
ಮೈಸೂರು: ಏ.15:- ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಇಲ್ಲಿನ ಗಾಂಧಿನಗರದಲ್ಲಿ ಶುಕ್ರವಾರ ಮಹಾನಾಯಕನ ಭವ್ಯ ಮೆರವಣಿಗೆ ನಡೆಯಿತು.
ಡಾ.ಬಿ.ಆರ್.ಅಂಬೇಡ್ಕರ್ ಗಾಂಧಿನಗರ ಹಿತರಕ್ಷಣಾ ಸಮಿತಿಯು ಏರ್ಪಡಿಸಿದ್ದ ಈ ಮೆರವಣಿಗೆ ಅಲ್ಲಿನ ಬಸ್ ನಿಲ್ದಾಣದಲ್ಲಿ ಕೆಎಸ್‍ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್. ರವಿ ಚಾಲನೆ ನೀಡಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕರ್ನಾಟಕ ರಾಜ್ಯ ಮುಕ್ತ ವಿವಿ ಪರೀಕ್ಷಾಂಗ ಕುಲಸಚಿವ ಪೆÇ್ರ.ಕೆ.ಬಿ. ಪ್ರವೀಣ, ವಾಣಿವಿಲಾಸ ನೀರು ಸರಬರಾಜು ಕಾರ್ಯಾಗಾರದ ಎಇಇ ಕೆ.ಅರುಣ್‍ಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಪಾಲಿಕೆ ಸದಸ್ಯೆ ಡಾ.ಅಶ್ವಿನಿಶರತ್, ಮಾಜಿ ಸದಸ್ಯ ಸಿದ್ದಪ್ಪ, ನರಸಿಂಹರಾಜ ಠಾಣೆ ಇನ್‍ಸ್ಪೆಕ್ಟರ್ ಲಕ್ಷ್ಮಿಕಾಂತ ತಳವಾರ್, ಎಸ್‍ಐ ರಾಜು, ಸಮಿತಿಯ ಅಧ್ಯಕ್ಷ ಶರತ್ ಸತೀಶ್, ಪ್ರಧಾನ ಕಾರ್ಯದರ್ಶಿ ಸಿ. ದೇವರಾಜು, ಪದಾಧಿಕಾರಿಗಳಾದ ಪಿ.ರಾಜೇಶ್, ಬಿ.ವಿಜಯಕುಮಾರ್, ಎಸ್.ಮಂಜುನಾಥ್, ರಂಗಸ್ವಾಮಿ, ಭೀಮರಾಜ್, ಎನ್.ಪಿ.ಸುರೇಶ್ ಮೊದಲಾದವರು ಇದ್ದರು.
ಭವ್ಯವಾಗಿ ಅಲಂಕರಿಸಲಾದ ವಾಹನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ, ವಿವಿಧ ಜಾನಪದ ಕಲಾತಂಡಗಳೊಂದಿಗೆ ಹೊರಟ ಮೆರವಣಿಗೆಯು ಗಾಂಧಿನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಪುಲಿಕೇಶಿ ರಸ್ತೆ, ಅಶೋಕ ರಸ್ತೆಯ ಮೂಲಕ ಪುರಭವನದ ಬಳಿ ಅಂತ್ಯವಾಯಿತು.