ಗಾಂಧಿಚೌಕ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ

ವಿಜಯಪುರ:ಜು.5: ನಗರದ ಗಾಂದಿಚೌಕ್ ಮಹಿಳಾ ಪೊಲೀಸ್ ಠಾಣೆಯಲ್ಲಿ ವಿಜಯಪುರ ತಾಲೂಕಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ವತಿಯಿಂದ ಶಿವಶರಣ ಹಡಪದ ಅಪ್ಪಣ್ಣನವರ 889ನೇ ಜಯಂತಿಯನ್ನು ಆಚರಣೆ ಮಾಡಲಾಯಿತು.
ವೇಳೆಯಲ್ಲಿ ಜಿಲ್ಲಾ ಮಹಿಳಾ ಸಂಘದ ಅಧ್ಯಕ್ಷರಾದ ಭಾರತಿ ಮ. ಹಡಪದ ಮಾತನಾಡಿ, ಅಪ್ಪಣ್ಣನವರ ಜೀವನವು ಸರಳ ಸಜ್ಜನಿಕೆಯಿಂದ ಕೂಡಿತು. ಹಡಪದ ಅಪ್ಪಣ್ಣನವರನ್ನು ಬಸವಣ್ಣನವರು ತಮ್ಮ ಆಪ್ತ ಕಾರ್ಯದರ್ಶಯನ್ನಾಗಿ ನೇಮಕ ಮಾಡಿಕೊಂಡಿದ್ದರು. ಇದು ಅವರಿಬ್ಬರ ಆಪ್ತತತೆಯು ಎಷ್ಟತ್ತು ಎನ್ನುವದು ತೋರಿಸುತ್ತದೆ. ಕಾರಣ ಶರಣರು ಹಾಕಿಕೊಂಡ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಸಿಪಿಐ ರಾಯಗೊಂಡ ಜಾನರ, ಸಂಘದ ಅಧ್ಯಕ್ಷರಾದ ದಯಾನಂದ ಸಿ. ಹಡಪದ, ಉಪಾಧ್ಯಕ್ಷ ಮಹಾರಾಜ್ ಹಡಪದ, ಸದಸ್ಯರಾದ ಬಸವರಾಜ ಹಡಪದ, ಧರೆಪ್ಪ ಹಡಪದ ಹಾಜರಿದ್ದರು.