ಗಾಂಧಿ ಕುಟುಂಬ ಕ್ಷಮೆಯಾಚಿಸಿದ ನಳಿನಿ


ವೆಲ್ಲೂರು ನ, ೧೩- ನನ್ನ ತಪ್ಪಿಗಾಗಿ ಅವರ ಕ್ಷಮೆ ಕೋರುತ್ತಿದ್ದೇನೆ ಸದ್ಯಕ್ಕೆ. “ಗಾಂಧಿ ಕುಟುಂಬದ ಸದಸ್ಯರನ್ನು ಭೇಟಿಯಾಗುವ ಬಗ್ಗೆ ಯೋಚನೆ ಮಾಡಿಲ್ಲ. ಆತ್ಮೀಯರನ್ನು ಕಳೆದುಕೊಂಡ ನೋವಿನಿಂದ ಅವರು ಹೊರ ಬರುತ್ತಾರೆ ಎಂದು ಭಾವಿಸಿದ್ದೇನೆ…
ಅತಿ ಹೆಚ್ಚು ವರ್ಷಗಳ ಕಾಲ ಜೀವಾವಧಿ ಶಿಕ್ಷೆ ಅನುಭವಿಸಿದ ದೇಶದ ಮಹಿಳಾ ಕೈದಿ ನಳಿನಿ ಶ್ರೀಹರನ್ ವೆಲ್ಲೂರು ಜೈಲಿನಿಂದ ಬಿಡುಗಡೆಗೊಂಡ ನಂತರ ನೀಡಿದ ಹೇಳಿಕೆ ಇದು.ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ೩೨ ವರ್ಷಗಳ ಜೈಲು ವಾಸ ಅನುಭವಿಸಿ ಬಿಡುಗಡೆಯಾದ ೬ ಅಪರಾಧಿಗಳ ಪೈಕಿ ಒಬ್ಬರಾದ ನಳಿನಿ ಶ್ರೀಹರನ್ ಕೂಡ ಒಬ್ಬರು. ಹತ್ಯೆ ಪ್ರಕರಣದಲ್ಲಿ, ೩೨ ವರ್ಷಗಳ ಶಿಕ್ಷೆಯ ಸಮಯದಲ್ಲಿಸಹಾಯ” ಮಾಡಿದ ತಮಿಳುನಾಡು ಮತ್ತು ಕೇಂದ್ರ ಸರ್ಕಾರಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಭಾರತದಲ್ಲಿ ವಾಸಿಸುವೆ, ವಿದೇಶಕ್ಕೆ ತೆರಳುವ ಬಗ್ಗೆ ಯಾವುದೇ ಯೋಜನೆಗಳಿಲ್ಲ. ತನ್ನ ಕುಟುಂಬದವರೆಲ್ಲರೂ ತನಗಾಗಿ ಬಹಳ ಸಮಯದಿಂದ ಕಾಯುತ್ತಿದ್ದಾರೆ ಮತ್ತು ಈಗ ಅವರೊಂದಿಗೆ ಇರಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಗಾಂಧಿ ಕುಟುಂಬದ ಯಾರನ್ನಾದರೂ ಭೇಟಿಯಾಗುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ನಳಿನಿ ಹಾಗೆ ಮಾಡಲು ಯೋಜಿಸುತ್ತಿಲ್ಲ. “ನನ್ನ ಪತಿ ಎಲ್ಲಿಗೆ ಹೋದರೂ” ಅವರೊಂದಿಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಜೈಲಿನಲ್ಲಿರುವ ಅಪರಾಧಿಗಳ ಉತ್ತಮ ನಡತೆಯನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ಬಿವಿ ನಾಗರತ್ನ ಅವರ ದ್ವಿಸದಸ್ಯ ಪೀಠವು ನೀಡಿದ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನ್ಯಾಯಾಧೀಶರು ನಮ್ಮ ಪ್ರಕರಣಗಳನ್ನು ಅಧ್ಯಯನ ಮಾಡಿದ್ದಾರೆ “ತಪ್ಪು ಏನು ಎಂದು ಅವರಿಗೆ ತಿಳಿದಿದೆ” ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿ ಶ್ರೀಹರನ್ ಮತ್ತು ಇತರ ಐವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು.. ಜೈಲಿನಲ್ಲಿ ಉತ್ತಮ ನಡತೆ ಹೊಂದಿರುವ ಹಿನ್ನೆಲೆಯಲ್ಲಿ ಅವರನ್ನು ಸುಪ್ರೀಂಕೋರ್ಟ್ ಬಿಡುಗಡೆಗೊಳಿಸಿತ್ತು.
ರಾಜೀವ್ ಗಾಂಧಿ ಅವರನ್ನು ಮೇ ೨೧, ೧೯೯೧ ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (ಎಲ್‌ಟಿಟಿಇ) ಗುಂಪಿನ ಮಹಿಳಾ ಆತ್ಮಾಹುತಿ ಬಾಂಬರ್‌ನಿಂದ ಹತ್ಯೆ ಮಾಡಲಾಗಿತ್ತು. ಹತ್ಯೆಯ ಆರೋಪದಲ್ಲಿ ಮರಣದಂಡನೆಗೆ ಒಳಗಾಗಿ ಆ ಬಳಿಕ ಜೀವಾವಧಿ ಶಿಕ್ಷೆಗೆ ಒಳಗಾದವರಲ್ಲಿ ನಳಿನಿ ಶ್ರೀಹರನ್, ಆರ್‌ಪಿ ರವಿಚಂದ್ರನ್, ಜಯಕುಮಾರ್, ಸಂತನ್, ಮುರುಗನ್, ರಾಬರ್ಟ್ ಪಯಸ್ ಮತ್ತು ಎಜಿ ಪೆರಾರಿವಾಲನ್ ಸೇರಿದ್ದಾರೆ.
೨೦೦೦ ರಲ್ಲಿ, ನಳಿನಿ ಶ್ರೀಹರನ್ ಅವರ ಶಿಕ್ಷೆಯನ್ನು ಜೀವಾವಧಿಗೆ ಇಳಿಸಲಾಯಿತು. ನಂತರ ೨೦೧೪ ರಲ್ಲಿ, ಇತರ ಆರು ಅಪರಾಧಿಗಳ ಶಿಕ್ಷೆ ಸಹ ಕಡಿಮೆ ಮಾಡಲಾಯಿತು, ಮತ್ತು ಅದೇ ವರ್ಷದಲ್ಲಿ, ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಪ್ರಕರಣದ ಎಲ್ಲಾ ಏಳು ಅಪರಾಧಿಗಳನ್ನು ಬಿಡುಗಡೆ ಮಾಡಲು ಶಿಫಾರಸು ಮಾಡಿದ್ದರು.