ಗಾಂಧಿಜೀಯವರ ಜೀವನಾದರ್ಶಗಳು ರೂಢಿಸಿಕೊಳ್ಳಬೇಕು:ಎಲ್.ಆರ್.ನಾಯಕ

ಸೈದಾಪುರ:ಅ.3:ಸತ್ಯ, ಶಾಂತಿ ಅಹಿಂಸೆಯ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿಜೀಯವರ ಜೀವನಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಅವರ ತತ್ವಗಳು ವಿಶ್ವಕ್ಕೆ ಮಾದಿರಿಯಾಗಿವೆ ಮುಖ್ಯಗುರು ಲಿಂಗಾರೆಡ್ಡಿ ನಾಯಕ ಅಭಿಪ್ರಾಯಪಟ್ಟರು.

ಪಟ್ಟಣದ ವಿದ್ಯಾ ವರ್ಧಕ ಸಂಸ್ಥೆಯ ವಿವಿಧ ವಿಭಾಗಗಳ ವತಿಯಿಂದ ಹಮ್ಮಿಕೊಂಡ ಗಾಂಧೀಜಿ ಹಾಗೂ ಲಾಲಬಹುದ್ದೂರ ಶಾಸ್ತ್ರೀ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದೇಶದ ಸ್ವಾಂತಂತ್ರ್ಯಕ್ಕಾಗಿ ತಮ್ಮದೆಯಾದ ಮಹತ್ವ ನೀಡಿದ ಮಹಾನ ವ್ಯಕ್ತಿಗಳ ಸಾಧನೆ ವಿಶೇಷತೆಯನ್ನುಂಟು ಮಾಡುವಂತಿದೆ. ಅವರ ಆದರ್ಶಗಳು ನಮ್ಮದಾಗಬೇಕು ಎಂದು ಹೇಳಿದರು.

ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ, ಜಿ.ಎಂ.ಗುರುಪ್ರಸಾದ, ವಿಶ್ವನಾಥರೆಡ್ಡಿ ಪಾಟೀಲ, ಆನಂದ ಪಾಟೀಲ, ಅನುರಾಧ, ಉನ್ಯಾಸಕರಾದ ಸದಾಶಿವ, ಭೀಮರೆಡ್ಡಿ, ಹಣಮಂತ, ಹೊನ್ನಪ್ಪ, ವೆಂಕಟೇಶ ಸಗರ, ಸುನಿತಾ, ವನಜಾಕ್ಷಿ, ಸಂಗೀತಾ ಸೇರಿದಂತೆ ಇತರರಿದ್ದರು.