ಗಾಂಧಿನಗರ ಕಳ್ಳತನ ಭದ್ರತೆಗೆ ಮನವಿ ಭಾಸ್ಕರ ರಾವು

ಸಿಂಧನೂರ.ನ.೧೨- ಗಾಂಧಿನಗರ ದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದರಿಂದ ಜನ ಭಯಬೀತರಾಗಿದ್ದು ಆದ್ದರಿಂದ ಗಾಂಧಿನಗರಕ್ಕೆ ಪೋಲೀಸ್ ಭದ್ರತೆಯನ್ನು ಒದಗಿಸುವಂತೆ ಗಾಂಧಿನಗರ ಶಿವಾಲಯ ಸಮಿತಿ ಅಧ್ಯಕ್ಷ ರಾದ ಎಂ. ಬಾಷ್ಕರ ರಾವು ಪೋಲಿಸ್ ಇಲಾಖೆಯ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಗಾಂಧಿನಗರ ಶಿವಾಲಯದ ಕಲ್ಯಾಣ ಮಂಟಪದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಲವು ದಿನಗಳ ಹಿಂದೆ ನನ್ನ ಮೇಲೆ ಹಲ್ಲೆ ನಡೆಸಿ ಹಣ.ಬಂಗಾರವನ್ನು ಕಳ್ಳರು ದೋಚಿ ಕೊಂಡು ಹೊಗಿದ್ದು ಭದ್ರತೆ ಇರುವ ನನ್ನ ಮನೆ ಕಳುವಾದ ಮೇಲೆ ಜನ ಸಾಮಾನ್ಯರ ಗತಿ ಏನು ಎಂದು ಅವರು ಪೋಲೀಸರು ಲಘುವಾಗಿ ಪರಿಗಣಿಸದೆ ಗಂಭೀರ ವಾಗಿ ತೆಗೆದುಕೊಳ್ಳಬೇಕು ಎಂದು ಅವರು ಪೋಲೀಸರಲ್ಲಿ ಸಾರ್ವಜನಿಕರ ಪರವಾಗಿ ಮನವಿ ಮಾಡಿಕೊಂಡರು.
ಗಾಂಧಿನಗರ ಅತಿ ಶ್ರೀಮಂತ ಕ್ಯಾಂಪ್ ಆಗಿದ್ದು ಅಲ್ಲದೆ ಶಿವಾಲಯ ದೇವಸ್ಥಾನ ನಿರ್ಮಾಣವಾದ ಮೇಲೆ ಬಹಳಷ್ಟು ಪ್ರಸಿದ್ದಿ ಪಡೆದುಕೊಂಡಿದೆ ಗಾಂಧಿನಗರ ಹಾಗೂ ಸುತ್ತಮುತ್ತಲಿನ ಜನರಿಗೆ ರಾತ್ರಿಯ ಸಮಯದಲ್ಲಿ ಸೂಕ್ತ ಭದ್ರತೆ ಇಲ್ಲವಾಗಿದೆ.
ಮುಂದಿನ ದಿನಗಳಲ್ಲಿ ರಾತ್ರಿಯ ಸಮಯದಲ್ಲಿ ಪೋಲಿಸ್ ಭದ್ರತೆಯನ್ನು ನೀಡಿದರೆ ಜನ ಸುರಕ್ಷತೆವಾಗಿರುತ್ತಾರೆ ಅಲ್ಲದೆ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಸಾಧ್ಯ.
ಕೋಲಾರದಲ್ಲಿ ಪಿಎಸ್‌ಐ ಮನೆಯಲ್ಲಿ ಕಳ್ಳತನ ವಾದಾಗ ಒಂದೆ ದಿನದಲ್ಲಿ ಕಳ್ಳರನ್ನು ಇಡಿದು ಪೋಲಿಸರು ನಮ್ಮ ಮನೆ ಕಳ್ಳತನ ವಾಗಿ ನಾಲ್ಕಾರು ದಿನವಾದರು ಕಳ್ಳತನ ಬಗ್ಗೆ ಇನ್ನು ಸುಳಿವು ಸಿಕ್ಕಿಲ್ಲ ಅಂದರೆ ಏನು ಅರ್ಥ ನಮ್ಮ ಜನ ಕೂಡ ರಾಜಕೀಯ ಮುಖಂಡರ ಕೈಚೀಲ ವಾಗಿದ್ದು ಅವರು ಚುನಾವಣೆಯಲ್ಲಿ ಮಾತ್ರ ಬರುತ್ತಾರೆ ಕಳ್ಳತನದ ಬಗ್ಗೆ ಸ್ವಲ್ಪನು ತಲೆ ಕೆಡಿಸಿಕೊಂಡಿಲ ಪೋಲೀಸರ ಮೇಲೆ ಒತ್ತಡ ಹಾಕಿ ಕಳ್ಳತನ ಬೇದೀಸಲು ಹೇಳುತ್ತಿಲ್ಲ ಯಾಕೆ ನಮ್ಮ ಫಾಲಿಗೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪೋಲೀಸರು ಇದ್ದರು ಇಂದು ಇಲದಂತಾಗಿದ್ದಾರೆ. ಎಂಧು ಬಾಷ್ಕರ ರಾವು ಹಾಗೂ ಇತರರು ಬೇಸರ ವ್ಯಕ್ತಪಡಿಸಿದ್ದರು.
ಬಿ.ಸೂರ್ಯ ಚಂದ್ರ ರಾವು .ಹರಿಶ್ಚಂದ್ರ ರಾವು ಗೋಪಿ ನೀಡಿ ಕೃಷ್ಣ. ಎನ್. ಸುಬ್ಬರಾವ್. ಜಿ.ಸತ್ಯನಾರಾಯಣ. ಸೇರಿದಂತೆ ಇತರರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.