕಲಾ ತಂಡಗಳಿಂದ ವೇದಿಕೆ ಬಳಿಗೆ ಬರಲಿದೆ.

ಕೋವಿಡ್ ಕಾರಣದಿಂದ ಹೆಚ್ಚಿನ ಆಸನಗಳ ವ್ಯವಸ್ಥೆ ಇರಲ್ಲ.
ಮೈದಾನದಲ್ಲಿ 80 ಕ್ಕೂ ಹೆಚ್ವು ಕರಕುಶಲ ವಸ್ತುಗಳ ಪ್ರದರ್ಶನ ಮಳಿಗೆ ಇರಲಿವೆ. ಕೊನೆಯ ದಿನ‌ ಬಾಣ ಬಿರುಸು ಪ್ರದರ್ಶನ‌ ಇರುತ್ತದೆ.

2022 ಜನವರಿ ಮೊದಲ ತಾರಿಖಿನೊಳಗೆ ಜಿಲ್ಲೆಯ ಎಲ್ಲಾ ಕಚೇರಿಗಳು ಆರಂಭವಾಗಬೇಕಿದೆ. ನಮ್ಮ‌ಜಿಲ್ಲೆಗೆ ಬರುವ ಕಂದಾಯ ಹಂಚಿಕೆ ಬಗ್ಗೆ ಹೆಚ್ಚಿನ ಗಮನದಿಂದ ಕ್ರಮವಹಿಸಲು ಶ್ರಮಿಸುತ್ತಿರುವೆ ಎಂದರು.
ಹೌಸಿಂಗ್ ಬೋರ್ಡಿನ‌ 83 ಎಕರೆ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣಕ್ಕೆ ದೊರೆತಿದೆ ಎಂದು ತಿಳಿಸಿದರು. ಇದರಲ್ಲಿ 23 ಎಕರೆಯಲ್ಲಿ ಅಧಿಕಾರಿಗಳ ಸಿಬ್ಬಂದಿಗಳ ವಸತಿಗೃಹ ಬರಲಿವೆ.
30 ಎಕರೆ ಪ್ರದೇಶದಲ್ಲಿ ಮೆಡಿಸಿಟಿ ಅಂದರೆ ಜಿಲ್ಲಾ ಆಸ್ಪತ್ರೆ, ‌ಮೆಡಿಳ್ ಕಾಲೇಜು ಮಾಡಲು ಮೀಸಲಿರಿಸಿದೆ.
ಸಧ್ಯ ಜಿಲ್ಲೆಯ ರಚನೆಗೆ 7 ಕೋಟಿ ರೂ ಬಿಡುಗಡೆಯಾಗಿದೆ.

ಅನಂತಶಯನಗುಡಿ ಬಳಿ ರೈಲ್ವೇ ಮಾರ್ಗಕ್ಕೆ 26 ಕೋಟಿ ರೂ ವೆಚ್ಚದಲ್ಲಿ ಪ್ಲೈ ಓವರ್ ಬ್ರಿಡ್ಜ್ ಮಾಡಲಿದೆ ಸಧ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ.
ಅಲ್ಲದೆ ಅನಂತಶಯನಗುಡಿಯಿಂದ ಕಮಲಾಪುರ ಕೆರೆಯ ವರೆಗೆ ಚತುಷ್ಪತ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು 30 ಕೋಟಿ ರೂ ಮಂಜೂರಾಗಿದೆಂದು ತಿಳಿಸಿದರು. ಅಂದು 80 ಕೋಟಿ ರೂ ಗಳ ಕಾಮಗಾರಿಗಳ ಉದ್ಘಾಟನೆ,
350 ಕೋಟಿ ರೂ ಕಾಮಗಾರಿಗಳ ಶಂಕುಸ್ಥಾಪನೆ ನಡೆಯಲಿದೆಂದು ತಿಳಿಸಿದರು.

ಹೆಚ್ಚಿನ ನೀರಾವರಿ ಪ್ರದೇಶ, ಗಣಿ ಪ್ರದೇಶ, ಕೈಗಾರಿಕೆ ಹೊಂದಿ ಬಳ್ಳಾರಿ ಜಿಲ್ಲೆಯೇ ಆರ್ಥಿಕವಾಗಿ ಸದೃಡವಾಗಿದೆಂದರು.

ಹೊಸಪೇಟೆ ಜಿಲ್ಲಾ ಕೇಂದ್ರ ಆಗುವುದರಿಂದ ನಗರದ ಸುತ್ತಮುತ್ತಲ ಜಮೀನಿಗೆ ಹೆಚ್ಚಿನ ಬೆಲೆ ಬರಲಿದೆ. ಅದಕ್ಕಾಗಿ ಈಗಲೇ ಮಾರಾಟ ಮಾಡಿಕೊಳ್ಳಬೇಡಿ ಎಂದರು.
ಮಹಾನಗರ ಪಾಲಿಕೆ ವಿಚಾರ ಸಧ್ಯಕ್ಕೆ ಕೈ ಬಿಡಲಾಗಿದೆ.

ಸಮಾರಂಭದಲ್ಲಿ ಸಂಸದ ವೈ ದೇವೇಂದ್ರಪ್ಪ, ಹುಡಾ ಅಧ್ಯಕ್ಷ ಅಶೋಕ್ ಜೀರೆ,
ವಿಶೇಷ ಅಧಿಕಾರಿ ಅನಿವೃದ್ದ್ ಶ್ರವಣ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ್, ಸಹಾಯಕ ಆಯುಕ್ತ ಸಿದ್ರಾಮೇಶ, ಎಎಸ್ಪಿ ಲಾವಣ್ಯ. ತಹಸಿಲ್ದಾರ್ ವಿಶ್ವನಾಥ್ ಮೊದಲಾದವರು ಇದ್ದರು.