ಗಾಂಧಿಯಿಂದ ಬುದ್ಧನವರೆಗೆ ನಡಿಗೆ

ವಿಜಯಪುರ.ಫೆ೨೨: ಭಗವಾನ್ ಬುದ್ಧ ಮತ್ತು ಮಹಾತ್ಮ ಗಾಂಧೀಜಿಯವರ ಮಾರ್ಗದರ್ಶನ ವನ್ನು ನಾವು ಸದಾ ಅನುಸರಿಸ ಬೇಕೆಂದು ವಿಜಯಪುರ ಪಟ್ಟಣದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ವೋದಯ ಮಂಡಳಿಯ ಅಧ್ಯಕ್ಷ ಡಾ.ವಿ.ಪ್ರಶಾಂತ ತಿಳಿಸಿದರು.
ಇವರು ನೇಪಾಳ ದೇಶದ ರಾಜಧಾನಿ ಕಟ್ಮಂಡುವಿನಲ್ಲಿ ವರ್ಲ್ಡ್ ಸೋಶಿಯಲ್ ಫೋರಂ ನೇಪಾಳ, ಭಾರತ ದೇಶದ ಭೂಪಾಲ್ ನ ರಾಷ್ಟ್ರೀಯ ಏಕತಾ ಪರಿಷತ್ತು ಮತ್ತು ನವದೆಹಲಿಯ ರಾಷ್ಟ್ರೀಯ ಯುವ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಸಾಮಾಜಿಕ ವೇದಿಕೆ ಕಾರ್ಯಕ್ರಮದ ಅಂಗವಾಗಿ ಗಾಂಧಿಯಿಂದ ಬುದ್ಧನವರೆಗೆ ವಿಶ್ವದ ೯೮ ದೇಶಗಳ ಅಂತರರಾಷ್ಟ್ರೀಯ ಸದ್ಭಾವನ ಜಾಗದಲ್ಲಿ ಶಾಂತಿ ಮತ್ತು ಅಹಿಂಸೆಯ ಸಂದೇಶವನ್ನು ಹರಡಲು ಗಾಂಧಿ ಮತ್ತು ಬುದ್ಧ ನವರಿಗೆ ಅಳವಡಿಸಿ ಕೊಂಡ ಮೌಲ್ಯಗಳಿಗೆ ಅನುಗುಣ ವಾಗಿ ವಿವಿಧ ಸಾಮಾಜಿಕ ನ್ಯಾಯ ಸಮಸ್ಯೆಗಳಿಗೆ ಜಾಗೃತಿ ಮೂಡಿಸುವ ಗುರಿಯನ್ನು ಈ ವಿಶ್ವ ಸಾಮಾಜಿಕ ವೇದಿಕೆಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಭೂಪಾಲ್ ನ ರಾಷ್ಟ್ರೀಯ ಏಕತಾ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಡಾ.ರಾಣ್ ಸಿಂಗ್ ಪರ್ಮಾರ್, ಮಾತನಾಡಿ ಈ ಅಂತರಾಷ್ಟ್ರೀಯ ವಿಶ್ವ ಸಾಮಾಜಿಕ ವೇದಿಕೆಯ ಯಲ್ಲಿ ವಿವಿಧ ದೇಶಗಳ ನಡುವಿನ ಸ್ನೇಹ ಸೌಹಾರ್ದತೆ ಮತ್ತು ಏಕತೆಯನ್ನು ನೋಡಲು ಇದು ಸುಂದರ ಕ್ಷಣವಾಗಿದೆ ಹಾಗೂ ಗಾಂಧಿಯಿಂದ ಬುದ್ಧನವರೆಗೆ ಈ ಅಂತರಾಷ್ಟ್ರೀಯ ಅಭಿಯಾನದಲ್ಲಿ ವಿಶ್ವದ ಉತ್ತಮ ಭವಿಷ್ಯದ ಕಡೆಗೆ ಶಾಂತಿ ಮತ್ತು ಅಹಿಂಸೆಯ ಸಂದೇಶವನ್ನು ಸಾರಲು ಆರಂಭಿಸಿದೆ ಎಂದು ತಿಳಿಸಿದರು.
ಈ ಅಂತರಾಷ್ಟ್ರೀಯ ಶಾಂತಿ ಜಾತದಲ್ಲಿ ವಿಶ್ವದ ೯೮ ದೇಶಗಳಿಂದ ೪೦,೦೦೦ ಗಾಂಧಿ ಮತ್ತು ನ ಬುದ್ಧ ಅನುಯಾಯಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ಯುವ ಸ್ವಯಂ ಸೇವಕರ ತಂಡ ಈ ಅಂತರಾಷ್ಟ್ರೀಯ ಕಾರ್ಯಕ್ರಮ ದಲ್ಲಿ ಹಾಜರಿದ್ದರು.
ಭಾರತ ದೇಶದ ರಾಷ್ಟ್ರೀಯ ಏಕತಾ ಪರಿಷತ್ತಿನ ಸಂಸ್ಥಾಪಕ ಪಿ.ವಿ ರಾಜಗೋಪಾಲ್ ಇವರ ನೇತೃತ್ವದಲ್ಲಿ ದೇಶದ ವಿವಿಧ ರಾಜ್ಯಗಳ ೩೦೦ ಮಂದಿ ಗಾಂಧಿವಾದಿ ಶಾಂತಿ ಪರಿಪಾಲಕ ರಾದ ಭಾರತ ದೇಶದ ದಿ.ಡಾ.ಎಸ್.ಎನ್ ಸುಬ್ಬರಾವ್ ರವರ ರಾಷ್ಟ್ರೀಯ ಯುವ ಯೋಜನೆಯ ದೇಶದ ವಿವಿಧ ರಾಜ್ಯಗಳ ಪ್ರತಿನಿಧಿಗಳಾದ ಧಮೇಂದ್ರ ಬಾಯ್, ಪ್ಯಾರಿ ಜಾನ್, ಗಿರೀಶ್ ,ಸಂತೋಷ್,ಮುಖೇಶ್,ಉಷಾ, ಸಂಜಯ್ ಬಬ್ಲು, ಕೀರ್ತಿ ವಿಕ್ರಮ್, ನಿಶಾದ್, ಆಶಾ ಸಿಂಗ್, ಕಮಲ್, ಶೀತಲ್ ಜೈನ್, ರವೀಂದ್ರ ಸಕ್ಸೇನಾ,ಡೊಂಗರ್ ಶರ್ಮಾ ವಿಜಯ್ ಲತಾ, ಕಾಶಿಕ್, ಕರೀಮ್ ಬಾಯಿ, ಶರತ್ ರೌತ್ ಓಂ ಪ್ರಕಾಶ್ ಸೇಥಿ,ವಿಜಯ್ ಕುಮಾರ್, ಜೋಸನ್ ಆಂಟೊನಿ, ಗೌತಮ್ ಖಂಡಪ್ಪ, ವಿಶಾಲ್ ಜೈನ್ ಹಾಗೂ ವಿನೋದ್ ಮೊದಲಾದವರು ಹಾಜರಿದ್ದರು.